Asianet Suvarna News Asianet Suvarna News

ಲೂಟಿ ಗ್ಯಾಂಗ್‌ ಓಡಿಸಲು ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಆಳಂದ ಮೂಲಕ ತೊಗರಿ ಕಣಜ ಕಲಬುರಗಿಗೆ ಸೋಮವಾರ ಪ್ರವೇಶ ಮಾಡಿತು. ಬೀದರ್‌ ಜಿಲ್ಲೆಯಿಂದ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ 2ನೇ ಹಂತದ ಯಾತ್ರೆ ಶುರುವಾಗಿದ್ದು ಅದು ಕಲ್ಯಾಣ ನಾಡಿನ ಜಿಲ್ಲೆಗಳಲ್ಲಿ ಜನಮನ ಸೆಳೆಯುತ್ತ ಸಾಗಿದೆ.

JDS Leader HD Kumaraswamy Slams On BJP And Congress At Kalaburagi gvd
Author
First Published Jan 10, 2023, 1:00 AM IST

ಕಲಬುರಗಿ/ ಆಳಂದ (ಜ.10): ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಆಳಂದ ಮೂಲಕ ತೊಗರಿ ಕಣಜ ಕಲಬುರಗಿಗೆ ಸೋಮವಾರ ಪ್ರವೇಶ ಮಾಡಿತು. ಬೀದರ್‌ ಜಿಲ್ಲೆಯಿಂದ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ 2ನೇ ಹಂತದ ಯಾತ್ರೆ ಶುರುವಾಗಿದ್ದು ಅದು ಕಲ್ಯಾಣ ನಾಡಿನ ಜಿಲ್ಲೆಗಳಲ್ಲಿ ಜನಮನ ಸೆಳೆಯುತ್ತ ಸಾಗಿದೆ. ಆಳಂದದ ಖಜೂರಿಯಿಂದ ಜಿಲ್ಲೆಗೆ ಕಾಲಿಟ್ಟಕುಮಾರಸ್ವಾಮಿ ಬಸ್‌ ನಿಲ್ದಾಣದಲ್ಲಿ ಮಾತನಾಡುತ್ತ ಕೆಲವರ ಕಪಿಮುಷ್ಟಿಯಲ್ಲಿ ಖಜೂರಿ ರಾಜಕಾರಣ ಇದೆ ಅದರಿಂದ ಖಜೂರಿಯನ್ನು ಮುಕ್ತಗೊಳಿಸಬೇಕು ಎಂದರು.

ಆಳಂದ ಕ್ಷೇತ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕಲಬುರ್ಗಿ ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬರದು ನಮ್ಮ ಸರಕಾರ ಬಂದಲ್ಲಿ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡುವ ಯೋಜನೆ ತಮ್ಮದಿದೆ ಎಂದರು. ಜನಪರ ಕಾಳಜಿ ಇಲ್ಲದ ಲೂಟಿಗ್ಯಾಂಗ್‌ನವರು ವಿಧಾನಸೌಧದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಓಡಿಸುವ ಕೆಲಸ ಮಾಡಬೇಕಿದೆ. ಹಾಗಾಗಿ, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಒಂದು ಅವಕಾಶ ಕೊಡಿರೆಂದರು.

ಸಮ್ಮಿಶ್ರ ಸರ್ಕಾರ ಉರುಳಿಸಿದವರ ತನಿಖೆಗೆ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ಖಜೂರಿಯಲ್ಲಿ ಸ್ವಾಗತ: ತಾಲೂಕಿನ ಗಡಿಗ್ರಾಮ ಖಜೂರಿಯಲ್ಲಿ ಪಂಚರತ್ನ ರಥಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲಾಯ್ತು. ವಿಧಾನಸೌಧನಲ್ಲಿ ಸೇರಿ ಬಿಜೆಪಿಗರು ಲೂಟಿ ಹೊಡೆಯುತ್ತಿದ್ದಾರೆ. ಪ್ರಗತಿ ಕೃಷ್ಣಾ ಬ್ಯಾಂಕ್‌ನ ಭ್ರಷ್ಟಾಚಾರವು ಈ ಭಾಗದಲ್ಲೂ ವ್ಯಾಪಿಸಿದೆ, ಇದನ್ನು ಶೀಘ್ರವೇ ಬಹಿರಂಗ ಪಡಿಸಲಾಗುವುದು. ನಮಗೆ ಅಧಿಕಾರ ನೀಡಿ, ಕ್ಷೇತ್ರದಲ್ಲಿನ ಪಕ್ಷದ ಅಭ್ಯರ್ಥಿ ಮಹೇಶ್ವರಿ ವಾಲಿ ಅವರನ್ನು ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಜನತೆಯನ್ನು ಕೈ ಮುಗಿದು ಬೇಡಿಕೊಂಡರು.

ರಾಜ್ಯದ ರೈತರ, ಕಾರ್ಮಿಕರು ಬಡವರ ದೀನ ದರ್ಬಲರ ಸಮಸ್ಯೆ ಪರಿಹಾರ ತರಲು ಜೆಡಿಎಸ್‌ ಅಧಿಕಾರಕ್ಕೆ ಬರಬೇಕಿದೆ. ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳನ್ನು ನೀಡಿ, ಜನಾಪೇಕ್ಷೆಯಂತೆಯೇ ಪಂಚರತ್ನ ರಥಯಾತ್ರೆ ರೂಪಿಸಿದ್ದೆವು. ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಅಭಿವೃದ್ಧಿಗಿಂತ ತೆರಿಗೆ ಹಣ ಲೂಟಿ ಮಾಡಿದ್ದರ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಒಂದು ಬಡವರ ವರ್ಗ ಮತ್ತು ಶ್ರೀಮಂತರ ವರ್ಗ ಇದೆ ಎಂದು ಭಾರತ್‌ ಜೋಡೋ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. 45 ವರ್ಷ ಆಳ್ವಿಕೆ ಮಾಡಿದವರು ಎಲ್ಲರನ್ನು ಒಂದೇ ರೀತಿ ನೋಡಿದ್ದೀರಾ?. ಈಗ ಎರಡು ವರ್ಗಗಳು ನೆನಪಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಈಗ ಚರ್ಚೆ ಮಾಡುತ್ತಿದ್ದಾರೆ. ರಾಜ್ಯ ಲೂಟಿ ಹೊಡೆದವರಿಗೆ ಅದೆಷ್ಟುದಿನ ಅವಕಾಶ ಕೊಡುತ್ತೀರಾ? ಜೆಡಿಎಸ್‌ಗೆ ಅವಕಾಶ ಕೊಟ್ಟು ನೋಡಿರಿ ಎಂದರು.

ಬೆಂಬಲ ಬೆಲೆ ಕೊಡಿಸಿ: ಈರುಳ್ಳಿ ತೋಟಕ್ಕೆ ಭೇಟಿ ನೀಡಿ ರೈತರ ಜತೆ ಚರ್ಚೆ ಅರ್ಧ ಗಂಟೆ ಸಮಾಲೋಚಿಸಿದಾಗ ಕುಮಾರಣ್ಣ ಮುಂದೆಯೇ ಬೆಳೆ ಚೆನ್ನಾಗಿದೆ, ಬೆಲೆ ಇಲ್ಲ ಎಂದು ರೈತರು ಕಣ್ಣೀರಿಟ್ಟರು. ನೀರಗುಡಿಯಲ್ಲಿ ಮಕ್ಕಳು ಸೈಕಲ್‌ ಕೊಡಿಸಿ ಎಂದು ಮನವಿ ಮಾಡಿದಾಗ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿದ ಮಾಜಿ ಸಿಎಂ ನಿಮಗೆ 2006ರಲ್ಲಿ ನಾನೇ ಮಕ್ಕಳಿಗೆ ಸೈಕಲ್‌ ಕೊಟ್ಟಿದ್ದೆ, ಮುಂದಿನ ಜೂನ್‌ ಗೆ ನಾನೇ ಸೈಕಲ್‌ ಕೊಡುತ್ತೇನೆ, ನೀವು ಚೆನ್ನಾಗಿ ಓದಬೇಕು. ಕೆರೆ ಮಾಡಿಕೊಡುತ್ತೇನೆ ರಸ್ತೆ ನೀರು ಸೌಲಭ್ಯ ಕೊಡುತ್ತೇನೆಂದರು.

ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಆಳಂದ ಕ್ಷೇತ್ರದ ಖಜೂರಿ ಗ್ರಾಮದ ಬಳಿ ರೈತರು ವಿದ್ಯುತ್‌ ಪೂರೈಕೆ ಸರಿ ಇಲ್ಲ ಎಂದು ದೂರು ಹೇಳಿದರು. ರಾತ್ರಿ ವೇಳೆ ಹೊಲಗಳಿಗೆ ಹೋಗುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಪಂಚರತ್ನ ಯಾತ್ರೆಯಲ್ಲಿ ಇಂದು ಆಳಂದದ ಹಳ್ಳಿ ಸಂಚರಿಸುವ ಕುಮಾರಣ್ಣ ಮುನ್ನೊಳ್ಳಿಯಲ್ಲಿ ಮೊಕ್ಕಾಂ ಮಾಡಲಿದ್ದಾರೆ. ಜಿಲ್ಲೆ, ಆಳಂದದ ಜೆಡಿಸ್‌ ನಾಯಕರು ಯಾತ್ರೆಯಲ್ಲಿದ್ದಾರೆ.

Follow Us:
Download App:
  • android
  • ios