ಜೆಡಿಎಸ್‌ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಆಣೆ-ಪ್ರಮಾಣ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಲಕ್ಷಾಂತರ ಜನರು ಬರುವ ತಾಯಿ ಹಾಸನಾಂಬೆ ಎದುರು ಆಣೆ-ಪ್ರಮಾಣ ಸಾಧ್ಯವಾ? ನಾವೆಲ್ಲರೂ ನಮ್ಮ ಮನಸಿನಲ್ಲಿರುವುದನ್ನಷ್ಟೆ ಕೇಳಿಕೊಂಡಿದ್ದೇವೆ ಎಂದ ಶಾಸಕ ಜಿ.ಟಿ.ದೇವೇಗೌಡ 

ಮೈಸೂರು(ನ.11): ಹಾಸನಾಂಬೆ ಎದುರು ನಾವ್ಯಾರೂ ಆಣೆ ಮಾಡಿಲ್ಲ. ಬದಲಿಗೆ ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ ಎಂದು ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಆಣೆ-ಪ್ರಮಾಣ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಲಕ್ಷಾಂತರ ಜನರು ಬರುವ ತಾಯಿ ಹಾಸನಾಂಬೆ ಎದುರು ಆಣೆ-ಪ್ರಮಾಣ ಸಾಧ್ಯವಾ? ನಾವೆಲ್ಲರೂ ನಮ್ಮ ಮನಸಿನಲ್ಲಿರುವುದನ್ನಷ್ಟೆ ಕೇಳಿಕೊಂಡಿದ್ದೇವೆ ಎಂದರು.

ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

ಜೆಡಿಎಸ್ ನಾಯಕರು ಯಾರೂ ಪಕ್ಷ ಬಿಡುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದು ನಮ್ಮ ಮುಂದಿರುವ ಗುರಿ. ಆ ಕುರಿತು ನಾವು ಸಂಘಟನಾತ್ಮಕವಾಗಿ ಕೆಲಸ ಮಾಡ್ತೀವಿ ಎಂದವರು ಹೇಳಿದರು.