Asianet Suvarna News Asianet Suvarna News

ಕಾಂಗ್ರೆಸ್‌ಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ: ಸಿ.ಎಂ.ಇಬ್ರಾಹಿಂ

ಕಾಂಗ್ರೆಸ್‌ನವರಿಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಲ್ಲ. ನಾನು ಅಲ್ಲಿಯೇ ಇದ್ದವನು, ಹಳೆ ಹೆಂಡಂದಿರ ಬಗ್ಗೆ ನಮಗೆ ಗೊತ್ತಿಲ್ಲವೇ? ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. 

jds state president cm ibrahim slams on congress gvd
Author
First Published Oct 11, 2022, 3:25 AM IST

ಬೆಂಗಳೂರು (ಅ.11): ಕಾಂಗ್ರೆಸ್‌ನವರಿಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಲ್ಲ. ನಾನು ಅಲ್ಲಿಯೇ ಇದ್ದವನು, ಹಳೆ ಹೆಂಡಂದಿರ ಬಗ್ಗೆ ನಮಗೆ ಗೊತ್ತಿಲ್ಲವೇ? ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾವು ಹನುಮಂತನಂತೆ ಹೊತ್ತುಕೊಂಡು ಹೋಗುತ್ತಿದ್ದೆವು. ಈಗ ಹೊತ್ತುಕೊಂಡು ಹೋಗುವವರು ಯಾರಿಲ್ಲ. ಪಾಪ ಅವರನ್ನು ಓಡಿಸಿಬಿಟ್ಟರು. ಅವರಿಗೆ ಸ್ಟೆಂಟ್‌ ಹಾಕಿದ್ದಾರೆ. ಇರುವ ಆರೋಗ್ಯ ಎಲ್ಲಿ ಹಾಳಾಗುತ್ತೋ ಎಂದು ನನಗೆ ಗಾಬರಿಯಾಗಿತ್ತು. ಸದ್ಯ ವೇಣುಗೋಪಾಲ ಬಂದು ಹಿಡಿದುಕೊಂಡರು. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ ಎನ್ನುವವರಲ್ಲಿ ನಾನು ಮೊದಲಿಗ. 

ಅವರು ಚುನಾವಣೆಗೆ ವರುಣದಿಂದಾದರೂ ಸರಿ, ಎಲ್ಲಿಂದ ಆದರೂ ಸರಿ ಸ್ಪರ್ಧೆ ಮಾಡಲಿ. ಅವರು ವಿಧಾನಸಭೆಗೆ ಬರಬೇಕು ಎಂದು ಆಶಿಸಿದರು. ಹಿಂದಿ ಬಳಕೆಗೆ ಒತ್ತು ನೀಡುವ ಸಂಬಂಧ ರಾಷ್ಟ್ರಪತಿಗೆ ಗೃಹಸಚಿವ ಅಮಿತ್‌ ಶಾ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಸ್ಸಾಂ, ಗುಜರಾತ್‌, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ ಹೀಗೆ ಹಲವು ಕಡೆ ಹಿಂದಿಯೇ ಇಲ್ಲ. ಇವರು ಇದೇ ರೀತಿ ಮುಂದುವರಿದರೆ ದೇಶ ವಿಭಜನೆಗೆ ಕೈಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಹಲವು ಭಾಷೆಗಳಿಂದ ಕೂಡಿರುವ ಭಾರತ ನಮ್ಮದು. ಹೀಗಾಗಿ ನವೆಂಬರ್‌ 1ರಂದು ಮನೆ ಮನೆಗೂ ಕನ್ನಡ ಬಾವುಟ ಹಾರಿಸಿ ಎಂದು ಕರೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮಾಡದಿದ್ದರೆ ಪಕ್ಷ ವಿಸರ್ಜನೆ: ಸಿ.ಎಂ. ಇಬ್ರಾಹಿಂ

ಬೆಲ್ಲದ್‌ ಅಪ್ಪ ಇದ್ದಾಗ ಮುಸ್ಲಿಮರಿಗೆ ಮೀಸಲು ಸಿಕ್ಕಿದೆ: ಮುಸ್ಲಿಮರಿಗೆ 2ಬಿ ಮೀಸಲಾತಿ ನೀಡಿರುವುದು ಶಾಸನಬದ್ಧವಾಗಿದ್ದು, ಶಾಸಕ ಅರವಿಂದ ಬೆಲ್ಲದ್‌ ಅವರ ಅಪ್ಪ ಇದ್ದಾಗ ಮಾಡಲಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಮರ 2ಬಿ ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂಬ ಹೇಳಿಕೆಗೆ ಕಿಡಿಕಾರಿದರು. ಮುಸ್ಲಿಮರಿಗೆ 2ಬಿ ಮೀಸಲಾತಿ ಶಾಸನಬದ್ಧವಾಗಿದೆ. ಶಾಸಕ ಅರವಿಂದ ಬೆಲ್ಲದ್‌ ಅವರಪ್ಪ ಇದ್ದಾಗ ನೀಡಲಾಗಿದೆ. ಈಗ ಇದಕ್ಕೆಲ್ಲ ಕೈಹಾಕಲು ಹೋಗಬೇಡಿ. ಹಿಂದೆ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಇದ್ದಾಗಲೂ ನಡೆದುಕೊಂಡು ಬಂದಿದೆ. ಶೇ.4ರಷ್ಟುಮೀಸಲಾತಿ ನಮಗೆ ಖುಷಿ ಇದೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಬೂದಿಯಿಂದ ಎದ್ದು ಬರುತ್ತಾರೆ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಹೇಳಿದಂತೆ ಅವರ ಪುತ್ರ 20 ವರ್ಷಗಳ ನಂತರ ಬೂದಿಯಿಂದ ಎದ್ದು ಬರುತ್ತಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ‘ಜನತಾಮಿತ್ರ’ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡ ಅವರು ಈ ಹಿಂದೆ ಬೂದಿಯಿಂದ ಎದ್ದು ಬರುವುದಾಗಿ ಹೇಳಿದ್ದರು. ಆದರೆ, 20 ವರ್ಷ ನಂತರ ಅವರ ಪುತ್ರ ಬೂದಿಯಿಂದ ಎದ್ದು ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ದೇವೇಗೌಡರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

Karnataka Politics: ನಾವೇನು ಪಾಕಿಸ್ತಾನದಿಂದ ಬಂದವರಲ್ಲ: ಸಿ.ಎಂ.ಇಬ್ರಾಹಿಂ

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಹುತೇಕರು ಜಾಮೀನಿನ ಮೇಲಿದ್ದರೆ, ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ, ಜೆಡಿಎಸ್‌ನ ಒಬ್ಬರ ಮೇಲೂ ಜೈಲು ಇಲ್ಲ, ಬೇಲೂ ಇಲ್ಲ. ಜೆಡಿಎಸ್‌ ಅಧಿಕಾರಕ್ಕೆ ತರಲು ಪಕ್ಷವನ್ನು ಸಂಘಟಿಸಲು ಎಲ್ಲ ರೀತಿಯಲ್ಲೂ ಕಾರ್ಯನಿರ್ವಹಿಸಲಾಗುತ್ತಿದೆ. ಮುಂದಿನ ಜನವರಿ ತಿಂಗಳಲ್ಲಿ ದೊಡ್ಡ ಸಮಾವೇಶ ನಡೆಸಲಾಗುವುದು. ಆದರೆ, ಎಲ್ಲಿ ಎಂಬುದನ್ನು ಆಗ ತೀರ್ಮಾನಿಸಲಾಗುವುದು ಎಂದರು. ರಾಜ್ಯದಲ್ಲಿ ರೈತರು ಗೊಬ್ಬರ ಇಲ್ಲದೆ ಸಂಕಷ್ಟಪಡುವಂತಾಗಿದೆ. ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ವಾರದಲ್ಲಿ ರೈತರಿಗೆ ಗೊಬ್ಬರ ನೀಡದಿದ್ದರೆ ಎಲ್ಲ ಜಿಲ್ಲಾ ಕಚೇರಿ ಮುಂದೆ ಜೆಡಿಎಸ್‌ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios