Asianet Suvarna News Asianet Suvarna News

ಸಿಎಂ ಬೊಮ್ಮಾಯಿಗೆ ಅಧಿಕಾರವಿಲ್ಲ: ಸಿ.ಎಂ.ಇಬ್ರಾಹಿಂ

ಬಸವ ಕೃಪೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಸವ ಕೃಪಾದ ಕಪಿಮುಷ್ಠಿಯಲ್ಲಿ ಅತ್ಯಂತ ಅಸಹಾಯಕರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಲೇವಡಿ ಮಾಡಿದರು.

JDS State President CM Ibrahim Slams On CM Basavaraj Bommai At Raichur gvd
Author
First Published Dec 29, 2022, 10:44 PM IST

ರಾಯಚೂರು/ಲಿಂಗಸುಗೂರು (ಡಿ.29): ಬಸವ ಕೃಪೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಸವ ಕೃಪಾದ ಕಪಿಮುಷ್ಠಿಯಲ್ಲಿ ಅತ್ಯಂತ ಅಸಹಾಯಕರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಲೇವಡಿ ಮಾಡಿದರು. ರಾಯಚೂರು ನಗರ ಮತ್ತು ಲಿಂಗಸುಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ನಡೆಸಿದ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಧಿಕಾರ ಇಲ್ಲದ ಸಿಎಂ ಯಾರಾದರು ಇದ್ದರೆ ಅದು ಬೊಮ್ಮಾಯಿಯಾಗಿದ್ದಾರೆ. ಬಿಜೆಪಿ ಸರ್ಕಾರ ಧರ್ಮ, ಜಾತಿಗಳ ಮಧ್ಯೆ ಕದನ ಹಚ್ಚುವ ಕಾರ್ಯ ಮಾಡುತ್ತಿದೆ. 

ಹುಬ್ಬಳ್ಳಿಯಲ್ಲಿ ನಡೆದ ದರ್ಗಾ ತೆರವು ಇದರ ಭಾಗವಾಗಿದೆ. ಕೋಮು ಭಾವನೆ ಕೆರಳಿಸಲು ದರ್ಗಾ ತೆರವಿಗೆ ಮುಂದಾದರು, ದರ್ಗಾ ತೆರವು ಮಾಡಿದಾಗ ಸಮಾಧಿಯಾಗಿದ್ದ ಸೂಫಿ ಸಂತರ ದೇಹಕ್ಕೆ ಏನು ಆಗಿರಲಿಲ್ಲ. ಸಮಾಧಿಯಿಂದ ಸುವಾಸನೆ ಹೊರ ಬಂತು, ಕೆಸವ ಕೃಪಾದ ಅಣತೆಯಂತೆ ಮತಕ್ಕಾಗಿ ಮಾಡಿದ ಈ ಕೃತ್ಯದಿಂದ ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಬಂದು ದರ್ಗಾ ತೆರವು ಮಾಡಿ ತಪ್ಪು ಮಾಡಿದೇವು ಎಂದು ಕಣ್ಣೀರಿಟ್ಟು ಪಶ್ಚಾತಾಪಪಟ್ಟರು ಎಂದು ತಿಳಿಸಿದರು.

ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿ.ಎಂ.ಇಬ್ರಾಹಿಂ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರಂಭಿಸಿರುವ ಪಂಚರತ್ನ ಯಾತ್ರೆಗೆ ಕರ್ನಾಟಕದಾದ್ಯಂತ ಭಾರಿ ಜನ ಬೆಂಬಲ ಸಿಗುತ್ತಿದೆ. ಇದು ಕಾಂಗ್ರೆಸ್‌, ಬಿಜೆಪಿಗೆ ನಡುಕ ಉಂಟಾಗಿದೆ. ಇದರಿಂದ ಜೂನ್‌ ತಿಂಗಳಲ್ಲಿ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಆಗಲಿದೆ. ರಾಯಚೂರು ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌ ರಿಬಟನ್‌ ಟೈರ್‌ನಂತಿದ್ದು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬದಲಾಗಿ ಹೊಸ ಕುದುರೆ ಹುಡುಕುತ್ತೇವೆ ಎಂದು ಕುಟುಕಿದರು.

