ವಿಧಾನಸಭಾ ಚುನಾವಣೆಗೂ ಮುನ್ನ ಕಂಟ್ರೋಲ್ ರೂಂ ತೆರೆದ ಐಟಿ ಇಲಾಖೆ: ದುಡ್ಡು ಹಂಚೋಕೆ ಹೋದ್ರೆ ಜೈಲು ಗ್ಯಾರಂಟಿ!

ಏಪ್ರಿಲ್‌ ಅಥವಾ ಮೇನಲ್ಲಿ ಕರ್ನಾಟಕ ವಿಧಾನಸಭಾ ನಡೆಯುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಆಮಿಷವೊಡ್ಡುವವರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದ್ದು, ಚುನಾವಣೆ ಸಂಬಂಧ ದೂರುಗಳಿಗಾಗಿ ಕಂಟ್ರೋಲ್ ರೂಂನ್ನು ತೆರೆದಿದೆ. 

IT Department Opened The Control Room Before Karnataka Assembly Election 2023 gvd

ಬೆಂಗಳೂರು (ಮಾ.24): ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ. ಎಎಪಿ, ಕೆಆರ್‌ಪಿಪಿ ಕೂಡ ಕಮಾಲ್‌ ಮಾಡಲು ತಯಾರಿ ನಡೆಸಿದ್ದು, ಏಪ್ರಿಲ್‌ ಅಥವಾ ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಆಮಿಷವೊಡ್ಡುವವರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದ್ದು, ಚುನಾವಣೆ ಸಂಬಂಧ ದೂರುಗಳಿಗಾಗಿ ಕಂಟ್ರೋಲ್ ರೂಂನ್ನು ತೆರೆದಿದೆ. ಈ ಮೂಲಕ ವಿಧಾನಸಭೆ ಚುನಾವಣೆಗೆ ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ.

ದಿನದ 24 ಗಂಟೆಯೂ ಐಟಿ ಇಲಾಖೆ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದ್ದು, ರಾಜಕೀಯ ಪಕ್ಷಗಳು ವ್ಯಕ್ತಿಗಳು ನೀಡುವ ನಗದು, ಯಾವುದೇ ವಸ್ತುಗಳನ್ನ ಉಡುಗೊರೆ ರೂಪದಲ್ಲಿ ಹಂಚುವುದು ಹಾಗೂ ಇತರೆ ಆಮಿಷಗಳನ್ನ ನೀಡುವ ಮಾಹಿತಿ ನೀಡುವಂತೆ ಮನವಿಯನ್ನು ಮಾಡಿದೆ. ಐಟಿ ಇಲಾಖೆ ತೆರೆದಿರುವ ಕಂಟ್ರೋಲ್ ರೂಂಗೆ ಟೋಲ್ ಫ್ರೀ ಸಂಖ್ಯೆ ಅಥವಾ ಇಮೇಲ್ ಮೂಲಕ ದೂರು ನೀಡಲು ಮನವಿ ಮಾಡಲಾಗಿದ್ದು, ಅದಕ್ಕಾಗಿ ಐಟಿ ಇಲಾಖೆ ಟೋಲ್ ಫ್ರೀ ನಂಬರ್ ಸಹ ವ್ಯವಸ್ಥೆ ಮಾಡಿದೆ. 

ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆ ಸಾಧ್ಯತೆ: ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗದ ಪತ್ರ

ಟೋಲ್ ಫ್ರೀ ಸಂಖ್ಯೆ: 1800 425 2115
ದೂರವಾಣಿ ಸಂಖ್ಯೆ: 080 22861126
ಮೊಬೈಲ್: 8277422825, 8277413614
ಇಮೇಲ್: cleankarnatakaelection@incometax.gov.in ಗೆ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ್ದು, ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನ ಗೌಪ್ಯವಾಗಿ ಇಡಲಾಗುವುದು ಎಂದು ಐಟಿ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

IT Department Opened The Control Room Before Karnataka Assembly Election 2023 gvd

Latest Videos
Follow Us:
Download App:
  • android
  • ios