ಸಿದ್ರಾಮಣ್ಣ ಸಿಎಂ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದ ಜೆಡಿಎಸ್ MLA
* ಸನದಲ್ಲಿ ಸಿದ್ದರಾಮಯ್ಯನವರನ್ನು ಶ್ಲಾಘಿಸಿದ ಜೆಡಿಎಸ್ ಶಾಸಕ
* ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದ ಶಿವಲಿಂಗೇಗೌಡ
* ಸಿದ್ದರಾಮಯ್ಯ ಸಿಎಂ ಆಗಿದ್ದಾಗ 300 ಕೋಟಿ ರೂ ಕೊಟ್ಟಿದ್ರು
ಬೆಂಗಳೂರು, (ಸೆ.21): ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಇಂದು (ಸೆ.21) ವಿಧಾನಮಂಡಲ ಅಧಿವೇಶನದಲ್ಲಿ ಅನುದಾನ ವಿಚಾರಕ್ಕೆ ಜೆಡಿಎಸ್ ಶಾಸಕರೇ ಕಿತ್ತಾಡಿಕೊಂಡ ಘಟನೆ ನಡೆಯಿತು. ಸಿಎಂ ವಿವೇಚನಾ ಕೋಟದ ಅನುದಾನದ ಬಗ್ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರಸ್ತಾಪಿಸಿದ್ದರು. ರೇವಣ್ಣ ಪ್ರಸ್ತಾಪದ ವೇಳೆ ಮಧ್ಯಪ್ರವೇಶಿಸಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಯಾವಾಗ ನೋಡಿದ್ರು ನನಗೆ ನೀಡಿದ ಅನುದಾನದ ಬಗ್ಗೆಯೇ ಮಾತಾಡ್ತಾರೆ. ಹೀಗಾಗಿ ರೇವಣ್ಣಗೂ 10 ಕೋಟಿ ಅನುದಾನ ಕೊಟ್ಟುಬಿಡಿ ಎಂದು ಅಸಮಾಧಾನ ಎಂದರು.
ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರ: ಸಿದ್ದರಾಮಯ್ಯ ಮನದ ಮಾತು
ಇನ್ನು, ಶಿವಲಿಂಗೇಗೌಡರ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ, ಅದೇ ನಾವು ಹೇಳ್ತಿರೋದು. ನಿಮಗೆ ನೀಡಿದ್ದ ಅನುದಾನ ನಮಗೂ ಕೊಡಲಿ ಎಂದು. ಯಾಕೆ ಈಗ ನಾವು ಕೇಳಬಾರದೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹೌದ್ರೀ, ನಮಗೆ ಅನುದಾನ ಕೊಟ್ಟಿದ್ದಾರೆ. ನಾನು ನೇರವಾಗಿಯೇ ಹೇಳುತ್ತಿದ್ದೇನೆ, ಆಡಳಿತ ಪಕ್ಷಕ್ಕೆ ಕೈ ಮುಗಿಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 300 ಕೋಟಿ ರೂ ಕೊಟ್ಟಿದ್ರು, ಹಾಗಾಗಿಯೇ ನಾನು ಶಾಸಕನಾದೆ. ಬಿ.ಎಸ್ ಯಡಿಯೂರಪ್ಪ ಕೂಡ ಹೋದಾಗ ಕೊಡ್ತಿದ್ರು ಎಂದು ಶ್ಲಾಘಿಸಿದರು.