ಕ್ಷೇತ್ರ ಹುಡುಕಾಟದಲ್ಲಿ ಸಿದ್ದರಾಮಯ್ಯ, ಶಿವನಗೌಡ: ದೇವದುರ್ಗದಲ್ಲಿ ಕರೆಮ್ಮ ದುರ್ಗೆಯಂತೆ ಕೆಲಸ ಮಾಡುತ್ತಿರುವ ಪರಿಣಾಮ ಶಾಸಕ ಕೆ.ಶಿವನಗೌಡ ನಾಯಕರಿಗೆ ಎಲ್ಲಿ ನಿಲ್ಲಬೇಕೆಂಬುದು ತಿಳಿಯದೇ ಅಬ್ಬೇಪಾರಿಯಂತೆ ಅಲೆಯುತ್ತಿದ್ದಾರೆ. ಇನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಎಲ್ಲಿ ನಿಲ್ಲಬೇಕೆಂಬುದು ತಿಳಿಯದೇ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಇಂದಿರಾ ಗಾಂಧಿಯವರ ತುರ್ತು ಪರಸ್ಥಿತಿಯಲ್ಲಿ ಹುಟ್ಟಿಕೊಂಡ ಕನ್ನಡಪ್ರಭ ಪತ್ರಿಕೆ ದೇಶದಲ್ಲಿ ಸರ್ಕಾರದ ವಿರುದ್ಧ ಬರವಣಿಗೆ ಮೂಲಕ ಮಾಡಿದ ಚಳವಳಿ ಆಡಳಿತ ಸರ್ಕಾರಕ್ಕೆ ಬಲವಾದ ಚಾಟಿ ಏಟು ನೀಡಿತು ಎಂದು ಕನ್ನಡಪ್ರಭ ಪತ್ರಿಕೆಯ ಹೋರಾಟ ಮೆಲುಕು ಹಾಕಿದರು. ಕೋವಿಡ್‌ ಬಂದರೆ ಆರೋಗ್ಯ ಸಚಿವ ಡಾ.ಸುಧಾಕರ ಅವರ ಮುಖದಲ್ಲಿ ದುಡ್ಡು ಮಾಡಬಹುದು ಎನ್ನುವ ನಗೆ ಹುಟ್ಟುತ್ತದೆ. ಮಹಾಮಾರಿಗೆ ಸಾವಿರಾರು ಜನರು ಸಾವನಪ್ಪಿದ್ದರು ಸಹ ಪರಿಹಾರ ನೀಡದೆ ಸರ್ಕಾರ ಸತ್ತವರ ದುಡ್ಡು ತಿಂದಿದೆ ಪಾಪಿಗಳು ಎಂದು ಆರೋಪಿಸಿದರು. 

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಸಾಲದಿಂದ ಮುಕ್ತಿ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ಗೆ ಯಾರು ಹೈಕಮಾಂಡ್‌ ಇಲ್ಲ ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಅವರೊಂದಿಗೆ ವಿಧಾನಸಭಾ ಚುನಾವಣೆಯ ಮೈತ್ರಿಯನ್ನು ಮಾಡಿಕೊಂಡಿಲ್ಲ, ಲೋಕಸಭಾ ಚುನಾವಣೆ ಸಮಯದಲ್ಲಿ ಈ ವಿಚಾರ ಚರ್ಚಿಸಲಾಗುವುದು. ದೇಶದ ಪ್ರಾದೇಶಿಕ ಪಕ್ಷಗಳ ಸೇರಿಕೊಂಡು ರಾಷ್ಟ್ರಮಟ್ಟದಲ್ಲಿ ಶಕ್ತಿಯನ್ನು ಸಂಘಟಿಸಲಾಗುವುದು ಎಂದರು. ಈ ವೇಳೆ ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ, ಲಿಂಗಸುಗೂರು ಜೆಡಿಎಸ್‌ ಅಭ್ಯರ್ಥಿ ಸಿದ್ದು ಬಂಡಿ, ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಫಾತೀಮಾ ಹುಸೇನ್‌, ಇಮ್ತಿಯಾಜ್‌ ಪಾಶ, ಮುತ್ತಮ್ಮ, ಯೂಸೂರ್ಫ ಖಾನ್‌ ಇದ್ದರು.

Follow Us:
Download App:
  • android
  • ios