ಲೋಕಸಭೆಯ 28 ಸ್ಥಾನಗಳಲ್ಲೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ: ಶಾಸಕ ರಾಜು ಕಾಗೆ

ದೇಶದಲ್ಲೆಡೆ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ರಾಜ್ಯದ ಯೋಜನೆಗಳು ಬೇರೆ ರಾಜ್ಯಗಳ ಚುನಾವಣೆಯಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ದೇಶದ ಚುಕ್ಕಾಣಿಯನ್ನು ಹಿಡಿಯಲು ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದ ಕಾಗವಾಡ ಶಾಸಕ ರಾಜು ಕಾಗೆ 

Kagwad MLA Raju Kage Talks Over Lok Sabha Elections 2024 grg

ಕಾಗವಾಡ(ನ.20):  ಮುಂಬರುವ ಲೋಕಸಭಾ ಚುನಾವಣೆ ಎಂಬ ದೊಡ್ಡ ಯುದ್ಧ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡು ಸಜ್ಜಾಗಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದರು.

ಭಾನುವಾರ ಐನಾಪುರ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ₹ 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬದಲಾವಣೆ ಬಯಸಿ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಐದು ಗ್ಯಾರಂಟಿಗಳನ್ನು ಎರಡೇ ತಿಂಗಳಲ್ಲಿ ಅನುಷ್ಠಾನ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದರು.

'ಮೋದಿ ಗೆಲ್ಲಿಸಿ ಭಾರತ ಉಳಿಸಿ' ; ಶ್ರೀರಾಮ ಸೇನೆಯಿಂದ ಅಭಿಯಾನ ಶುರು: ಪ್ರಮೋದ್ ಮುತಾಲಿಕ್

ದೇಶದಲ್ಲೆಡೆ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ರಾಜ್ಯದ ಯೋಜನೆಗಳು ಬೇರೆ ರಾಜ್ಯಗಳ ಚುನಾವಣೆಯಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ದೇಶದ ಚುಕ್ಕಾಣಿಯನ್ನು ಹಿಡಿಯಲು ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಬಹಳ ಇದೆ. ಕಾರ್ಯಕರ್ತರ ಸಂಕಷ್ಟಗಳಿಗೂ ನಾವು ಸ್ಪಂದಿಸಬೇಕು. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸುವಂತೆ ಸಲಹೆ ನೀಡಿದರು.

ಪಿಕೆಪಿಎಸ್ ಅಧ್ಯಕ್ಷ ಪ್ರವೀಣ ಗಾಣಿಗೇರ, ಜನಶಕ್ತಿ ಬ್ಯಾಂಕಿನ ಅಧ್ಯಕ್ಷ ಪ್ರಶಾಂತರಾವ್ ಅಪರಾಜ, ಪಪಂ ಸದಸ್ಯರಾದ ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭಿರಡಿ, ಸುರೇಶ ಗಾಣಿಗೇರ, ಗುರುರಾಜ ಮಡಿವಾಳರ, ಕುಮಾರ, ಎಸ್ಸಿ,ಎಸ್ಟಿ ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದರಾಯ ಗಾಡಿವಡ್ಡರ, ಮುಖಂಡರಾದ ಡಾ.ಅರವಿಂದರಾವ್ ಕಾರ್ಚಿ, ಪ್ರಕಾಶ ಕೋರ್ಬು, ವಿಶ್ವನಾಥ ನಾಮದಾರ, ಅನೀಲ ಸತ್ತಿ, ಶೀತಲ ಬಾಲೋಜಿ, ಮಲ್ಲು ಕೋಲಾರ, ಸಂಜಯ ಕುಸನಾಳೆ, ಪ್ರಕಾಶ ಚಿನಗಿ, ವಿಕಾಸ ಪಂಡರೆ, ವಸಂತ ಗಾಡಿವಡ್ಡರ, ಕುಮಾರ ಗಾಡಿವಡ್ಡರ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios