ವರುಣಾದಲ್ಲಿ ಮಾಜಿ ಸಿಎಮ ಸಿದ್ದರಾಮಯ್ಯ ವಿರುದ್ಧ ಭಾರತಿ ಶಂಕರ್ ಸ್ಪರ್ಧೆ ಮಾಡಲಿದ್ದಾರೆ. ಜೆಡಿಎಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಅಭಿಷೇಕ್ ಎಂಬ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಅಭಿಷೇಕ್ ಕಳೆದ ಒಂದು ವಾರದಿಂದ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ, ಪಕ್ಷದ ನಾಯಕರಿಗೂ ಸಿಗುತ್ತಿಲ್ಲ, ಹೀಗಾಗಿ ಜೆಡಿಎಸ್ ನಾಯಕರು ಅಭ್ಯರ್ಥಿಯನ್ನ ಬದಲಾವಣೆ ಮಾಡಿದ್ದಾರೆ. 

ಬೆಂಗಳೂರು(ಏ.15): ಟಿ. ನರಸೀಪುರದ ಮಾಜಿ ಶಾಸಕ ಭಾರತಿ ಶಂಕರ್ ಅವರು ಇಂದು(ಶನಿವಾರ) ಅಧಿಕೃತವಾಗಿ ಜೆಡಿಎಸ್‌ ಸೇರಲಿದ್ದಾರೆ. ಕ್ಷೇತ್ರ ಪುನರ್‌ವಿಂಗಡನೆಗೂ ಭಾರತಿ ಶಂಕರ್ ಮುನ್ನ ಶಾಸಕರಾಗಿದ್ದರು. ಆಗ ವರುಣಾ ಕೂಡ ಟಿ. ನರಸೀಪುರದಲ್ಲಿ ಇತ್ತು. ಭಾರತಿ ಶಂಕರ್ ಈಗ ವರುಣಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಭಾರತಿ ಶಂಕರ್ ಇಂದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. 

ವರುಣಾದಲ್ಲಿ ಮಾಜಿ ಸಿಎಮ ಸಿದ್ದರಾಮಯ್ಯ ವಿರುದ್ಧ ಭಾರತಿ ಶಂಕರ್ ಸ್ಪರ್ಧೆ ಮಾಡಲಿದ್ದಾರೆ. ಜೆಡಿಎಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರಕ್ಕೆ ಅಭಿಷೇಕ್ ಎಂಬ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಅಭಿಷೇಕ್ ಕಳೆದ ಒಂದು ವಾರದಿಂದ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ, ಪಕ್ಷದ ನಾಯಕರಿಗೂ ಸಿಗುತ್ತಿಲ್ಲ, ಹೀಗಾಗಿ ಜೆಡಿಎಸ್ ನಾಯಕರು ಅಭ್ಯರ್ಥಿಯನ್ನ ಬದಲಾವಣೆ ಮಾಡಿದ್ದಾರೆ. 

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಭವಾನಿಗೆ ಪರಿಷತ್‌ ಸ್ಥಾನ?

ಜೆಡಿಎಸ್‌ ಭರವಸೆ ಪತ್ರ ಬಿಡುಗಡೆ 

ದೇವೇಗೌಡರು ಜೆಡಿಎಸ್‌ ಪಕ್ಷದ 'ಭರವಸೆ ಪತ್ರ' ಬಿಡುಗಡೆ ಮಾಡ್ತಾರೆ. ಕುಮಾರಸ್ವಾಮಿ ಅವರು ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡ್ತಾರೆ ಅಂತ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಿಳಿಸಿದ್ದಾರೆ. ಕುಮಾರಸ್ವಾಮಿ ಪ್ರಣಾಳಿಕೆ ಬಿಡುಗಡೆ ಮಾಡ್ತಾರೆ. ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡ್ತೀನಿ. ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮಾಡಿ ಅದರ ಮೂಲಕ ಕಾರ್ಯಕ್ರಮ ಗಳನ್ನು ಜಾರಿ ಮಾಡಲಿದ್ದಾರೆ. ಈಗ ಕಾರ್ಯಕ್ರಮಗಳ ಭರವಸೆಗಳನ್ನು ಬಿಡುಗಡೆ ಮಾಡುತ್ತೇವೆ ಅಂತ ತಿಳಿಸಿದ್ದಾರೆ. 

