ಬೆಂಗಳೂರು, [ಜ. 06]: ದೋಸ್ತಿಗಳ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಸಿಎಂ ಅಂಕಿತ ಹಾಕಿದ್ದಾರೆ. ಆದರೂ ಕಾಂಗ್ರೆಸ್ ನಲ್ಲಿ ಅಸಮಾಧಾನ ಮುಂದುವರೆದಿದೆ. 

ಏಕೆಂದರೆ ಕಾಂಗ್ರೆಸ್ ಹೈಕಮಾಂಡ್​ ಶಿಫಾರಸು ಮಾಡಿದ್ದ 19 ಶಾಸಕರ ಪೈಕಿ 14 ಶಾಸಕರಿಗಷ್ಟೇ ಸಿಎಂ ಮಣೆ ಹಾಕಿದ್ದಾರೆ. ಉಳಿದ 5 ಶಾಸಕರ ಅನುಮೋದನೆಗೆ ಸಿಎಂ ಬ್ರೇಕ್​ ಹಾಕಿದ್ದಾರೆ. 

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ಈ ಮೂಲಕ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ದೋಸ್ತಿ ಸರ್ಕಾರದಲ್ಲಿ ಮತ್ತೆ ಫೈಟಿಂಗ್ ಶುರುವಾಗಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಕಳುಹಿಸಿದ್ದ  ಪಟ್ಟಿಯಲ್ಲಿ ಟಿ.ವೆಂಕಟರಮಣಯ್ಯ-ಅಧ್ಯಕ್ಷರು, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಎಸ್.ಎನ್.ಸುಬ್ಬಾರೆಡ್ಡಿ- ಅಧ್ಯಕ್ಷರು, ರಾಜ್ಯ ರೇಷ್ಮೆ ಕೈಗಾರಿಕೆ ಮಂಡಳಿ, ಎನ್.ಎ. ಹ್ಯಾರಿಸ್- ಅಧ್ಯಕ್ಷರು, ಬಿಎಂಟಿಸಿ, ಎಸ್.ಟಿ. ಸೋಮಶೇಖರ್- ಅಧ್ಯಕ್ಷರು, ಬಿಡಿಎ, ಡಾ. ಕೆ. ಸುಧಾಕರ್- ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಿಸಲಾಗಿತ್ತು.

ಆದ್ರ ಈ ಐದು ನಿಗಮ ಮಂಡಳಿಗೆಳಿಗೆ ಕುಮಾರಸ್ವಾಮಿ ತಡೆಹಿಡಿದ್ದಾರೆ. ಇದು ಮೇಲ್ನೋಟಕ್ಕೆ ಜೆಡಿಎಸ್ ಖಾತೆ ವ್ಯಾಪ್ತಿಯ ನಿಗಮ ನೇಮಕಕ್ಕೆ ಸಿಎಂ ಬ್ರೇಕ್ ಹಾಕಿರಬಹುದು. ಆದ್ರೆ, ಇದರ ಹಿಂದೆ ದೊಡ್ಡ ಗೌಡರು ಇದ್ದಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.