ದಕ್ಷಿಣ ಭಾರತದಲ್ಲಿ ಚೆನ್ನಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ದೇವೆ; ಆದ್ರೂ ಅನುದಾನದಲ್ಲೇಕೆ ತಾರತಮ್ಯ: ಸಿದ್ದರಾಮಯ್ಯ

ಉತ್ತರ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಮಾಡಲಿಲ್ಲ. ಆದರೆ, ನಮ್ಮ ದಕ್ಷಿಣ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಚನ್ನಾಗಿ ಮಾಡಿದ್ದೇವೆ.  ಆದರೂ, ಉತ್ತರ ಭಾರತಕ್ಕೆ ಹೆಚ್ಚಿನ ಅನುದಾನ ನೀಡಿ, ನಮಗೆ ತಾರತಮ್ಯ ಮಾಡಲಾಗುತ್ತಿದೆ.

South India are done good family planning but why discrimination in grant CM Siddaramaiah sat

ಬೆಂಗಳೂರು (ಫೆ.05): ಉತ್ತರ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಮಾಡಲಿಲ್ಲ. ಆದರೆ, ನಮ್ಮ ದಕ್ಷಿಣ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಚನ್ನಾಗಿ ಮಾಡಿದ್ದೇವೆ. ಇದರಿಂದಾಗಿ ಎಷ್ಟೇ ಸಂಪನ್ಮೂಲವಿದ್ದರೂ ಜಾಣ್ಮೆಯಿಂದ ಜನಸಂಖ್ಯೆ ಹೆಚ್ಚಳ ಆಗುವುದನ್ನು ತಡೆಗಟ್ಟಿದ್ದೇವೆ. ಆದರೆ, ಈಗ ಉತ್ತರ ಭಾರತಕ್ಕೆ ಹೆಚ್ಚಿನ ಅನುದಾನ ನೀಡಿ ನಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಉತ್ತರ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಮಾಡಲಿಲ್ಲ. ಆದರೆ, ನಮ್ಮ ದಕ್ಷಿಣ ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಚನ್ನಾಗಿ ಮಾಡಿದ್ದೇವೆ. ಕೋಳಿ ಚನ್ನದ ಮೊಟ್ಟೆ ಇಡುತ್ತೆ ಅಂತ ಕೋಳೆನೇ ಕೊಯ್ದು ಬಿಟ್ಟರೆ ಸತ್ತೇ ಹೋಗುತ್ತದೆ. ಹಾಲು ಚನ್ನಾಗಿ ಕೊಡುತ್ತೆ, ಅಂತ ಕೆಚ್ಚಲೆ ಕೊಯ್ದು ಬಿಟ್ಟರೆ ಏನಾಗಬಹುದು ನೀವೇ ನೋಡಿ. ಆದರೆ, ನಾವು ಹಾಗಾಗುವುದಕ್ಕೆ ಬಿಡುವುದಿಲ್ಲ. ಅನುದಾನಕ್ಕಾಗಿ ಪತ್ರ ಬರೆದು ಉತ್ತರ ಕೊಡೋದಿಲ್ಲ. ಸಂಬಂಧಪಟ್ಟ ಕೇಂದ್ರ ಸಚಿವರ ಭೇಟಿಗೂ ಅವಕಾಶ ಕೊಡೋದಿಲ್ಲ. ರಾಜ್ಯಕ್ಕೆ ಬರಗಾಲ ಬಂದಿದೆ ಇದುವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದು ಮಲತಾಯಿ ಧೋರಣೆ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಅಂಧಭಕ್ತರ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ, ದಕ್ಷಿಣದ ರಾಜ್ಯಗಳಿಗೆ ಮಲತಾಯಿ ಧೋರಣೆ: ಬಿ.ಕೆ. ಹರಿಪ್ರಸಾದ್

ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾನು ಉತ್ತರ ಭಾರತಕ್ಕೆ ಅನುದಾನ ಕೊಡಬೇಡಿ ಎಂದು ಹೇಳಿಲ್ಲ. ಆದರೆ, ನಮ್ಗೆ ಅನ್ಯಾಯ ಮಾಡಬೇಡಿ ಎಂದು ಹೇಳುತ್ತಿದ್ದೇನೆ. ಈಗ ನಮಗಾಗಿರುವ ಅನ್ಯಾಯ ಸರಿಪಡಿಸಿ ಹೇಳುತ್ತಿದ್ದೇನೆ. ದೇಶದ ಬಡ ರಾಜ್ಯಗಳಿಗೆ ಹಣ ಕೊಡಿ ಬೇಡ ಅನ್ನೋದಿಲ್ಲ, ಆದರೆ ನಮಗೆ ಬರಗಾಲ ಆವರಿಸಿದ್ದು, ಅನುದಾನ ನೀಡುವಂತೆ ಕೇಳುತ್ತಿದ್ದೇನೆ ಎಂದು ಹೇಳಿದರು. 