1. ಕನ್ನಡವೇ ಮೊದಲು
2. ಶಿಕ್ಷಣ ವೇ ಅಧುನಿಕ ಶಕ್ತಿ
3. ಧಾರ್ಮಿಕ ಅಲ್ಪ ಸಂಖ್ಯಾತರ ಪ್ರಗತಿ
4. ಹಿರಿಯ ನಾಗರೀಕರ ಸನ್ಮಾನ
5. ರೈತ ಚೈತನ್ಯ
6. ವಿಕಲ ಚೇತನರಿಗೆ ಆಸರೆ
7. ಆರಕ್ಷಕರಿಗೆ ಅಭಯ
8. ಮಹಿಳಾ ಸಬಲೀಕರಣ
9. ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ
10. ಆರೋಗ್ಯ ಸಂಪತ್ತು
11. ಯುವಜನ ಸಬಲೀಕರಣ
12. ವೃತ್ತಿ ನಿರತ ವಕೀಲರ ಅಭ್ಯುದಯ

ನಮ್ಮ ಶಾಸಕರು ಹಾಗೂ ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಮಾರಸ್ವಾಮಿ ಹೋಗ್ತಾರೆ. ಬಾಕಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡ್ತಾರೆ. ಇದು ಭರವಸೆಯಷ್ಟೆ, ಪ್ರಣಾಳಿಕೆಯಲ್ಲ ಹೆಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. 

ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದ, ಪ್ರಧಾನಿ ಮೋದಿಯವರಿಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು. ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ. 13 ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟು ನಾನು ಪ್ರಧಾನಿಯಾಗಿದ್ದೆ, ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆ ರೀತಿ ಅಲ್ಲ, ನಾನು ಜನರಿಂದಲೇ ಆಯ್ಕೆಯಾದವನು ಅಂತ ಹೇಳಿದ್ದಾರೆ. 

ಎನ್. ಆರ್. ಸಂತೋಷ್‌ ಅವರು ದೇವೇಗೌಡರ ನಿವಾಸಕ್ಕೆ ಬಂದಿದ್ದಾರೆ. ಮಾಜಿ ಪ್ರಧಾನಿ ಎಚ್ಡಿಡಿ ಮತ್ತು ಕುಮಾರಸ್ವಾಮಿ ಜೊತೆ ಸಂತೋಷ್ ಚರ್ಚೆ ನಡೆಸಿದ್ದಾರೆ. ಅರಸೀಕೆರೆಗೆ ಇಂದು ಅಧಿಕೃತವಾಗಿ ಸಂತೋಷ್ ಅವರ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. 

ಚುನಾವಣೆ ಬೆನ್ನಲ್ಲೇ ಹಲವರು ಜೆಡಿಎಸ್‌ ಸೇರ್ಪಡೆ

ಹಾಸನದ ವಿಚಾರದಲ್ಲಿ ಗೊಂದಲದ ಬಗ್ಗೆ ಸುದ್ದಿ ಬರ್ತಿತ್ತು, ಯಾವುದೇ ಗೊಂದಲ ಇಲ್ಲಾ, ಏನು ಗೊಂದಲ ಮಾಡಬೇಡಿ. ರೇವಣ್ಣವರೇ ಶನಿಮಹಾತ್ಮ ದೇವಸ್ಥಾನಕ್ಕೆ ಸ್ವರೂಪ್ ಅವರನ್ನ ಕರೆದುಕೊಂಡು ಹೋಗಿ ಪೂಜೆ ಮಾಡಿಸ್ತಾರೆ. ನಂತರ ಪ್ರಚಾರ ಶುರು ಮಾಡ್ತಾರೆ ಅಂತ ದೊಡ್ಡಗೌಡರು ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.