Asianet Suvarna News Asianet Suvarna News

ಸಿಎಂ ಸ್ಥಾನದ ತಿಕ್ಕಾಟದ ಮಧ್ಯೆ ಡಿಸಿಎಂ ಸ್ಥಾನಕ್ಕೆ ಪಟ್ಟು: ಕಾಂಗ್ರೆಸ್‌ಗೆ ರೆಡ್ಡಿ ಸಮುದಾಯ ಎಚ್ಚರಿಕೆ

ಯಡಿಯೂರಪ್ಪ ಇದ್ದಾಗ ಮೂರು ಜನ ರೆಡ್ಡಿ ಸಮುದಾಯದ ಸಚಿವರನ್ನು ಮಾಡ್ತಾ ಇದ್ರು. ಆದ್ರೆ ಕಳೆದ ಬಾರಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಕೊಟ್ಟರು. ಅದರ ಫಲವನ್ನು ಈಗ ಬಿಜೆಪಿ ಅನುಭವಿಸಿದೆ. ಈ ಸಾರಿ ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಮಾಡಲೇಬೇಕು: ರಾಮಚಂದ್ರ ರೆಡ್ಡಿ 

Reddy Community Demand for DCM Post to Congress MLA Ramalinga Reddy grg
Author
First Published May 16, 2023, 1:11 PM IST

ಬೆಂಗಳೂರು(ಮೇ.16):  ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ತಿಕ್ಕಾಟದ ನಡುವೆ ಬಿಟಿಎಂ ಲೇಔಟ್ ಶಾಸಕ ರಾಮಲಿಂಗ ರೆಡ್ಡಿಗೆ ಡಿಸಿಎಂ ಸ್ಥಾನ ಕೊಡಲೇಬೇಕು ಅಂತ ರಾಮಲಿಂಗ ರೆಡ್ಡಿ ಪರ ರೆಡ್ಡಿ ಸಮುದಾಯ ಪಟ್ಟು ಹಿಡಿದಿದೆ.

ಈ ಬಗ್ಗೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೆಡ್ಡಿ ಸಮುದಾಯದ ಅಧ್ಯಕ್ಷ ರಾಮಚಂದ್ರ ರೆಡ್ಡಿ ಅವರು, ಈಗ ಸಚಿವ ಸಂಪುಟ ರಚನೆ ಆಗ್ತಾ ಇದೆ. ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಆಗಿದ್ರು, ನಂತರ ರಾಮಲಿಂಗಾ ರೆಡ್ಡಿ ಅವರನ್ನು ಬೆಳೆಸಿಕೊಂಡು ಬಂದ್ವಿ. ರಾಮಲಿಂಗಾರೆಡ್ಡಿ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗಿಂತಲೂ ಹೆಚ್ಚು ಬಾರಿ ರಾಮಲಿಂಗಾರೆಡ್ಡಿ ಶಾಸಕರಾಗಿದ್ದಾರೆ ಅಂತ ತಿಳಿಸಿದ್ದಾರೆ. 

ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್‌

ಯಡಿಯೂರಪ್ಪ ಇದ್ದಾಗ ಮೂರು ಜನ ರೆಡ್ಡಿ ಸಮುದಾಯದ ಸಚಿವರನ್ನು ಮಾಡ್ತಾ ಇದ್ರು. ಆದ್ರೆ ಕಳೆದ ಬಾರಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಕೊಟ್ಟರು. ಅದರ ಫಲವನ್ನು ಈಗ ಬಿಜೆಪಿ ಅನುಭವಿಸಿದೆ. ಈ ಸಾರಿ ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಮಾಡಲೇಬೇಕು ಅಂತ ರಾಮಚಂದ್ರ ರೆಡ್ಡಿ ಆಗ್ರಹಿಸಿದ್ದಾರೆ. 

ಸಂಪುಟದಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕು. ಈ ಬಗ್ಗೆ ಈಗಾಗಲೇ ಎಐಸಿಸಿಗೆ ಪತ್ರ ಬರೆದಿದ್ದೇವೆ. ಒಂದೊಮ್ಮೆ ನಮ್ಮ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪದಿದ್ದರೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಲಿದೆ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ರೆಡ್ಡಿ ಸಮುದಾಯ ಎಚ್ಚರಿಕೆ ನೀಡಿದೆ. 

Follow Us:
Download App:
  • android
  • ios