Asianet Suvarna News Asianet Suvarna News

ಜವರಾಯಿಗೌಡಗೆ ಜೆಡಿಎಸ್‌ನಲ್ಲಿ ಸೂಕ್ತ ಸ್ಥಾನ ಕೊಡುವೆ: ಎಚ್‌.ಡಿ.ಕುಮಾರಸ್ವಾಮಿ

ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆಯಲ್ಲಿ ಸೋಲನುಭವಿಸಿದ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜವರಾಯಿಗೌಡ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Javarayi Gowda will be given suitable seat in JDS Says HD Kumaraswamy gvd
Author
First Published May 27, 2023, 6:38 AM IST | Last Updated May 27, 2023, 6:38 AM IST

ಬೆಂಗಳೂರು (ಮೇ.27): ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆಯಲ್ಲಿ ಸೋಲನುಭವಿಸಿದ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜವರಾಯಿಗೌಡ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಸಿಗೇಹಳ್ಳಿ ಮುಖ್ಯರಸ್ತೆಯಲ್ಲಿನ ಎಸ್‌.ಜಿ.ಕನ್ವೆನ್ಷನ್‌ ಸಭಾಂಗಣದಲ್ಲಿ ನಡೆದ ಧನ್ಯತಾ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1,50,431 ಮತಗಳನ್ನು ಪಡೆದ ಜವರಾಯಿಗೌಡ ಅವರು ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಲು ಕೂದಲೆಳೆಯ ಅಂತರದಲ್ಲಿ ಸೋತಿರುವುದು ನಮ್ಮೆಲ್ಲರಿಗೂ ಆಘಾತವನ್ನುಂಟು ಮಾಡಿದೆ. 

ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋತಿರುವುದಕ್ಕಿಂತ ಜವರಾಯಿಗೌಡ ಸೋಲನುಭವಿಸಿರುವುದು ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಶವಂತಪುರ ಕ್ಷೇತ್ರದ ಮತದಾರರು ಚಿನ್ನದಂತಹ ಪ್ರಾಮಾಣಿಕ ಮತದಾರರಾಗಿದ್ದು, ಲಕ್ಷಾಂತರ ಜನ ಬಂದು ಜೆಡಿಎಸ್‌ ಬೆಂಬಲಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ಮುಂದಿನ ದಿನದಲ್ಲಿ ಜೆಡಿಎಸ್‌ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು. ಕಾರ್ಯಕರ್ತರು ಎದೆಗುಂದ ಬೇಕಾಗಿಲ್ಲ ಅಶ್ವಾಸನೆ ನೀಡಿದರು.

ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್‌ ಗೆಲುವು, ನಿಖಿಲ್‌ ಸೋಲಿಗೂ ಇದೇ ಕಾರಣ: ಎಚ್‌ಡಿಕೆ

ಜವರಾಯಿಗೌಡ ಮಾತನಾಡಿ, ನಾನು ನನ್ನ ಸ್ವಂತ ಹಣದಿಂದ ನಾಲ್ಕು ಬಾರಿ ವಿಧಾನಸಭೆ ಸ್ಪರ್ಧಿಸಿದ್ದೆ. ಹವಾಯಿ ಚಪ್ಪಲಿ ಹಾಕಿಕೊಂಡು ಬೆಂಗಳೂರಿಗೆ ಬಂದ ನಾನು ಇಂದು ಕೋಟಿ ಒಡೆಯನಾಗಿದ್ದು, ಲಕ್ಷಾಂತರ ಮತಗಳನ್ನು ನೀಡಿದ ಕಾರ್ಯಕರ್ತರಿಗೆ ಧನ್ಯವಾದಗಳು. ಮೂರನೇ ಚುನಾವಣೆ ಸೋತ ನಂತರ ಮೂರುವರೆ ವರ್ಷ ರಾಜಕೀಯವೇ ಬೇಡವೆಂದು ದೂರ ಸರಿದಿದ್ದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಸೆಯಂತೆ ಚುನಾವಣೆಗೆ ಸ್ಪರ್ಧಿಸಿ ಲಕ್ಷಾಂತರ ಮತಗಳನ್ನು ಪಡೆದಿದ್ದೇನೆ. ಮುಂಬರುವ ಜಿಲ್ಲಾ ಪಂಚಾಯಿತಿ, ಬಿಬಿಎಂಪಿ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಶಕ್ತಿ ಪ್ರದರ್ಶನ ತೋರಿಸಲಾಗುವುದು ಎಂದರು.

ಲೋಕಸಭೆ ರಿಸಲ್ಟ್‌ ಮೇಲೆ ಕಾಂಗ್ರೆಸ್‌ ಸರ್ಕಾರದ ಭವಿಷ್ಯ: ಎಚ್‌ಡಿಕೆ

ಬಿಬಿಎಂಪಿ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮಾತನಾಡಿ, 17 ಪಂಚಾಯಿತಿಗಳಲ್ಲಿ 13 ಪಂಚಾಯಿತಿಗಳಿಗೆ ಜೆಡಿಎಸ್‌ಗೆ ಲೀಡ್‌ ಕೊಟ್ಟಿರುವುದರಿಂದ ಸ್ಥಳೀಯ ಪೊಲೀಸ್‌ ಠಾಣೆಯಿಂದಾಗಲಿ, ಸ್ಥಳೀಯ ಅನ್ಯಪಕ್ಷದವರು ಜೆಡಿಎಸ್‌ ಎಂಬ ಒಂದೇ ಕಾರಣಕ್ಕಾಗಿ ತೊಂದರೆ ಕೊಟ್ಟರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಂ.ಕೆ.ಪುರದ ಪಂಚಲಿಂಗಯ್ಯ, ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ರಂಗನಾಥ್‌, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಜೆಡಿಎಸ್‌ನ ಕಾರ್ಯಕರ್ತರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios