ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ನ ಮಹಿಳಾ ಸಿಬ್ಬಂದಿ ಕೆನ್ನೆಗೆ ಹೊಡೆದ ಕುರಿತು ನೂತನ ಸಂಸದೆ ಕಂಗನಾ ರಣಾವತ್​ ನೀಡಿದ ಪ್ರತಿಕ್ರಿಯೆ ಏನು?
 

Kangana Ranauts  Reaction After Being Slapped At Chandigarh Airport By CISF Personnel suc

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಬಹುಮತದಿಂದ ಜಯ ಗಳಿಸಿರುವ ನಟಿ, ನೂತನ ಸಂಸದೆ ಕಂಗನಾ ರಣಾವತ್​ ಅವರಿಗೆ ನಿನ್ನೆ ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಕೆನ್ನೆಗೆ ಹೊಡೆದಿರುವ ಘಟನೆ ಆತಂಕ ಸೃಷ್ಟಿಸಿದೆ. ಕಂಗನಾ ಅವರು ಚಂಡೀಗಢದಿಂದ ದೆಹಲಿಗೆ ಯುಕೆ707 ಸಂಖ್ಯೆಯ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ನಿಲ್ದಾಣ ಪ್ರವೇಶಿಸಿದ ಸಂದರ್ಭದಲ್ಲಿ ಸೆಕ್ಯುರಿಟಿ ಚೆಕ್​ ಇದ್ದಾಗ ಸಿಬ್ಬಂದಿಯೊಬ್ಬರು ಅವರ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಪಂಜಾಬ್​ನಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ, ಇದರಲ್ಲಿ ವಿದೇಶಿಗರ ಕೈವಾಡ ಇರುವ ಬಗ್ಗೆ ಹಲವಾರು ವರದಿಗಳು ಬಂದಿದ್ದವು. ಅದನ್ನೇ ಆಧರಿಸಿ ನಟಿ ಕಂಗನಾ ಅವರು, ರೈತರ ವಿರುದ್ಧ ಮಾತನಾಡಿದ್ದರು.  ಇದರಿಂದ ಕೆರಳಿದ್ದ ಸಿಬ್ಬಂದಿ ಹೀಗೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ಅಲ್ಲಿರುವವರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಗ, ಕಂಗನಾ ಅಂದು ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರು. 2020 ರಲ್ಲಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ರಾಷ್ಟ್ರವ್ಯಾಪಿ ಪ್ರತಿಭಟನೆಯ ಬಗ್ಗೆ ನಡೆಯುತ್ತಿದ್ದ ಪ್ರತಿಭಟನೆ ಅದು. ಆಗ ದುಡ್ಡು ಪಡೆದು ಪ್ರತಿಭಟನೆಗೆ ಬಂದಿರುವುದಾಗಿ ನಟಿ ಹೇಳಿದರು. ಆ ದಿನ ನಡೆದ ಪ್ರತಿಭಟನೆಯನ್ನು ನನ್ನ ತಾಯಿ ಕೂಡ ಇದ್ದರು. ಅದಕ್ಕಾಗಿ ನನಗೆ ನಟಿಯ ಮೇಲೆ ಸಿಟ್ಟು ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಂಗನಾ ರಣಾವತ್​ ಮೇಲೆ ನಡೆದಿರುವ ಈ ಹಲ್ಲೆಗೆ ನಟಿಯ ಅಭಿಮಾನಿಗಳು ಮತ್ತು ಬಿಜೆಪಿಯವರಿಂದ  ಭಾರಿ ಆಕ್ಷೇಪ ವ್ಯಕ್ತವಾಗಿದೆ. ಕಂಗನಾ ಅವರ ಸಹೋದರಿ ಕೂಡ ಭದ್ರತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.  

ಗೆಲುವಿನ ಸಂಭ್ರಮದಲ್ಲಿರುವ ಕಂಗನಾಗೆ ಶಾಕ್, ವಿಮಾನ ನಿಲ್ದಾಣದಲ್ಲಿ ಸಂಸದೆ ಮೇಲೆ ಹಲ್ಲೆ!

ಘಟನೆಯ ಬಳಿ ನಟಿ ಕಂಗನಾ ಅವರು ಸೋಷಿಯಲ್​  ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯ ಬಗ್ಗೆ ಹಲವಾರು ಫೋನ್​ ಕಾಲ್​ಗಳು ಬರುತ್ತಿವೆ. ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ವಿಮಾನ ನಿಲ್ದಾಣದಲ್ಲಿ  ಚೆಕ್ ಇನ್ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಅಲ್ಲಿಂದ ಬೋರ್ಡಿಂಗ್ ಪಾಯಿಂಟ್‌ಗೆ ಹೋಗುವ ಸಮಯದಲ್ಲಿ ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ನಾನು ವಿಚಲಿತಳಾಗಿ ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ನಾನು ರೈತ ಹೋರಾಟದ ಪರ ಇರುವವಳು, ರೈತರನ್ನು ಬೆಂಬಲಿಸುವುದಾಗಿ ಹೇಳಿದರು. ನಾನೇನೋ ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್​ನಲ್ಲಿ ಭಯೋತ್ಪಾದನೆಯ ಮತ್ತು ಆತಂಕವಾಗಿ ಬೆಳೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಅದನ್ನು ಹೇಗೆ ಹತ್ತಿಕ್ಕುವುದು ಎನ್ನುವುದು ಯೋಚನೆ ಮಾಡಬೇಕಾದ ವಿಷಯ ಎಂದಿದ್ದಾರೆ. 

ಅಂದಹಾಗೆ, ನಟಿ ಕಂಗನಾ  ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಭಾರಿ ಗೆಲುವು ಪಡೆದುಕೊಂಡಿದ್ದಾರೆ. ತಮ್ಮ 37ನೇ ವಯಸ್ಸಿನಲ್ಲಿ ಸಂಸದೆಯಾಗಿ ಸಂಸತ್‌ ಭವನ ಪ್ರವೇಶಿಸಲಿದ್ದಾರೆ.  ತಮ್ಮ ಪ್ರತಿಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ್ದಾರೆ. 5,37,022 ಮತಗಳನ್ನು ಪಡೆದುಕೊಂಡಿದ್ದಾರೆ. ನಟಿಯ ಎಮರ್ಜೆನ್ಸಿ ಚಿತ್ರ ಶೀಘ್ರದಲ್ಲಿ ತೆರೆ ಕಾಣಲಿದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನಟನೆ ತ್ಯಜಿಸುವುದಾಗಿ ಹೇಳಿದ್ದರು. ಅವರ ನಿಲುವು ಇನ್ನಷ್ಟೇ ಪ್ರಕಟವಾಗಬೇಕಿದೆ. 

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

Latest Videos
Follow Us:
Download App:
  • android
  • ios