ಹೊಸ ವರ್ಷದ ಮೊದಲ ದಿನವೇ ಜನಾರ್ದನ ರೆಡ್ಡಿ ಹೊಸ ಆಟ: ಬಳ್ಳಾರಿಯಲ್ಲಿ ಕಣಕ್ಕಿಳೀತಾರಾ ರೆಡ್ಡಿ ಪತ್ನಿ..?

ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ನೂತನವಾಗಿ ಘೋಷಣೆಯಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎನ್ನಲಾಗುತ್ತಿದೆ. ಈ ಹಿನ್ನೆಲೆ ನಾಳೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಲಕ್ಷ್ಮೀ ಅರುಣಾ, ಗಣಿ ನಾಡಲ್ಲಿ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಅಧಿಕೃತ ಘೋಷಣೆ ಮಾಡ್ತಾರಾ ಎಂಬ ಊಹಾಪೋಹವೂ ಹರಿದಾಡುತ್ತಿದೆ. 

janardhana reddy wife may contest from bellary in 2023 assembly elections to organise press meet on january 1st ash

ಬಳ್ಳಾರಿ (ಡಿಸೆಂಬರ್ 31, 2022): ಇತ್ತೀಚೆಗಷ್ಟೇ ಸುದ್ದಿಗೋಷ್ಟಿ (Press Meet) ನಡೆಸಿ ಹೊಸ ರಾಜಕೀಯ ಪಕ್ಷ (New Political Party) ಘೋಷಿಸಿದ ಜನಾರ್ದನ ರೆಡ್ಡಿ (Janardhan Reddy), ಈಗ 2023ರ ಹೊಷ ವರ್ಷದ ಮೊದಲ ದಿನವೇ ಮತ್ತೊಂದು ಹೊಸ ಆಟ ಪ್ರಾರಂಭಿಸುತ್ತಿದ್ದಾರೆ. ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ (Bellary District) ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿಯನ್ನು (Wife) ಕಣಕ್ಕಿಳಿಸೋ ಪ್ಲಾನ್‌ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿ ಜನವರಿ 1ರಂದು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ (Lakhmi Aruna) ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿಗೋಷ್ಟಿಯಲ್ಲಿ ಪಕ್ಷದ ರೂಪುರೇಷೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಜನಾರ್ದನ ರೆಡ್ಡಿ ಅವರ ಪತ್ನಿ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸುದ್ದಿಗೋಷ್ಠಿಯಲ್ಲಿ ಬಳ್ಳಾರಿಯಲ್ಲಿ (Bellary) ಸ್ಪರ್ಧೆ ಮಾಡುವ ಬಗ್ಗೆ ಲಕ್ಷ್ಮೀ ಅರುಣಾ ಅಧಿಕೃತ ಘೋಷಣೆ ಹೊರಡಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ನೂತನವಾಗಿ ಘೋಷಣೆಯಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyana Rajya Pragati Party) ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ (Bellary City Assembly Constituency Candidate)  ಎನ್ನಲಾಗುತ್ತಿದೆ. ಈ ಹಿನ್ನೆಲೆ ನಾಳೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಲಕ್ಷ್ಮೀ ಅರುಣಾ, ಗಣಿ ನಾಡಲ್ಲಿ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಅಧಿಕೃತ ಘೋಷಣೆ ಮಾಡ್ತಾರಾ ಎಂಬ ಊಹಾಪೋಹವೂ ಹರಿದಾಡುತ್ತಿದೆ. 

ಇದನ್ನು ಓದಿ: ಜನಾರ್ದನ ರೆಡ್ಡಿಗೆ ಬೆಂಬಲ: ಬಿಜೆಪಿಯಲ್ಲಿ ಮುಂದುವರೆದ ರಾಜೀನಾಮೆ ಪರ್ವ..!

ಅಲ್ಲದೆ, ಸುದ್ದಿಗೋಷ್ಟಿ ಬಳಿಕ ಬೆಣಕಲ್ ಗ್ರಾಮದಲ್ಲಿ ಉಡಿತುಂಬೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕುರುಬರ ಮನೆಯಲ್ಲಿ ಲಕ್ಷ್ಮೀ ಅರುಣಾ ಉಡಿ ತುಂಬಿಸಿಕೊಳ್ಳಲಿದ್ದಾರೆ. ಬಳಿಕ,
ಕುರುಬರ ಮನೆಯಿಂದಲೇ ಪಕ್ಷದ ಅಧಿಕೃತ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿ ಹಾಗೂ ತಂಡ ಚಾಲನೆ ನೀಡಲಿದೆ ಎಂದೂ ತಿಳಿದುಬಂದಿದೆ. ಈ ಮೂಲಕ ಕುರುಬರ ಮತಗಳನ್ನು ಸೆಳೆಯಲು ಜನಾರ್ದನ ರೆಡ್ಡಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗುತ್ತಿದೆ.  

ಜನಾರ್ದನ ರೆಡ್ಡಿಗೆ ಬೆಂಬಲ: ಬಿಜೆಪಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ..!

ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದಿದ್ದು, ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ ನೀಡಿದ್ದಾರೆ. ಬಳ್ಳಾರಿ ನಗರದ ಕೌಲ್ ಬಜಾರ್ ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೊಹಮ್ಮದ್ ಖದೀರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ  ರಾಜೀನಾಮೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರನ್ನ ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಸರಿಯಿಲ್ಲ ಅಂತ ಬಿಜೆಪಿಗೆ ಮೊಹಮ್ಮದ್ ಖದೀರ್ ಗುಡ್‌ಬೈ ಹೇಳಿದ್ದಾರೆ. ಇದೇ ರೀತಿ, ಇನ್ನಷ್ಟು ಬಿಜೆಪಿ ಮುಖಂಡರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಅಂತ ತಿಳಿದುಬಂದಿದೆ. 

ಇದನ್ನೂ ಓದಿ: ಸಿಂಧನೂರಿನಲ್ಲಿ ಜ.6ರಂದು,‌ ಬಳ್ಳಾರಿಯಲ್ಲಿ ಜ.11ರಂದು ಜನಾರ್ದನ ರೆಡ್ಡಿ ಬೃಹತ್ ಸಮಾವೇಶ

ಸಿಂಧನೂರಿನಲ್ಲಿ ಜನವರಿ 6ರಂದು,‌ ಬಳ್ಳಾರಿಯಲ್ಲಿ ಜನವರಿ 11ರಂದು ಜನಾರ್ದನ ರೆಡ್ಡಿ ಬೃಹತ್ ಸಮಾವೇಶ
ಈ ಮಧ್ಯೆ ಕಲ್ಯಾಣ ಕರ್ನಾಟಕದ ಮಧ್ಯೆ ಭಾಗವಾದ ಸಿಂಧನೂರಿನಲ್ಲಿ‌ ಜನವರಿ 6 ಮತ್ತು‌ ಗಾಲಿ ಜನಾರ್ದನ ರೆಡ್ಡಿ ಹುಟ್ಟು ಹಬ್ಬ ಜನವರಿ‌ 11ರಂದು ಬಳ್ಳಾರಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.  ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ತಮ್ಮ ಹೊಸ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಗೊಳಿಸೋದರ ಜೊತೆಗೆ ತಮ್ಮ ಹಳೆಯ ಗೆಳೆಯರನ್ನು  ಮತ್ತು ಬಿಜೆಪಿ ನಾಯಕರನ್ನು  ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: Kalyana Rajya Pragati Paksha: ಉತ್ತರ ಕರ್ನಾಟಕದಿಂದ ಉದಯಿಸುತ್ತಿರುವ 4ನೇ ಪಕ್ಷ

Latest Videos
Follow Us:
Download App:
  • android
  • ios