ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಸಾಲದಿಂದ ಮುಕ್ತಿ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಾಲದ ಕೂಪದಲ್ಲಿರುವ ರೈತರನ್ನು ಅದರಿಂದ ಹೊರತರಲು ಗೊಬ್ಬರ, ಬೀಜ ಖರೀದಿಗಾಗಿ ಪ್ರತಿ ಎಕರೆಗೆ .10 ಸಾವಿರ ನೀಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. 

If JDS comes to power farmers will be freed from debt says CM Ibrahim gvd

ಬಾಗಲಕೋಟೆ (ಡಿ.19): ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಾಲದ ಕೂಪದಲ್ಲಿರುವ ರೈತರನ್ನು ಅದರಿಂದ ಹೊರತರಲು ಗೊಬ್ಬರ, ಬೀಜ ಖರೀದಿಗಾಗಿ ಪ್ರತಿ ಎಕರೆಗೆ .10 ಸಾವಿರ ನೀಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ನವನಗರದ ಕಲಾಭವನದಲ್ಲಿ ಭಾನುವಾರ ಜಾತ್ಯತೀತ ಜನತಾದಳ ಪಕ್ಷಕ್ಕೆ ಪ್ರೊ.ಎಸ್‌.ಆರ್‌.ಗೌಡರ ಸೇರಿ, ಮತ್ತಿತರ ಕಾರ್ಯಕರ್ತರ ಸೇರ್ಪಡೆ ಹಾಗೂ ಪಕ್ಷದ ಸಂಘಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆದಮೇಲೆ ಡೀಸೆಲ್‌, ಪೆಟ್ರೋಲ್‌ ಬೆಲೆ ಗಗನಕ್ಕೆ ಏರಿದೆ. ಅವರು ಹೊಸ ಅಚ್ಛೆ ದಿನ ಕೊಡಬೇಕಿಲ್ಲ. 

ಮೊದಲಿದ್ದ ನಮ್ಮ ಅಚ್ಛೆ ದಿನಗಳನ್ನು ವಾಪಸ್‌ ಕೊಡುವಂತೆ ಕೇಳಬೇಕಿದೆ. ದೇಶದಲ್ಲಿ ಧನಲಕ್ಷ್ಮಿ, ಭಾಗ್ಯಲಕ್ಷ್ಮಿ ಹೋಗಿ ಧರಿದ್ರ ಲಕ್ಷ್ಮಿ ತಾಂಡವವಾಡುತ್ತಿದ್ದಾಳೆ ಎಂದು ಟೀಕಿಸಿದರು. ದೊಡ್ಡ, ದೊಡ್ಡ ಉದ್ಯಮಿಗಳ .5 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಪ್ರಧಾನಿ ಮೋದಿ ಬಡವರಿಗಾಗಿ ಏನೂ ಮಾಡಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಪಂಚಾಯಿತಿಯಲ್ಲಿ ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸುತ್ತೇವೆ. ಸ್ತ್ರೀಶಕ್ತಿ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದರು.

ಬಾಯನ್ನೇ ಬಂಡವಾಳವಾಗಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದು: ಸಿ.ಎಂ.ಇಬ್ರಾಹಿಂ

ಹಿಂದೆ ಎಚ್‌.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಮನೆಗೆ ಹೋಗಿ ಚೆಕ್‌ ನೀಡಲಾಗುತ್ತಿತ್ತು. ಆದರೆ, ಈಗ ತನ್ನ ದುಡ್ಡು ಪಡೆಯಲು ರೈತ ನ್ಯಾಯಾಲಯದ ಮೊರೆ ಹೋಗುವ ಸ್ಥಿತಿ ನಿರ್ಮಾಣ ಆಗಿರುವುದು ನಾಚಿಗೇಡಿನ ಸಂಗತಿ ಎಂದರು. ಜಲಧಾರೆ ಮಿಷನ್‌ ಜಾರಿಗೆ ತಂದು ಬಾಗಲಕೋಟೆ, ವಿಜಯಪುರದ ಪ್ರತಿ ಹೊಲಕ್ಕೆ ನೀರು ಹರಿಸುವ ಗುರಿಯನ್ನು ಹೊಂದಲಾಗಿದೆ. ಬಡವರ ಮಕ್ಕಳಿಗೆ 1ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣದ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದರು.

ಪಕ್ಷದ ಮುಖಂಡೆ ನಜ್ಮಾ ನಜೀರ್‌ ಚಿಕ್ಕನೇರಳೆ ಮಾತನಾಡಿ, ಬಿಜೆಪಿ ಅವರು ಮಹಿಳೆಯರು, ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್‌ ಪ್ರಕರಣದಲ್ಲಿ ಅಲ್ಪಸಂಖ್ಯಾತರ ಪರವಾಗಿ ನಿಲ್ಲಲು ಕಾಂಗ್ರೆಸ್‌ ಪಕ್ಷ ಹಿಂದೇಟು ಹಾಕಿತು. ಆಗ ಬೆಂಬಲವಾಗಿ ನಿಂತವರು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತ್ರ. ದೇವೇಗೌಡರು ಕೊಟ್ಟಿರುವ ಶೇ 4ರಷ್ಟುಮೀಸಲಾತಿಯಿಂದಾಗಿ ಮುಸ್ಲಿಂ ಸಮುದಾಯದವರಿಗೆ ಸರ್ಕಾರಿ ಹುದ್ದೆಗಳು ದೊರೆಯುತ್ತಿವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಮೂಲಕ ಮನೆ ಇಲ್ಲದವರಿಗೆ ವಸತಿ ಯೋಜನೆ ಕಲ್ಪಿಸುತ್ತಿದ್ದಾರೆ. ಶಿಕ್ಷಣ, ಕೃಷಿ ಸೇರಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು. ಪಕ್ಷಕ್ಕೆ ಸೇರ್ಪಡೆಗೊಂಡ ಪ್ರೊ.ಎಸ್‌.ಆರ್‌.ಗೌಡರ ಅವರು ಮಾತನಾಡಿ, ಪಕ್ಷಕ್ಕೆ ನಿಷ್ಠನಾಗಿ ಸೇವೆ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಬೇಕು. ಅದಕ್ಕಾಗಿಯೇ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಸಲೀಂ ಮೋಮಿನ್‌ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಾ ಪಾಟೀಲ, ಬಿ.ಸಿ.ಪಾಟೀಲ ಹಸಲಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಸೀನ್‌ ನದಾಫ್‌, ರೇಣುಕಾ ಭಜಂತ್ರಿ, ಸಿದ್ದು ಬಂಡಿ ಇತರರು ವೇದಿಕೆಯಲ್ಲಿದ್ದರು.

Latest Videos
Follow Us:
Download App:
  • android
  • ios