ಜೆಡಿಎಸ್‌ನವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಮಧು ಬಂಗಾರಪ್ಪ
ಬಿಜೆಪಿ ಜತೆ ಮೈತ್ರಿಗೆ ಮೊದಲು ಜೆಡಿಎಸ್‌ನವರು ಕಾಂಗ್ರೆಸ್ ಕಮ್ಯೂನಲ್ ಪಕ್ಷ ಅಂತ ಆರೋಪ ಮಾಡುತ್ತಿದ್ದರು. ಈಗ ಇವರ ಕತೆ ಏನಾಯ್ತು? ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ತತ್ವ ಸಿದ್ಧಾಂತ ಬದಲಾದ ಬಳಿಕ ಜೆಡಿಎಸ್‌ನ ಅನೇಕ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ದ.ಕ. ಜಿಲ್ಲೆಯಲ್ಲೂ ಅನೇಕರು ಸಂಪರ್ಕದಲ್ಲಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಮಂಗಳೂರು (ಸೆ.25): ಬಿಜೆಪಿ ಜತೆ ಮೈತ್ರಿಗೆ ಮೊದಲು ಜೆಡಿಎಸ್‌ನವರು ಕಾಂಗ್ರೆಸ್ ಕಮ್ಯೂನಲ್ ಪಕ್ಷ ಅಂತ ಆರೋಪ ಮಾಡುತ್ತಿದ್ದರು. ಈಗ ಇವರ ಕತೆ ಏನಾಯ್ತು? ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ತತ್ವ ಸಿದ್ಧಾಂತ ಬದಲಾದ ಬಳಿಕ ಜೆಡಿಎಸ್‌ನ ಅನೇಕ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ದ.ಕ. ಜಿಲ್ಲೆಯಲ್ಲೂ ಅನೇಕರು ಸಂಪರ್ಕದಲ್ಲಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ರಾಜ್ಯದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್: ರಾಜ್ಯದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿದ್ದು, ಅವುಗಳನ್ನು 2 ಸಾವಿರಕ್ಕೆ ಏರಿಸಲಾಗುವುದು. ಪ್ರತಿ 2-3 ಗ್ರಾ.ಪಂ.ಗಳಿಗೆ ಒಂದು ಶಾಲೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1-3ರಷ್ಟು ಶಾಲೆಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
Mangaluru: ಮೀನುಗಾರಿಕಾ ಬಂದರಿನಲ್ಲಿ 'Eid' ಬ್ಯಾನರ್ ವಿವಾದ: ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ!
ಈ ವರ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮೂರು ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಕಟ್ಟಿ, ಪಾಸಾಗಿ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗಿದೆ. ಈ ವರ್ಷದಿಂದ ಸಪ್ಲಿಮೆಂಟರಿ ಪರೀಕ್ಷೆ ಎನ್ನುವುದು ಇರುವುದಿಲ್ಲ. ಮೂರೂ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆಗಳೆಂದೇ ಪರಿಗಣಿಸಲಾಗುವುದು. ಇದನ್ನು 10ನೇ ತರಗತಿಗೂ ವಿಸ್ತರಿಸಲಾಗುತ್ತದೆ. ಈ ವರ್ಷ ಬೋರ್ಡ್ ಪರೀಕ್ಷೆ ಬರೆದ 1.30 ಲಕ್ಷ ವಿದ್ಯಾರ್ಥಿಗಳ ಪೈಕಿ 42 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿಗೆ ದಾಖಲಾಗಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಬ್ರಿಡ್ಜ್ ಕೋರ್ಸ್: ಸಪ್ಲಿಮೆಂಟರಿ (ಬೋರ್ಡ್) ಪರೀಕ್ಷೆ ಬರೆದು ಪಾಸಾಗಿ ಕಾಲೇಜು ಸೇರುವವರಿಗೆ ಬ್ರಿಡ್ಜ್ ಕೋರ್ಸ್ ಕೊಡಿ ಅಂತ ಉನ್ನತ ಶಿಕ್ಷಣ ಸಚಿವರಲ್ಲಿ ಹೇಳಿದ್ದೇನೆ. ಕಾಲೇಜು ಸೇರುವಾಗ ವಿಳಂಬವಾದರೆ ವಿದ್ಯಾರ್ಥಿಗಳಿಗೆ ಇದು ಸಹಾಯವಾಗಲಿದೆ ಎಂದರು.