ನಮ್ಮ ರಾಜ್ಯದಲ್ಲಿ 223 ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಬರ ಅಧ್ಯಯನ ತಂಡ ಸಹ ರಾಜ್ಯಕ್ಕೆ ಬಂದು ಹೋಗಿತ್ತು. ಆದ್ರೆ ಇದುವರೆಗೂ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿಲ್ಲ. ನಮ್ಮ ಮಿನಿಸ್ಟರ್ ಶಬರಿ ತರಹ ಕಾದು ಕೇಂದ್ರ ಮಿನಿಸ್ಟರ್ ಗಳಿಗೆ ಮನವಿ ಕೊಟ್ಟು ಬಂದಾಗಿದೆ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿ ಮನವಿ ಕೊಟ್ಟು ಬಂದಿದ್ದೇನೆ. ಜೊತೆಗೆ, ರಾಜ್ಯಕ್ಕೆ ಪ್ರಧಾನಿ ಬಂದಾಗ್ಲೂ ಮನವಿ ಮಾಡಿದ್ದೇನೆ. ಆದರೂ ಇದುವರೆಗೂ ರಾಷ್ಟ್ರೀಯ ವಿಪತ್ತು ನಿರ್ಬಹಣಾ ಪ್ರಾಧಿಕಾರ (NDRF)ನಿಂದ ಒಂದು ರೂಪಾಯಿ ಬಂದಿಲ್ಲ.

ಬೆಂಗಳೂರು ಎಳೇನಹಳ್ಳಿ ಕೆರೆ ಮುಚ್ಚುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು: ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿದ್ದೀರಾ?

ರಾಜ್ಯದಲ್ಲಿ ಬರಗಾಲದಿಂದ 17,901 ಕೋಟಿ ರೂ. ನಷ್ಟವಾಗಿದೆ. ಇದಕ್ಕೆ ಪರಿಹಾರ ಕೊಡಲಿಲ್ಲ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ. ನಮ್ಮ ರಾಜ್ಯದಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪ ಗೋಗರೆದ್ರು ಹಣ ಕೊಡಲಿಲ್ಲ. ಇವರಿಗೆ ಜೋರಾಗಿ ಮಾತನಾಡಲು ಧೈರ್ಯಬೇಕು. ಆದರೆ, ಬೊಮ್ಮಾಯಿನೂ ಮಾತನಾಡಲಿಲ್ಲ. ರಾಜ್ಯದ ಪ್ರವಾಹ ಸಂದರ್ಭದಲ್ಲೂ NDRF ಹಣ ಕೊಡಲಿಲ್ಲ. ಈಗ ಬರಗಾಲಕ್ಕೂ ಹಣ ಕೊಡದೇ ತಾರತಮ್ಯ ಮಾಡುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಗಿ ಟೀಕಿಸಿದ ಸಿದ್ದರಾಮಯ್ಯ: ರಾಜ್ಯದ ಬಿಜೆಪಿ ನಾಯಕ ಪಾಪ ಯಡಿಯೂರಪ್ಪಗೆ ಬಾಯಿ ಇಲ್ಲ. ಇನ್ನು ಬೊಮ್ಮಾಯಿಗೆ ಬಾಯಿ ಇಲ್ವೇ ಇಲ್ಲ. ವಿಪಕ್ಷ ನಾಯಕ ಅಶೋಕ್‌ಗೆ ಗೊತ್ತೇ ಇಲ್ಲ. ಜೊತೆಗೆ ಪ್ರಹ್ಲದ್ ಜೋಶಿ, ಶೋಬಾ ಕರಂದ್ಲಾಜೆ  ಹಾಗೂ ಖೂಬಾ ಅವರು ಒಂದು ದಿವಸನೂ ಮಾತನಾಡೇ ಇಲ್ಲ. ಈಗ ರಾಜ್ಯದಿಂದ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ನಮ್ಮ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ರೆ ಏನು ಮಾಡೋದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios