'ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ ಇಟ್ಟಿದ್ದು ಇದೇ ಅಶ್ವಥ್ ನಾರಾಯಣ'
ಸಚಿವ ಅಶ್ವಥ್ ನಾರಾಯಣ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಟಾಕ್ ವಾರ್ ಮುಂದುವರಿದೆ.
ರಾಮನಗರ, (ಆಗಸ್ಟ್.11): ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂಬ ಅಶ್ವಥ್ ನಾರಾಯಣ ಹೇಳಿಕೆಗೆ ಮಾಜಿ ಸಿಎಂ ಎಚ್‌ಡಿಕೆ ಕಿಡಿಕಾರಿದ್ದಾರೆ.
ಚಿನ್ನಪಟ್ಟಣದಲ್ಲಿ ಇಂದು(ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾನು ಪಂಚತಾರ ಹೋಟೆಲ್ ನಲ್ಲಿ ಇದ್ದಿದ್ದಕ್ಕೆ ಇಷ್ಟೊಂದು ಟೀಕೆ ಟಿಪ್ಪಣಿ ಮಾಡ್ತಾರಲ್ಲ, ಪ್ರತಿನಿತ್ಯ ಅವರ ದೆಹಲಿ ನಾಯಕರು ಬರುತ್ತಾರಲ್ಲ, ಅವರೆಲ್ಲಾ ಎಲ್ಲಿ ವಾಸ್ತವ್ಯ ಹೂಡುತ್ತಾರೆ...? ಅದೇ ಕುಮಾರಸ್ವಾಮಿ ಹೋದರೆ ತಪ್ಪು, ನಾನು ಪಂಚತಾರಾ ಹೋಟೆಲ್ ನಲ್ಲೂ ಮಲಗಿದ್ದೀನಿ, ಗುಡಿಸಲಿನಲ್ಲೂ ಮಲಗಿದ್ದೀನಿ ಅಶ್ವಥ್ ನಾರಾಯಣ ಅವರಿಂದ ನಾನೇನು ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ ಗುಡುಗಿದರು.
ಮಿಸ್ಟರ್ ಬ್ಲಾಕ್‌ಮೇಲರ್, ಅದೇನೋ ಬಿಚ್ಚಿಡ್ತಿಯೋ ಬಿಚ್ಚಿಡಪ್ಪ: ಎಚ್‌ಡಿಕೆಗೆ ಅಶ್ವತ್ಥನಾರಾಯಣ ಸವಾಲ್
ಅಶ್ವಥ್ ನಾರಾಯಣ ಬಂದಿರೋದೆ ನಕಲಿ ಸರ್ಟಿಫಿಕೇಟ್ ಮಾಡುವ ಮುಖಾಂತರ ಬಂದಿರೋದು, 2010 ರಲ್ಲಿ ಯಡಿಯೂರಪ್ಪ ಮುಖ್ಯಂತ್ರಿಯಾಗಿದ್ದ ವೇಳೆ, ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ ಇಟ್ಟಿದ್ದು ಇದೇ ಅಶ್ವಥ್ ನಾರಾಯಣ ಅವರಲ್ಲವೇ...15 ಸಾವಿರ ಕೋಟಿ ಕಾಮಗಾರಿ ಎಂದು ಹಗಲು ದರೋಡೆ ಮಾಡಲು ಹೊರಟಿದ್ದರು, ದಾಖಲೆಗಳನ್ನು ಜನರ ಮುಂದೆ ನಾವಿಡಲು ಹೊರಟಾಗ ಬೆಂಕಿ ಇಟ್ಟ ತನಿಖೆ ಮಾಡಿಸಿದ್ರಾ...? ಇದರ ಬಗ್ಗೆ ಯಾವುದೇ ಚರ್ಚೆ ಯಾಗಲಿಲ್ಲ, ಹೋಟೆಲ್ ವಿಚಾರ ಒಂದು ಬಿಟ್ಟರೆ ನನ್ನ ಮೇಲೆ ಚರ್ಚೆ ಮಾಡಲು ಬೇರೆ ವಿಷಯ ಅವರಿಗೆ ಇಲ್ಲ, ನಾನು ಸಿಎಂ ಆಗಿದ್ದ ವೇಳೆ ನನಗೆ ಸಿದ್ದರಾಮಯ್ಯ ಅವರು ಸರ್ಕಾರಿ ಬಂಗಲೆ ಕೊಡಲಿಲ್ಲ, ಕಾರಿಗೆ ಪೆಟ್ರೋಲ್ ಕೂಡ ನಾನು ಕ್ಲೇಮ್ ಮಾಡಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ರೆಸ್ಟ್ ಮಾಡೋಕೆ ಅಂತಾ ಹೋಟೆಲ್ ನಲ್ಲಿ ಇದ್ದೆ, ಅದೇ ದೊಡ್ಡ ತಪ್ಪು ಅಂತಾ ಮಾತನಾಡ್ತಾರಲ್ಲ, ಈಗೀನ ಸಿಎಂ, ಹಿಂದಿನ ಸಿಎಂ ಗಳು ಪಂಚತಾರ ಹೋಟೆಲ್ ನಲ್ಲಿ ಮೀಟಿಂಗ್ ಮಾಡಿಲ್ಲವೇ, ಕುಮಾರಸ್ವಾಮಿ ಮಾತ್ರ ಇರೋದು ಮಹಾನ್ ಅಪರಾಧಾನ...? ಎಂದು ಪ್ರಶ್ನಿಸಿದರು.
ನಾನು ಏನೇ ಮಾತನಾಡಿದ್ರೂ ದಾಖಲೇ ಸಮೇತ ಬಂದು ಸದನದಲ್ಲಿ ಚರ್ಚೆ ಮಾಡ್ತೇನೆ, ನಾನು ಸುಖಾ ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ, ಅಶ್ವಥ್ ನಾರಾಯಣ ದುಡ್ಡಿನ ಮದದಲ್ಲಿ ಮಾತನಾಡುತ್ತಿದ್ದಾರೆ. ದುಡ್ದು ರಕ್ಷಣೆ ಮಾಡೊದಿಲ್ಲ ಅಶ್ವಥ್ ನಾರಾಯಣ ದುಡ್ಡಿನ ಮದವನ್ನು ಇಳಿಸುವುದು ಹೇಗೆ ಅಂತಾ ಕುಮಾರಸ್ವಾಮಿಗೆ ಗೊತ್ತಿದೆ ಎಂದು ಹೇಳುವ ಮೂಲಕ ಸಚಿವ ಅಶ್ವಥ್ ನಾರಾಯಣ ವಿರುದ್ದ ಕಿಡಿಕಾರಿರು.