ಇಂದು ಪಶ್ಚಿಮ ಬಂಗಾಳ ಸಿಎಂ ಮಮತಾರನ್ನು ಭೇಟಿಯಾಗಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ!
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದು ಸಂಜೆ 4 ಗಂಟೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.
ಕೋಲ್ಕತಾ (ಮಾ.24): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದು ಸಂಜೆ 4 ಗಂಟೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ. ಗುರುಮಿಟ್ಕಲ್‌ನಲ್ಲಿರುವ ಕುಮಾರಸ್ವಾಮಿ ಮಧ್ಯಾಹ್ನದ ವೇಳೆಗೆ ಕೊಲ್ಕತ್ತಾಗೆ ಪ್ರವಾಸ ಮಾಡಲಿದ್ದಾರೆ. ತೃತೀಯ ರಂಗ ರಚನೆಗೆ ಎಚ್‌ಡಿಕೆ ಬೆಂಬಲಿಸಿದ್ದು, ಬಿಜೆಪಿ ವಿರುದ್ದ ಪರ್ಯಾಯ ಶಕ್ತಿ ರಚನೆಗೆ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.
ಕಾಂಗ್ರೆಸ್ಸೇತರ ಪಕ್ಷಗಳ ಜೊತೆ ನಿರಂತರ ಸಭೆ ಮತ್ತು ಚರ್ಚೆ ನಡೆಸುತ್ತಿರುವ ಮಮತಾ ಬ್ಯಾನರ್ಜಿ, ಒಂದೇ ವಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪ್ರಮುಖ ಮೂರು ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದೇ ವೇಳೆ ಮಮತಾ ಬ್ಯಾನರ್ಜಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ. ಉಭಯ ನಾಯಕರ ನಡುವೆ ಅನೇಕ ವಿಚಾರ ಚರ್ಚೆಯಾಗುವ ಸಾಧ್ಯತೆಯಿದ್ದು, ರಾಜ್ಯ ಚುನಾವಣೆಗೆ ಟಿಎಂಸಿ ಬೆಂಬಲವನ್ನು ಎಚ್‌ಡಿಕೆ ಕೇಳಲಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಕಂಟ್ರೋಲ್ ರೂಂ ತೆರೆದ ಐಟಿ ಇಲಾಖೆ: ದುಡ್ಡು ಹಂಚೋಕೆ ಹೋದ್ರೆ ಜೈಲು ಗ್ಯಾರಂಟಿ!
ರಾಜ್ಯ ಚುನಾವಣೆಗೆ ಎಚ್‌ಡಿಕೆ ಪರ ಮಮತಾ ಬ್ಯಾನರ್ಜಿ ಪ್ರಚಾರ ಮಾಡಲಿದ್ದು, ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೇರಿದಂತೆ ರಾಜ್ಯ ಚುನಾವಣೆಯ ಬಗ್ಗೆ ಎಚ್‌ಡಿಕೆ ಜೊತೆ ಚರ್ಚಿಸಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಮಮತಾ ಬ್ಯಾನರ್ಜಿ, ಇತ್ತೀಚೆಗಷ್ಟೇ ರಾಹುಲ್ ಗಾಂಧಿ ನಾಯಕತ್ವದಿಂದ ಹೊರತುಪಡಿಸಿ ಬೇರೆಯವರ ನಾಯಕತ್ವದಿಂದ ಮಾತ್ರ ಮೋದಿ ಮಣಿಸಲು ಸಾಧ್ಯ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ಅದೇ ನಿಟ್ಟಿನಲ್ಲಿ ಪರ್ಯಾಯ ತಂಡ ರಚನೆಯಲ್ಲಿ ಬ್ಯುಸಿಯಾಗಿರುವ ಮಮತಾ ಬ್ಯಾನರ್ಜಿ, ಕಳೆದ ವಾರವಷ್ಟೆ ಅಖಿಲೇಶ್ ಯಾದವ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಸ್ಪರ್ಧೆ ಹೆಸರಲ್ಲಿ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ: ಬಿ.ಎಸ್.ಯಡಿಯೂರಪ್ಪ
ನಿನ್ನೆ ಒಡಿಶಾ ಸಿಎಂ ನವೀನ್ ಪಾಟ್ನಯಕ್ ಭೇಟಿ ಮಾಡಿದ್ದು, ಇದೀಗ ಎಚ್‌ಡಿಕೆಯನ್ನು ಭೇಟಿ ಮಾಡಲಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಪರ ಪ್ರಾದೇಶಿಕ ಪಕ್ಷಗಳು ನಿಲ್ಲುವಂತೆ ಬ್ಯಾನರ್ಜಿ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್ಸೇತರ ಪರ್ಯಾಯ ಶಕ್ತಿ ರಚನೆಗೆ ಪ್ಲಾನ್ ಹಾಕಿಕೊಂಡಿದ್ದಾರೆ. ಪ್ರಧಾನಿ ಮೋದಿ ವಿರುದ್ದ ಮತ್ತೊಂದು ಮಹಾಘಟಬಂಧನ್‌ಗೆ ತಯಾರಿ ನಡೆಸಿದ್ದು, ಟಿಎಂಸಿ ನಾಯಕಿ ಬ್ಯಾನರ್ಜಿ ರಾಜ್ಯದ ಜೆಡಿಎಸ್ ಪಕ್ಷದ ನೆರವನ್ನು ಕೋರಿದ್ದಾರೆ.