ಜೆಡಿಎಸ್‌ ನಾಯಕರನ್ನು ಸೃಷ್ಟಿಸುವ ಪಕ್ಷವಾಗಿದೆ. ಪಂಚರತ್ನದ ರೀತಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮವನ್ನ ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಬರೀ ಕಲ್ಪನೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಉಳಿಸಲು ಮೋದಿ ಪ್ರಯತ್ನ ಪಡ್ತಿದ್ದಾರೆ. ಅದು ಸಾಧ್ಯವಿಲ್ಲ, ಬಿಜೆಪಿ 70 ಸ್ಥಾನ ಮೇಲೆ ಗೆಲ್ಲಲ್ಲ: ಸಿಎಂ‌ ಇಬ್ರಾಹಿಂ 

ಮಂಡ್ಯ(ಫೆ.27): ರಾಜ್ಯದಲ್ಲಿ ಜೆಡಿಎಸ್‌ ಪರವಾದ ವಾತಾವರಣ ಇದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪಕ್ಷ ಬಲಿಷ್ಠವಾಗಿದೆ. ಕಲ್ಯಾಣ, ಮುಂಬೈ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ. ಎರಡೂ ಕಡೆ ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದ್ದೇವೆ. ಬಿಜೆಪಿಗೆ ಅಧಿಕಾರ ಇದೆ ಎಂದು ಜನ ಸೇರುತ್ತಿದ್ದಾರೆ. ತಂದ ಜನಕ್ಕೆ ಮಾತಾಡಿ ಪ್ರಯೋಜನ ಇಲ್ಲ, ಬಿಜೆಪಿ ಜಾಯಮಾನದಲ್ಲಿ ಬಿಜೆಪಿಗೆ ಜನ ಬಂದಿಲ್ಲ. ಬೇರೆಯವರು ಹುಟ್ಟಿಸಿದ್ದನ್ನು ತೆಗೊಂಡು ನಮ್ಮವರು ಅಂತಿದ್ದಾರೆ ಅಂತ ಬಿಜೆಪಿ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ‌ ಇಬ್ರಾಹಿಂ ಹರಿಹಾಯ್ದಿದ್ದಾರೆ. 

ನಿನ್ನೆ(ಭಾನುವಾರ) ಜಿಲ್ಲೆಯ ಪಾಂಡವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುದ ಸಿಎಂ‌ ಇಬ್ರಾಹಿಂ ಅವರು, ಜೆಡಿಎಸ್‌ ನಾಯಕರನ್ನು ಸೃಷ್ಟಿಸುವ ಪಕ್ಷವಾಗಿದೆ. ಪಂಚರತ್ನದ ರೀತಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮವನ್ನ ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಬರೀ ಕಲ್ಪನೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಉಳಿಸಲು ಮೋದಿ ಪ್ರಯತ್ನ ಪಡ್ತಿದ್ದಾರೆ. ಅದು ಸಾಧ್ಯವಿಲ್ಲ, ಬಿಜೆಪಿ 70 ಸ್ಥಾನ ಮೇಲೆ ಗೆಲ್ಲಲ್ಲ ಅಂತ ಹೇಳಿದ್ದಾರೆ. 
ವಯಸ್ಸಿನ ಕಾರಣ ನೀಡಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನ ಶಾಶ್ವತವಾಗಿ ಕೂರಿಸಿದ್ದಾರೆ. ಲಿಂಗಾಯತರ ಮತ ಪಡೆದು ಬಿಜೆಪಿ ಅಧಿಕಾರ ಪಡೆದಿದೆ. ಪಂಚಮಸಾಲಿಗಳನ್ನ ಬೀದಿಗೆ ತಂದರು, ಬೇಡ ಜಂಗಮ ಕಡೆ ತಿರುಗಿ ನೋಡ್ತಿಲ್ಲ ಅಂತ ಕಿಡಿ ಕಾರಿದ್ದಾರೆ. 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಮಾ.11ಕ್ಕೆ ಮೋದಿ ಉದ್ಘಾಟನೆ

30 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಬಹುದು, 80 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಿ ಏನ್ ಮಾಡ್ತೀರಿ ಅಂತ ಹೇಳುವ ಮೂಲಕ ವಿದಾಯದ ಬಳಿಕ ಲಿಂಗಾಯತರ ಬೆಂಬಲ ಕೇಳಿದ ಬಿಎಸ್‌ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ. 
ಯಡಿಯೂರಪ್ಪರ ಬಲವನ್ನ ಬಿಜೆಪಿ ಕುಗ್ಗಿಸಿದೆ. ಈ ಬಾರಿ ರಾಜ್ಯದ ಲಿಂಗಾಯತರು ಜೆಡಿಎಸ್‌ ಪರವಾಗಿದ್ದಾರೆ. ಕಾಂಗ್ರೆಸ್ ಲಿಸ್ಟ್ ಬಂದ ಮೇಲೆ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆಯಾಗಲಿದೆ. ಅವರು ಏನು ಮಾಡ್ತಾರೆ ನೋಡಿಕೊಂಡು ಪಟ್ಟಿ ರಿಲೀಸ್ ಮಾಡುತ್ತೇವೆ ಅಂತ ಹೇಳಿದ್ದಾರೆ. 

