Asianet Suvarna News Asianet Suvarna News

ಬಿಬಿಎಂಪಿಯ ಚುನಾವಣೆ ಮುಂದೂಡಲು ಬಿಜೆಪಿ ಸರ್ಕಾರ ಕುತಂತ್ರ: ಎಚ್‌ಡಿಕೆ

ಬಿಜೆಪಿ ಸಚಿವರು ಬಿಬಿಎಂಪಿ ಚುನಾವಣೆ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು ಕುತಂತ್ರ ನಡೆಸಿ ನಮ್ಮ ಶಕ್ತಿಯನ್ನು ಕುಂದಿಸುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

jds leader hd kumaraswamy slams to bjp govt over bbmp election gvd
Author
Bangalore, First Published Aug 15, 2022, 5:05 AM IST

ಬೆಂಗಳೂರು (ಆ.15): ಬಿಜೆಪಿ ಸಚಿವರು ಬಿಬಿಎಂಪಿ ಚುನಾವಣೆ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು ಕುತಂತ್ರ ನಡೆಸಿ ನಮ್ಮ ಶಕ್ತಿಯನ್ನು ಕುಂದಿಸುವ ಹುನ್ನಾರ ನಡೆಸಿದ್ದಾರೆ. ಅದಕ್ಕೆ ನಾವು ತಕ್ಕ ಉತ್ತರ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕರ್ತರನ್ನು ಹುರಿದುಂಬಿಸಿದರಲ್ಲದೆ, ಬಿಜೆಪಿಯವರು ಬಿಬಿಎಂಪಿ ಚುನಾವಣೆ ಮುಂದೂಡಲು ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ದಾಸರಹಳ್ಳಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಕಾರ್ಯಾಗಾರದಲ್ಲಿ ಪಕ್ಷದ ಸಂಘಟನೆಯಲ್ಲಿ ಬೂತ್‌ ಸಮಿತಿಗಳ ಮಹತ್ವ ಮತ್ತು ರಚನೆ ವಿಷಯಾಧಾರಿತ ಚರ್ಚೆಗಳು ನಡೆದವು. 

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು, ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್‌ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಬೂತ್‌ಗಳನ್ನು ರಚಿಸಿ ಪಕ್ಷವನ್ನು ಸಂಘಟಿಸಿ ಬಲಗೊಳಿಸಬೇಕಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು. ಶಾಸಕ ಆರ್‌.ಮಂಜುನಾಥ್‌ ಮಾತನಾಡಿ, ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದ 12ಕ್ಕೆ 12 ವಾರ್ಡ್‌ಗಳಲ್ಲೂ ಜೆಡಿಎಸ್‌ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದೇನೆ ಎಂದರು.

ಎಚ್‌ಡಿಕೆ ಕುಟುಂಬ ನಂಗೆ ಬ್ಲಾಕ್ಮೇಲ್‌ ಮಾಡಿ ಹಣ ಪಡೆದಿತ್ತು: ಯೋಗೇಶ್ವರ್‌

ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌, ವಕ್ತಾರ ಮುಕುಂದರಾಜ್‌, ಮಾಧ್ಯಮ ಕಾರ್ಯದರ್ಶಿ ಪಿ.ಕೆ.ಚನ್ನಕೃಷ್ಣ, ಕಾರ್ಯಧ್ಯಕ್ಷ ಮುನೇಗೌಡ, ರಾಜಗೋಪಾಲನಗರ ವಾರ್ಡ್‌ ಅಧ್ಯಕ್ಷ ರುದ್ರೇಗೌಡ, ಚರಣ್‌ಗೌಡ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ದಾಸರಹಳ್ಳಿ ಕ್ಷೇತ್ರದ ಜನತೆಯ ಸೇವೆಗಾಗಿ ಕ್ಷೇತ್ರದ ಕಾರ್ಯಾಧ್ಯಕ್ಷ ಮುನೇಗೌಡ ಕೊಡುಗೆಯಾಗಿ ನೀಡಿರುವ ಉಚಿತ ಆ್ಯಂಬುಲೆಸ್ಸನನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು.

ಯಾವ ಪಕ್ಷದಲ್ಲೂ ನೈತಿಕತೆ ಉಳಿದಿಲ್ಲ: ಯಾವ ಪಕ್ಷದ ಮುಖಂಡರು ಹೇಳಿಕೆ ಕೊಟ್ಟರು ನಾನು ಇನ್ನು ಮುಂದೆ ತಲೆಕೆಡಿಸಿಕೊಳ್ಳೊಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಒತ್ತು ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಗರಕಹಳ್ಳಿಯಲ್ಲಿ ಶ್ರೀ ಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ವಿಚಾರಗಳನ್ನು ಮಾತನಾಡುವುದಕ್ಕೆ ಯಾವುದೇ ಪಕ್ಷಗಳಲ್ಲೂ ನೈತಿಕತೆ ಉಳಿದಿಲ್ಲ. ಇದಕ್ಕೆ ಹೆಚ್ಚಿನ ವ್ಯಾಖ್ಯಾನ ಕೊಡುವ ಅವಶ್ಯಕತೆಯೂ ಇಲ್ಲ. ಅವರು ಯಾವುದೋ ಒಂದು ಸಂದರ್ಭದಲ್ಲಿ ಈ ವಿಚಾರ ಮಾತನಾಡಿದ್ದಾರೆ. ಬಿಜೆಪಿಯವರು ಈ ವಿಷಯವನ್ನು ಬೇರೆ ರೀತಿ ಅರ್ಥ ಕಲ್ಪಿಸಿದ್ದಾರೆ. ಈ ವಿಚಾರ ಕುರಿತು ಪ್ರಿಯಾಂಕ್‌ ಖರ್ಗೆಯವರು ನಾನು ಕ್ಷಮೆ ಕೇಳುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ ಅಂತಲೂ ಹೇಳಿದ್ದಾರೆ. ಈ ವಿಚಾರಕ್ಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

ಚರ್ಚೆ ಬೇಡ: ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಅವರ ಬಗ್ಗೆ ಚರ್ಚೆ ಬೇಡ. ನಾನು ರಾಜಕೀಯಕ್ಕೆ ಬರೋದಕ್ಕೆ ಮುಂಚೆ ನನಗೆ ಕಮಿಷನ್‌ ಕೊಟ್ಟಿದ್ದೀನಿ ಅಂದಿದ್ದಾರೆ. ನಾನು ರೈತನಾಗಿ ಬಾಳೆ ತೋಟದ ವ್ಯವಸಾಯ ಮಾಡಬೇಕಾದರೆ ಪಾಪ ಅವರೇ ಬಂದು ಗಿಡ ನೆಟ್ಟಿಸಿ ಹೋಗಿದ್ದರು. ಮೆಗಾಸಿಟಿ ಹಗರಣದಲ್ಲಿ ಹಲವರಿಗೆ ಟೋಪಿ ಹಾಕಿ ದುಡ್ಡು ಸಂಪಾದನೆ ಮಾಡಿದ್ದರಲ್ಲ ಅವರು, ಆ ಹಣ ತಂದು ನನಗೆ ಕೊಟ್ಟಿದ್ದೆ ಎಂದು ಹೇಳಿದ್ದಾರೆ, ಆ ವಿಚಾರವನ್ನು ಜನರೇ ತೀರ್ಮಾನಿಸುತ್ತಾರೆ ಎಂದರು.

'ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ‌ ಇಟ್ಟಿದ್ದು ಇದೇ ಅಶ್ವಥ್ ನಾರಾಯಣ'

ಅವರು ನನ್ನ ಬಗ್ಗೆ ಮಾತನಾಡುವಾಗ ನೀರಾವರಿ ಯೋಜನೆ ವಿಚಾರವಾಗಿ ಲಘುವಾಗಿ ಹೇಳಿದರಲ್ಲ, ನಾನು ಆ ವಿಚಾರವಾಗಿ ಮಾತನಾಡಿದ್ದೇನೆ. ನಾನು ಅವರಷ್ಟುನೀರಾವರಿ ತಜ್ಞ ಅಲ್ಲ ಅಂತ ಹೇಳಿ ಅವರಿಗೆ ಸರ್ಟಿಫಿಕೇಟ್‌ ಕೊಟ್ಟಿದ್ದೇನೆ. ಆ ವಿಚಾರದಲ್ಲಿ ಚರ್ಚೆ ಏಕೆ ಎಂದರು. ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಜೆಡಿಎಸ್‌ ಮುಖಂಡ ಗರಕಹಳ್ಳಿ ಕೃಷ್ಣೇಗೌಡ ಇತರರಿದ್ದರು.

Follow Us:
Download App:
  • android
  • ios