ಮೂರನೇ ಪಟ್ಟಿಯಲ್ಲಿ ಪ್ರಮುಖವಾಗಿ ಬಾಗಲಕೋಟೆ - ದೇವರಾಜ್ ಪಾಟೀಲ್, ಅರಸೀಕೆರೆ ಗೆ ಸಂತೋಷ್ ಅಭ್ಯರ್ಥಿ, ಬಾಗಲಕೋಟೆ - ದೇವರಾಜಪಾಟೀಲ್, ಯಾದಗಿರಿ - ಡಾ.ಎ.ಬಿ.ಮಾಲಕರೆಡ್ಡಿ, ಮೂಡಬಿದರೆ - ಅಮರಶ್ರೀ, ಮಡಿಕೇರಿ - ಎನ್‌.ಎಂ.ಮುತ್ತಪ್ಪ ಅವರು ಹೆಸರು ಫೈನಲ್‌ ಆಗುವ ಸಾಧ್ಯತೆ ಇದೆ. 

ಬೆಂಗಳೂರು(ಏ.15): ಜೆಡಿಎಸ್‌ ಮೂರನೇ ಪಟ್ಟಿ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಜೆಡಿಎಸ್‌ ಎರಡನೇ ಪಟ್ಟಿ ನಿನ್ನೆಯಷ್ಟೇ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ 50 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. 

ಮೂರನೇ ಪಟ್ಟಿಯಲ್ಲಿ ಪ್ರಮುಖವಾಗಿ ಬಾಗಲಕೋಟೆ - ದೇವರಾಜ್ ಪಾಟೀಲ್, ಅರಸೀಕೆರೆ ಗೆ ಸಂತೋಷ್ ಅಭ್ಯರ್ಥಿ, ಬಾಗಲಕೋಟೆ - ದೇವರಾಜಪಾಟೀಲ್, ಯಾದಗಿರಿ - ಡಾ.ಎ.ಬಿ.ಮಾಲಕರೆಡ್ಡಿ, ಮೂಡಬಿದರೆ - ಅಮರಶ್ರೀ, ಮಡಿಕೇರಿ - ಎನ್‌.ಎಂ.ಮುತ್ತಪ್ಪ ಅವರು ಹೆಸರು ಫೈನಲ್‌ ಆಗುವ ಸಾಧ್ಯತೆ ಇದೆ. 

ಬಿಜೆಪಿಗೆ ಮತ್ತೊಂದು ಆಘಾತ: ಕಮಲ ತೊರೆದು ಮತ್ತೊಬ್ಬ ನಾಯಕ ಜೆಡಿಎಸ್‌ ಸೇರ್ಪಡೆ..!

ಇನ್ನು ಯಡಿಯೂರಪ್ಪ ಅವರ ಆಪ್ತ ಎನ್. ಆರ್. ಸಂತೋಷ್ ಅವರಿಗೆ ಜೆಡಿಎಸ್ ಟಿಕೆಟ್‌ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ ಅವರು, ಅರಿಸಿಕೇರೆಗೆ ಎನ್. ಆರ್. ಸಂತೋಷ್ ಅಭ್ಯರ್ಥಿ ಅಂತಾ ಅಧಿಕೃತ ಘೋಷಣೆ ಆಗಿಲ್ಲ, ಸಂಜೆ ಆಗುತ್ತದೆ ಅಂತ ಹೇಳಿದ್ದಾರೆ.

ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಭವಾನಿಗಿಲ್ಲ ಹಾಸನ, ಸ್ವರೂಪ್‌ಗೆ ಸಿಂಹಾಸನ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲೇಬೆಂಕೆಂದು ಕಸರತ್ತು ನಡೆಸುತ್ತಿರುವ ಜೆಡಿಎಸ್‌ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ್ದ ಹಾಸನ ವಿಧಾನಸಭಾ ಟಿಕೆಟ್‌ ಅನ್ನು ಸ್ವರೂಪ್‌ಗೆ ಕೊಡುವ ಮೂಲಕ ಭವಾನಿ ರೇವಣ್ಣಗೆ ಕೊಕ್‌ ಕೊಡಲಾಗಿದೆ.

ಕುಡುಚಿ-ಆನಂದ್ ಮಾಳಗಿ
ರಾಯಭಾಗ-ಪ್ರದೀಪ್ ಮಾಳಗಿ
ಸವದತ್ತಿ-ಸೌರಬ್ ಚೋಪ್ರಾ
ಅಥಣಿ-ಶಶಿಕಾಂತ್ ಪಡಸಲಗಿ ಗುರುಗಳು
ಹುಬ್ಬಳ್ಳಿ-ಧಾರವಾಡ (ಪೂರ್ವ)-ವೀರಭದ್ರಪ್ಪ ಹಾಲರವಿ
ಕುಮಟಾ-ಸೂರಜ್‌ ಸೋನಿ ನಾಯ್ಕ್‌
ಹಳಿಯಾಳ- ಎಸ್‌ ಎಲ್‌ ಘೋಟ್ನೇಕರ್‌
ಭಟ್ಕಳ-ನಾಗೇಂದ್ರ ನಾಯ್ಕ್‌
ಶಿರಸಿ-ಉಪೇಂದ್ರ ಪೈ
ಯಲ್ಲಾಪುರ-ಡಾ.ನಾಗೇಶ್‌ ನಾಯ್ಕ್‌
ಚಿತ್ತಾಪುರ-ಸುಭಾಷ್‌ ಚಂದ್ರ ರಾಥೋಡ್‌
ಕಲಬುರಗಿ ಉತ್ತರ-ನಾಸಿರ್‌ ಹುಸೇನ್‌ ಉಸ್ತಾದ್‌
ಬಳ್ಳಾರಿ-ಅಲ್ಲಾಭಕ್ಷ್‌
ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
ಹರಪನಹಳ್ಳಿ-ನೂರ್‌ ಅಹ್ಮದ್‌
ಸಿರಗುಪ್ಪ-ಪರಮೇಶ್ವರ್‌ ನಾಯಕ್‌
ಕಂಪ್ಲಿ-ರಾಜು ನಾಯಕ್‌
ಕೊಳ್ಳೆಗಾಲ-ಪುಟ್ಟಸ್ವಾಮಿ
ಗುಂಡ್ಲುಪೇಟೆ-ಕಡಬೂರು ಮಂಜುನಾಥ್‌
ಕಾಪು-ಸಬೀನಾ ಸಮದ್‌
ಕಾರ್ಕಳ-ಶ್ರೀಕಾಂತ್‌ ಕೊಚ್ಚೂರ್‌
ಉಡುಪಿ-ದಕ್ಷತ್‌ ಶೆಟ್ಟಿ
ಬೈಂದೂರು-ಮನ್ಸೂರ್‌ ಇಬ್ರಾಹಿಂ
ಕುಂದಾಪುರ-ರಮೇಶ್‌
ಮಂಗಳೂರು ದಕ್ಷಿಣ-ಸುಮತಿ ಹೆಗಡೆ
ಕನಕಪುರ-ನಾಗರಾಜ್‌
ಯಲಹಂಕ-ಮುನೇಗೌಡ ಎಂ
ಸರ್ವಜ್ಞ ನಗರ- ಮೊಹಮದ್‌ ಮುಸ್ತಾಫ್‌
ಯಶವಂತಪುರ-ಜವರಾಯಿಗೌಡ
ತಿಪಟೂರು-ಶಾಂತಕುಮಾರ್‌
ಶಿರಾ-ಉಗ್ರೇಶ್‌
ಹಾನಗಲ್‌-ಮನೋಹರ್‌ ತಹಸೀಲ್ದಾರ್‌
ಸಿಂಧಗಿ-ವಿಶಾಲಾಕ್ಷಿ
ಗಂಗಾವತಿ-ಚೆನ್ನಕೇಶವ
ಎಚ್.ಡಿ.ಕೋಟೆ - ಜಯಪ್ರಕಾಶ್‌ ಸಿ
ಜೇವರ್ಗಿ - ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ 
ಶಹಾಪುರ-ಗುರುಲಿಂಗಪ್ಪ ಪಾಟೀಲ್‌
ಕಾರವಾರ-ಚೈತ್ರಾ ಕೋಟ್ಕರ್‌
ಪುತ್ತೂರು-ದಿವ್ಯಪ್ರಭ
ಕಡೂರು-ವೈಎಸ್‌ವಿ ದತ್ತಾ
ಹೊಳೆನರಸೀಪುರ- ಎಚ್.ಡಿ. ರೇವಣ್ಣ
ಬೇಲೂರು- ಕೆ.ಎಸ್. ಲಿಂಗೇಶ್‌
ಸಕಲೇಶಪುರ- ಎಚ್‌ಕೆ ಕುಮಾರಸ್ವಾಮಿ
ಅರಕಲಗೂಡು-ಮಂಜು ಎ
ಹಾಸನ - ಸ್ವರೂಪ್‌ ಪ್ರಕಾಶ್‌ 
ಶ್ರವಣಬೆಳಗೊಳ - ಸಿ.ಎನ್. ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್‌ - ರಾಜಣ್ಣ
ಹಿರಿಯೂರು - ರವೀಂದ್ರಪ್ಪ
ಮಾಯಕೊಂಡ - ಆನಂದಪ್ಪ

ಜೆಡಿಎಸ್‌ ಸಿಂ'ಹಾಸನ' ಕಗ್ಗಂಟು ಶಮನ, ಹಗ್ಗಜಗ್ಗಾಟದ ಕೊನೆ ಬಗ್ಗೆ ಎಚ್‌ಡಿಕೆ ಹೇಳಿದ್ದೇನು..?

ಸ್ವರೂಪ್‌ ಮನೆಯಲ್ಲಿ ಭಾರಿ ಹರ್ಷೋದ್ಘಾರ: ಇನ್ನು ರಾಜ್ಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಮೊದಲೇ ಹೇಳುತ್ತಿದ್ದಂತೆ ಪಕ್ಷದ ಕಾರ್ಯಕರ್ತ ಸ್ವರೂಪ್‌ ಪ್ರಕಾಶ್‌ ಅವರಿಗೆ ನೀಡಿದ್ದಾರೆ. ಈ ಮೂಲಕ ತಮ್ಮ ಕುಟುಂಬದಲ್ಲಿ ಭವಾನಿ ರೇವಣ್ಣ ಅವರು ನನಗೆ ಹಾಸನದ ಟಿಕೆಟ್‌ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರೂ, ಅವರಿಗೆ ಟಿಕೆಟ್‌ ಕೊಡದೇ ಕೈಬಿಡಲಾಗಿದೆ. ಈ ಮೂಲಕ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರದಲ್ಲಿ ಟಿಕೆಟ್‌ ಸಿಕ್ಕಿದ್ದರಿಂದ ಸ್ವರೂಪ್‌ ಪ್ರಕಾಶ್‌ ಅವರ ಮನೆಯಲ್ಲಿ ತೀವ್ರ ಕುತೂಹಲ ಉಂಟಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.