ಬ್ಯಾಗ್ ತೂಕ ಇಳಿಕೆ: ರಾಜ್ಯದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ, ಆ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗುವುದು. ಇದಲ್ಲದೆ, ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಬೇಕಾಗಿದೆ. ಬ್ಯಾಗ್ ತೂಕವನ್ನು ಈಗಿನ ಭಾರಕ್ಕಿಂದ ಮೂರನೇ ಒಂದರಷ್ಟು ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅಭ್ಯಾಸ ಪ್ರಾರಂಭಿಸಲಾಗಿದೆ. ವಾರಕ್ಕೆರಡು ಬಾರಿ ಚಿಕ್ಕಿ ಅಥವಾ ಮೊಟ್ಟೆಯನ್ನು 10ನೇ ತರಗತಿವರೆಗೂ ವಿಸ್ತರಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಎರಡು ವರ್ಷದಿಂದ ಜಾರಿಯಾಗಿದ್ದು, ಅದರ ಬದಲು ಸ್ಟೇಟ್ ಎಜ್ಯುಕೇಶನ್ ಪಾಲಿಸಿ ತರುತ್ತಿದ್ದೇವೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸ್ಟೇಟ್ ಎಜ್ಯುಕೇಶನ್ ಪಾಲಿಸಿ ಜಾರಿಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಕೃಪಾ ಆಳ್ವ, ಶುಭೋದಯ ಆಳ್ವ, ಬಿ. ಇಬ್ರಾಹಿಂ, ಸಲೀಂ, ಅಶ್ವನ್ ರೈ, ಪದ್ಮರಾಜ್ ಇದ್ದರು.
ದ.ಕ.ದಲ್ಲಿ ಕಾಂಗ್ರೆಸ್ ಗೆಲ್ಲಿಸ್ತೇವೆ...: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ.ದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಚಾಲೆಂಜ್ ತೆಗೆದುಕೊಳ್ಳಲಿದ್ದೇವೆ. ಇಲ್ಲಿ ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಗೆಲ್ಲುತ್ತಿದ್ದಾರೆ. ಅದರಿಂದಲೇ ಸೋಲಲಿದ್ದಾರೆ. ಜನಾರ್ದನ ಪೂಜಾರಿಯಂಥವರು ಗೆದ್ದ ಕ್ಷೇತ್ರ ಇದು. 2004ರ ಹಿಂದಿನ ಸ್ಥಿತಿ ಮತ್ತೆ ಮರುಕಳಿಸಲಿದೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ಕೆಲಸಗಳಿಗೆ ಜನರು ಸ್ಪಂದಿಸಲಿದ್ದಾರೆ ಎಂದು ಲೋಕಸಭಾ ಚುನಾವಣೆಯ ದ.ಕ. ಜಿಲ್ಲಾ ವೀಕ್ಷಕರೂ ಆಗಿರುವ ಮಧು ಬಂಗಾರಪ್ಪ ತಿಳಿಸಿದರು.
ಆಯಾ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿ ಮುಂಬರುವ ಲೋಕಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ವರದಿ ನೀಡಲು ವೀಕ್ಷಕರಿಗೆ 15 ದಿನ ಸಮಯಾವಕಾಶ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಅಭ್ಯರ್ಥಿ ಆಯ್ಕೆ ಕಾರ್ಯ ತುಸು ಸುಲಭ ಎಂದರು. ಸರ್ಕಾರ ರಚನೆಯಾಗಿ 100 ದಿನಗಳಲ್ಲಿ ಗ್ಯಾರಂಟಿ ಕಾರ್ಯಕ್ರಮಗಳಿಂದಲೇ ವಿರೋಧಿಗಳಿಗೆ ಉತ್ತರ ನೀಡಿದ್ದೇವೆ. ಇಂಥ ಟೀಕೆ ಮಾಡಿದ್ದಕ್ಕೆ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನು ಹಾಳುಗೆಡವಿದ್ದಕ್ಕೆ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯದ ಸಂಸದರಿಗೆ ಮೋದಿ ಬಳಿ ಹೋಗಲು ಧೈರ್ಯವಿಲ್ಲ: ಸಚಿವ ತಂಗಡಗಿ
ಪ್ರಣವಾನಂದ ಸ್ವಾಮೀಜಿಯ ಲೆಕ್ಕಕ್ಕೇ ತೆಗೆದುಕೊಂಡಿಲ್ಲ: ಪ್ರಣವಾನಂದ ಸ್ವಾಮೀಜಿ ನಮ್ಮ ಈಡಿಗ ಸಮುದಾಯದ ನಾಯಕ ಅಲ್ಲ. ಅವರದ್ದು ಹಿನ್ನೆಲೆಯನ್ನು ಕೆದಕಿ ನೋಡಿ. ಹಿಂದುಳಿವ ವರ್ಗದ ಕಾಳಜಿ ಅವರೊಬ್ಬರಿಗೇ ಇರುವುದಲ್ಲ. ಕಾಳಜಿ ಇರುವವರು ಸಾಕಷ್ಟು ಮಂದಿ ಇದ್ದಾರೆ. ನಾನು ಅವರನ್ನು ಲೆಕ್ಕಕ್ಕೇ ತಕೊಂಡಿಲ್ಲ. ಸ್ವಾಮೀಜಿಯನ್ನು ಇಟ್ಕೊಂಡು ನಾನು ಮತ ಕೇಳಿಲ್ಲ ಎಂದು ಮಧು ಬಂಗಾರಪ್ಪ ಹರಿಹಾಯ್ದರು.