ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ
ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆಗಳಾಗುತ್ತಿವೆ. ಈಶ್ವರಪ್ಪನ ಬಾಯಿ ಯಂತ್ರದಂತೆ ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿರಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಿವಮೊಗ್ಗ ಘಟನೆಗಳಿಗೆ ಅವರೇ ಕಾರಣ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿ (ಅ.26): ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆಗಳಾಗುತ್ತಿವೆ. ಕೆ.ಎಸ್.ಈಶ್ವರಪ್ಪನ ಬಾಯಿ ಯಂತ್ರದಂತೆ ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿರಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಿವಮೊಗ್ಗ ಘಟನೆಗಳಿಗೆ ಅವರೇ ಕಾರಣ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಮತ್ತೊಂದು ಕೊಲೆ ನಡೆದಿದೆ ಇದಕ್ಕೆ ಈಶ್ವರಪ್ಪನ ಮಾತು ಕಾರಣ, ಈಶ್ವರಪ್ಪ ಸೋಲಿನ ಭೀತಿಯಲ್ಲಿ ಇರೋದ್ರಿಂದ ಇವೆಲ್ಲ ಅವಾಂತರ ಈಶ್ವರಪ್ಪರನ್ನು ಹದ್ದು ಬಸ್ತಿನಲ್ಲಿ ಇಟ್ರೆ ಎಲ್ಲವೂ ಸರಿಹೋಗುತ್ತೆ ಅಂತ ಕಿಡಿಕಾರಿದ್ರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೂ ಆಗಲಿಲ್ಲ, ಯಡಿಯೂರಪ್ಪ ಅಥವಾ ರಾಘವೇಂದ್ರ ಮಾತಾಡಿದರೆ ಏನು ಗಲಭೆಗಳ ಆಗೊಲ್ಲ. ಆದ್ರೆ ಈಶ್ವರಪ್ಪ ಮಾತಾಡಿದರೆ ಅಲ್ಲಿ ಗಲಭೆಗಳು ಆಗ್ತಿವೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಇವೆಲ್ಲವೂ ನಡೆಯುತ್ತಿವೆ. ಈಶ್ವರಪ್ಪ ಸೋಲುವ ಹತಾಶೆಯಲ್ಲಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅದೇ ಜಿಲ್ಲೆಯವರು. ಆದರೆ ಅವರು ಬರೀ ಹೋಮ್‌ಗೆ ಸೀಮಿತ, ಮಿನಿಸ್ಟರ್ ಅಲ್ಲ. ಅವರ ಮನೆಯಲ್ಲೇ ಯಾರೋ ಮಾತು ಕೇಳ್ತಾ ಇಲ್ಲ, ಇನ್ನ ಹೊರಗಿನವರು ಏನ್ ಕೇಳ್ತಾರೆ.
ಸಿಎಂ ಬೊಮ್ಮಾಯಿ ಒರಿಜಿನಲ್ RSS ಅಲ್ಲ; ಮುಸ್ಲಿಂ ಮೀಸಲಾತಿ ಕಡಿಮೆ ಮಾಡಲು ಸಾಧ್ಯವಿಲ್ಲ: ಸಿ.ಎಂ.ಇಬ್ರಾಹಿಂ
ಚುನಾವಣಾ ಸಂದರ್ಭದಲ್ಲಿ ಇಂಥದ್ದನ್ನು ನಡೆಸೋದೆ ಪಕ್ಷದ ಪಾಲಿಸಿಯಾಗಿದ್ರೆ ಏನೂ ಮಾಡಲಾಗಲ್ಲ. ಶಿವಮೊಗ್ಗ, ಮಂಗಳೂರು ಸೇರಿ ಕರಾವಳಿಯಲ್ಲಿ ಇಂಥದ್ದನ್ನು ಮಾಡಲಾಗ್ತಿದೆ ಅಂತ ಇಬ್ರಾಹಿಂ ಕಿಡಿಕಾರಿದ್ದಾರೆ. ಯತ್ನಾಳ್ ಮತ್ತು ಬೆಲ್ಲದ್ ನಮ್ಮ ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಳಿ ಕಟ್ಟಿ ಮದುವೆ ಆದ್ಮೇಲೆ ನನ್ ಹೆಂಡ್ತಿ ಅಲ್ಲ ಅಂದ್ರೆ ಹೇಗೆ? ಕಟ್ಟಿದ ತಾಳಿ ಕೊರಳಲ್ಲಿ ಇರಬೇಕಾದರೆ ನಾವು ಕಟ್ಟಿಯೇ ಇಲ್ಲ ಅನ್ನೋದು ಸರಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ ಮುಂದಿನ ಚುನಾವಣೆಯಲ್ಲಿ ಏನಾದ್ರೂ ಅಧಿಕಾರಕ್ಕೆ ಬರಬೇಕೆಂದರೆ ಕಾಂಗ್ರೆಸ್ ತಪ್ಪಿನಿಂದ ಮಾತ್ರ ಸಾಧ್ಯ.