ಸಿ.ಟಿ. ರವಿ ಕಿಚನ್ ಕ್ಯಾಬಿನೆಟ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ‌ ಇಬ್ರಾಹಿಂ ಅವರು, ಸಿ.ಟಿ. ರವಿಯನ್ನು ಆರ್‌ಎಸ್‌ಎಸ್ ಯಾವ ಕ್ಯಾಬಿನೆಟ್‌ನಲ್ಲಿ ಇಟ್ಟಿದ್ದಾರೆ ಗೊತ್ತಾ.?, ಆರ್‌ಎಸ್‌ಎಸ್ ಮೀಟಿಂಗ್‌ಗಳಲ್ಲಿ ರವಿಗೆ ಅವಕಾಶ ಇದೆಯಾ?. ಸ್ಮಾರ್ಟ್ ಬ್ರಾಹ್ಮಣರಿಗೆ ಒಳಗೆ ಬಿಟ್ಟಿಲ್ಲಾ ಈ ಮುಂಡೆತ್ತದ್ದು ಗೌಡ್ರಿಗೆ ಬಿಡ್ತಾರಾ?. ಸುಮ್ನೆ ಗೂಬೆ ಹಾಕಲು ಸಿ.ಟಿ. ರವಿಯನ್ನು ಇಟ್ಟು ಕೊಂಡಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. 

ಕಾಂಗ್ರೆಸ್‌, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ

ರೈತರ ಮಕ್ಕಳಿಗೆ ಮರ್ಯಾದೆ ಇರೋದು ಜೆಡಿಎಸ್‌ ಪಕ್ಷದಲ್ಲಿ ಮಾತ್ರ. ಸ್ವಾಭಿಮಾನ ಇಲ್ಲದವರು ನೀವು, ಕಂಡವರ ಮನೆಯಲ್ಲಿ ಕೆಲಸ ಮಾಡಲು ಹೋಗಿದ್ದೀರಿ ಅಂತ ಸಿ.ಟಿ. ರವಿ ವಿರುದ್ಧ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. 
ಮುಂದಿನ ಜನ್ಮದಲ್ಲಿ ಯಾಕೆ‌ ಈಗಲೇ ಮುಸ್ಲಿಂ ಸಮುದಾಯಕ್ಕೆ ಹೋಗಿ ಎಂಬ ಸಿ.ಟಿ. ರವಿ ಹೇಳಿಗೆ ಪ್ರತಿಕ್ಇಯೆ ನೀಡಿ ಸಿಎಂ ಇಬ್ರಾಹಿಂ ಅವರು, ದೇವೇಗೌಡರು ಆ ಮಾತನ್ನು ಹೇಳೇ ಇಲ್ಲ. ಇದು ಬಿಜೆಪಿಯವರು ಸೃಷ್ಟಿ ಮಾಡಿದ ಹೇಳಿಕೆಯಾಗಿದೆ. ಸಿ.ಟಿ. ರವಿ ಯಾವ ಸಮುದಾಯದಲ್ಲಿ ಹುಟ್ಟಿದ್ದಾರೆ?. ಆರ್‌ಎಸ್‌ಎಸ್ ಇವ್ರನ್ನ ನೋಡಿದ್ರೆ ಶೂದ್ರರು ಎನ್ನುತ್ತಾರೆ. ರಾಜಕಾರಣಿಗಳ‌ ಕೆಲಸ ಧರ್ಮದ ಬಗ್ಗೆ ವಿಮರ್ಶೆ ಮಾಡುವುದಲ್ಲ. ಬಡವರ ಪರ, ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಬಿಜೆಪಿ ಅವರಿಗೆ ಈ ಬಾರಿ ಹೀನಾಯ ಸೋಲಾಗಲಿದೆ. ಮಠಾಧೀಪತಿಗಳು ಧರ್ಮ ರಕ್ಷಕರು. ಅವರು ಗುರಿ ತೋರಿಸಬಹುದು, ಸಲಹೆ ಕೊಡಬಹುದು. ಆದರೆ ಅವರೇ ನೇರವಾಗಿ ರಾಜಕೀಯ ಮಾಡಬಾರದು. ಅವರು ರಾಜಕೀಯಕ್ಕೆ ಬರುವುದು ಮಠದ ಸಂಸ್ಕೃತಿಗೆ ಅಪಮಾನ ಮಾಡಿದಂತೆ. ಯಾವ ಮಠಾಧೀಶರು ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿ ಅವರೇ ವೇಶ ಹಾಕಿಸಿ ಡೂಪ್ಲಿಕೇಟ್ ಸ್ವಾಮೀಜಿಯನ್ನು ಕರೆತರಬಹುದು. ಸ್ವಾಮೀಜಿಗಳು ಯಾರು ರಾಜಕೀಯಕ್ಕೆ ಬರಬಾರದು ಅಂತ ತಿಳಿಸಿದ್ದಾರೆ. 

ಉ.ಪ್ರ ಸಿಎಂಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಆಗ್ತಿರಲಿಲ್ಲ. ಹೆಂಡ್ತಿ‌, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ರೆ ಬೆಲೆ ಏರಿಕೆ ಆಗದೆ ಇನ್ನೇನು ಅಗುತ್ತದೆ. ಲವ್ ಲವ್ ಅಂತಾವೇ, ಲವ್ ಅಂದರೆ ಏನ್ ಗೊತ್ತು ಯೋಗಿಗೆ?. ಲವ್ ಮಾಡಿ ಎಲ್ರೂ ಮದುವೆ ಆಗ್ತಾರೆ, ಲವ್ ಅನುಭವ ಅವನಿಗೆ ಇಲ್ಲ. ಸಂಸಾರ ನಡೆಸುವ ಅನುಭವ ಇಲ್ಲ. ಹಾಗಾಗಿ ಇಂತಹವರ ಕೈಗೆ ದೇಶ ಕೊಟ್ರೆ ಆಡಳಿತ ನಡೆಸಲು ಆಗಲ್ಲ ಅಂತ ಹೇಳುವ ಮೂಲಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಿಎಂ ಇಬ್ರಾಹಿಂ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.