ಬೆಂಗಳೂರು, [ಜ.07]: ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ದೋಸ್ತಿಯಲ್ಲಿ ಭಿನ್ನಮತ ಮತ್ತೆ ಮುನ್ನಲೆಗೆ ಬಂದಿದೆ. 

ನಿಗಮ ಮಂಡಳಿ ಆಯ್ಕೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಅಸ್ತಕ್ಷೇಪ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ಇನ್ನು ಈ ಬಗ್ಗೆ ಸಚಿವ ಎಚ್. ಡಿ. ರೇವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಿಗಮ ಮಂಡಳಿ ವಿಚಾರದಲ್ಲಿ ಕಾಂಗ್ರೆಸ್ ನವರು JDS ಮಾತು ಕೇಳಬೇಕು. ಇಲ್ಲದಿದ್ರೆ ನಮ್ಮ ದಾರಿ ನಮಗೆ ಅವರ ದಾರಿ ಅವರಿಗೆ ಎಂದು ಕಡ್ಡಿ ಮುರಿದಂತೆ ಹೇಳಿದರು.

ನಿಗಮ ಮಂಡಳಿ: JDS ನಡೆಗೆ ಸಿಡಿದೆದ್ದ ಸಿದ್ದರಾಮಯ್ಯ..!

ಹಾಸನದಲ್ಲಿ ನಾವು 6 ಜನ ಶಾಸಕರಿದ್ದೇವೆ, ನಮ್ಗೂ ನ್ಯಾಯ ಸಿಗ್ಬೇಕು.  ನಮ್ಮ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬಳಿ ಕೇಳುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿಯೂ ಕೇಳುತ್ತೇವೆಂದ ರೇವಣ್ಣ ಆಕ್ರೋಶದಿಂದ ಮಾತನಾಡುತ್ತಲೇ ತೆರಳಿದ್ದಾರೆ. ರೇವಣ್ಣ ಅವರ ಈ ಮಾತು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. 

ನಿಗಮ ಮಂಡಳಿ:ಐದು ಕೈ ಶಾಸಕರಿಗಿಲ್ಲ 'ಕುಮಾರ' ಕೃಪೆ, ಮತ್ತೆ ಭುಗಿಲೆದ್ದ ಅಸಮಧಾನ

ಕಾಂಗ್ರೆಸ್ ಕಳುಹಿಸಿದ್ದ 19 ನಿಗಮ ಮಂಡಳ ಪೈಕಿ 14 ಮಂಡಳಿಗಳಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನುಳಿದ 5 ನಿಗಮ ಮಂಡಳಿಗಳಿಗೆ ಬ್ರೇಕ್ ಹಾಕಿದ್ದಾರೆ.

ಇದ್ರಿಂದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದ್ದು, ಹೈಕಮಾಂಡ್ ಓಕೆ ಮಾಡಿದ ಪಟ್ಟಿಯಲ್ಲಿನ ಕೆಲ ಹೆಸರುಗಳನ್ನು ಕುಮಾರಸ್ವಾಮಿ ತಡೆದಿರುವುದು ಎಷ್ಟು ಸರಿ ಎಂದು ಸಮನ್ವ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಿಸಿದ್ದಾರೆ.

ಅಷ್ಟೇ ಜೆಡಿಎಸ್ ನಡೆ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ದೂರು ನೀಡಿದ್ದಾರೆ.