ರಾಹುಲ್ ಜೋಡೋ ಯಾತ್ರೆ, ಗೊತ್ತು ಗುರಿಯಿಲ್ಲದ ಯಾತ್ರೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿ.ಎಂ ಇಬ್ರಾಹಿಂ, ರಾಹುಲ್ ಗಾಂಧಿ ಯಾಕೆ ಯಾತ್ರೆ ಮಾಡುತ್ತಿದ್ದರು ಅವರಿಗೆ ಗೊತ್ತಿಲ್ಲ. ಅದೊಂದು ಗೊತ್ತು ಗುರಿಯಿಲ್ಲದ ಯಾತ್ರೆ.ಅವರು ಜನರ ಸಂಕಷ್ಟವನ್ನು ಅರಿಯುವ ಜನತೆಗೆ ಸ್ಪಂದಿಸಲು ಯಾತ್ರೆ ಮಾಡ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗ್ತಿದೆ. ಇದ್ರಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಾಗಲ್ಲ.ರಾಹುಲ್ ಯಾತ್ರೆ ನಾ ನೋಡಿ ಬಿಜೆಪಿ ಜನ ಸಂಕಲ್ಪ ಸಮಾವೇಶ ಮಾಡ್ತಿದೆ. ಜನ ಸಂಕಲ್ಪ ಸಮಾವೇಶದಲ್ಲಿ ಜನರಿಗಾಗಿ ಮಾಡಿದ ಕಾರ್ಯಗಳ ಬಗ್ಗೆ ಹೇಳ್ತಾನೇ ಇಲ್ಲ. ಬಿಜೆಪಿಯವರದ್ದು ಏನಿದ್ದರೂ ಪರ್ಸಂಟೇಜ್ ವ್ಯವಹಾರ. ಇದಕ್ಕೆ ಭಿನ್ನವಾಗಿ ಜೆಡಿಎಸ್‌ನಿಂದ ಪಂಚರತ್ನ ಕಾರ್ಯಕ್ರಮ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳ್ತಾ ಇದ್ದೇವೆ. ಖಂಡಿತಾ ಜನ ನಮ್ಮನ್ನು ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ: ಸಿ.ಎಂ.ಇಬ್ರಾಹಿಂ
ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿತ್ತು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ವಿಚಾರ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಕಾಂಗ್ರೆಸ್‌ನಲ್ಲಿ ಇದುವರೆಗೆ ಎರಡಿದ್ದ. ಬಣಗಳು ಮೂರಾಗಿವೆ. ಸಿದ್ದರಾಮಯ್ಯ, ಡಿಕೆಶಿ ಬಣದ ನಂತರ ಇದೀಗ ಖರ್ಗೆ ಬಣ್ಣ ಮುನ್ನೆಲೆಗೆ ರಾಹುಲ್ ಗಾಂಧಿಗೆ ಈ ಮೂರೂ ಬಣ್ಣಗಳನ್ನು ಜೋಡಿಸುವುದೇ ಕೆಲಸ. ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿತ್ತು. ಕೇವಲ 80 ಸೀಟು ಗಳಿಸಿತ್ತು. ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಕಾಂಗ್ರೆಸ್‌ಗೆ ಬೂಸ್ಟ್ ಸಿಗೋಕೆ ಸಾಧ್ಯವಿಲ್ಲ. ಮತ್ತೊಬ್ಬರ ಕೈಗೊಂಬೆಯ ರೀತಿಯಲ್ಲಿ ಅವರು ಕೆಲಸ ಮಾಡುತ್ತಾರೆ ಅಷ್ಟೇ ಅಂತ ಖರ್ಗೆ ಕಾಲೆಳೆದಿದ್ದಾರೆ.