ಕಲಬುರಗಿ: ಡಿ.8ರಂದು ಅಫಜಲ್ಪುರದಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶ

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿಯವರ ನೀರಾವರಿ, ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ದಿಟ್ಟ ಜನಪರ ಯೋಜನೆಗಳು ಅದರಲ್ಲಿಯೂ ವಿಶೇಷವಾಗಿ ರೈತರ ಸಾಲಮನ್ನಾ ಯೋಜನೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 

JDS Convention will Be Held on December 8th at Afzalpur in Kalaburgi grg

ಅಫಜಲ್ಪುರ(ನ.18): ಕಳೆದ ಅ.2ರಂದು ಕರಜಗಿ ಗ್ರಾಮದಿಂದ ಪ್ರಾರಂಭವಾದ ಜೆಡಿಎಸ್‌ ಪಾದಯಾತ್ರೆ ಸುಮಾರು 117 ಹಳ್ಳಿಗಳಿಗೆ ಸಂಚರಿಸಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಡಿ.8 ರಂದು ಪಟ್ಟಣದಲ್ಲಿ ಬೃಹತ್‌ ಮಟ್ಟದ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಶಿವುಕುಮಾರ ನಾಟೀಕಾರ ಹೇಳಿದರು.

ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ಕ್ಷೇತ್ರದಿಂದ 6 ಬಾರಿ ಶಾಸಕ ಹಾಗೂ ಸಚಿವರಾಗಿದ್ದ ಮಾಲಿಕಯ್ಯ ಗುತ್ತೇದಾರ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮರೆತು ತಮ್ಮ ತೋಟಕ್ಕೆ ಹೋಗುವ ರಸ್ತೆಯನ್ನು ಮಾಡಿಕೊಂಡಿದ್ದಾರೆ.

ಓಲೈಕೆಗಾಗಿ ಖರ್ಗೆ ಕುಟುಂಬದ ಅವಹೇಳನ ಸಲ್ಲ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಅದೇ ರೀತಿ ಶಾಸಕ ಎಂ.ವೈ. ಪಾಟೀಲ ಅವರ ಪುತ್ರ ಅರುಣಕುಮಾರ ಪಾಟೀಲ ಅವರ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ ಎಂದು ಶಾಸಕರು ಮತ್ತು ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು ಅಫಜಲ್ಪುರ ವಿಧಾನಸಭಾ ಮತಕ್ಷೇತ್ರದಾದ್ಯಂತ ಹೊಸ ಮುಖ ಹೊಸ ಭರವಸೆ ಬನ್ನಿ ನಡೆಯೋಣ ಹೊಸ ಅಫಜಲ್ಪುರ ಕಟ್ಟೋಣ ಎಂಬ ಘೋಷವಾಕ್ಯದೊಂದಿಗೆ ಮೌಲ್ಯಯುತ ಬದ್ಧತೆಯ, ಅಭಿವೃದ್ಧಿ ಕೇಂದ್ರದ ರಾಜಕಾರಣ ಮಾಡುವ ಕುರಿತು ನನ್ನ ವೈಯಕ್ತಿಕ ಪಂಚ ಭೀಷ್ಮ ಪ್ರತಿಜ್ಞೆಗಳನ್ನು ಜನರ ಮುಂದಿಟ್ಟು ಮಹಾತ್ಮ ಗಾಂಧೀಜಿಯಂತಿ ದಿನದಿಂದ ಪ್ರಾರಂಭವಾದ ಪಾದಯಾತ್ರೆ ಇಂದಿಗೆ 46 ದಿನಗಳ ಕಾಲ ಕ್ಷೇತ್ರದ ಎಲ್ಲಾ 117 ಹಳ್ಳಿಗಳಿಗೆ 507 ಕಿ.ಮೀ ಪಾದಯಾತ್ರೆಯ ಮೂಲಕ ಮತಕ್ಷೇತ್ರದ ಎಲ್ಲರನ್ನೊಳಗೊಂಡ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ಜನರಕ್ಷಣೆ ಮತ್ತು ಅದರ ಸದ್ಬಳಕೆ, ಕಬ್ಬು ಬೆಳೆಗಾರರ, ರೈತರ ಹಿತ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಕೈಗಾರಿಕಾಭಿವೃದ್ಧಿ, ಯುವಜನತೆಗೆ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರ ಮುಂದಿಟ್ಟು ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಪ್ರತಿ ಮನೆಮನೆಗೆ ಹಾಗೂ ಪ್ರತಿಯೊಬ್ಬ ಮತದಾರನ ಮನೆ-ಮನಕ್ಕೆ ತಲುಪುವ ಕೆಲಸವನ್ನು ಮಾಡಿದ್ದೇವೆ.ಮತಕ್ಷೇತ್ರದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವ ನಿಟ್ಟಿನಲ್ಲಿ ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ.

ನಮ್ಮ ಪಾದಯಾತ್ರೆಗೆ ಮತಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿಯೂ ಕೂಡ ಜನರು ಆರತಿ ಬೆಳಗಿ, ಪಟಾಕಿ ಸಿಡಿಸಿ, ಡೊಳ್ಳು ಬಾರಿಸುವ ಮೂಲಕ ಅದ್ದೂರಿ ಸ್ವಾಗತ ಕೋರಿ ನಮ್ಮನ್ನು ಅವರ ಗ್ರಾಮಗಳಿಗೆ ಬರಮಾಡಿಕೊಂಡಿದ್ದಾರೆ. ಹಿರಿಯ ಮತ್ತು ಯುವ ಮತದಾರರಿಬ್ಬರೂ ನಮ್ಮ ಪಾದಯಾತ್ರೆಗೆ ಬೆಂಬಲಿಸಿದ್ದು ವಿಶೇಷ. ಹೊಸ ಮುಖ ಹೊಸ ಭರವಸೆ ಎಂದು ನಾವು ಜನರ ಬಳಿ ಹೋಗಿದ್ದೆವು ಅದಕ್ಕೆ ಜನರು ಎಲ್ಲಾ ಕಡೆಗಳಲ್ಲಿಯೂ ಉತ್ತಮ ರೀತಿಯಲ್ಲಿ ಸ್ಪಂದಿಸಿ ನಮ್ಮಲ್ಲಿಯೇ ಹೊಸ ಭರವಸೆ ಮೂಡಿಸಿದ್ದಾರೆ.ಹಳ್ಳಿಗಳಲ್ಲಿ ಸಂಚರಿಸಿ ನೋಡಿದಾಗ ಇಡೀ ಮತಕ್ಷೇತ್ರದ ಜನರು ಹೊಸ ಮುಖ ಬಯಸುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿಯವರ ನೀರಾವರಿ, ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ದಿಟ್ಟ ಜನಪರ ಯೋಜನೆಗಳು ಅದರಲ್ಲಿಯೂ ವಿಶೇಷವಾಗಿ ರೈತರ ಸಾಲಮನ್ನಾ ಯೋಜನೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮ ಪಾದಯಾತ್ರೆ ನವೆಂಬರ್‌ 20ರಂದು ಅಫಜಲ್ಪುರ ಪಟ್ಟಣದಲ್ಲಿ ಸಮಾರೋಪವಾಗಬೇಕಿತ್ತು ಆದರೆ ಕುಮಾರಸ್ವಾಮಿಯವರು ಪಂಚರತ್ನ ಯೋಜನೆ ಕಾರ್ಯಕ್ರಮದಲ್ಲಿ ಇರುವುದರಿಂದ ಡಿಸೆಂಬರ್‌ 8ರಂದು ಪಟ್ಟಣಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಜಮೀಲ್‌ ಗೌಂಡಿ,ಶಂಕರಗೌಡ ಭಾಸಗಿ, ಮಲ್ಲಿಕಾರ್ಜುನ ಸಿಂಗೆ, ರಾಜೇಂದ್ರ ಸರ್ದಾರ, ಅಮೋಲ ಮೋರೆ,ಅಮರಸಿಂಗ ರಜಪೂತ, ಶ್ರೀಕಾಂತ ದಿವಾಣಜಿ, ಮಂಜುನಾಥ ನೈಕೋಡಿ,ಶ್ರೀಶೈಲಗೌಡ ಮಾಲಿ ಪಾಟೀಲ,ಮಲ್ಲು ಸೋಲಾಪುರ,ನಿಂಗು ಹೂಗಾರ, ರಾಜಕುಮಾರ ಪಾಟೀಲ್‌ ಇದ್ದರು.
 

Latest Videos
Follow Us:
Download App:
  • android
  • ios