ಬೆಂಗಳೂರು, [ಜ.23]: ಡಿ.ಕೆ.ಶಿವಕುಮಾರ್​ ಹಾಗೂ ಸಿದ್ದರಾಮಯ್ಯರಿಂದಾಗಿ ಬಳ್ಳಾರಿ ಶಾಸಕರಲ್ಲಿ ಗುಂಪುಗಳಾಗಿವೆ. ಈ ಗುಂಪುಗಾರಿಕೆಯಿಂದಾಗಿಯೇ ಇಷ್ಟೆಲ್ಲ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಗುಡುಗಿದ್ದಾರೆ. 

ಇಂದು [ಬುಧವಾರ] ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಆನಂದ್​ ಸಿಂಗ್​ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ರೆಡ್ಡಿ, ಇದು ಡಿ.ಕೆ.ಶಿವಕುಮಾರ್​ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಗಲಾಟೆ. 

ಆಸ್ಪತ್ರೆಯಲ್ಲೇ ಶಾಸಕ ಆನಂದ್ ಸಿಂಗ್ ಮಾಸ್ಟರ್ ಪ್ಲಾನ್ ..!

ಭೀಮಾ ನಾಯಕ್, ಗಣೇಶ್ ಇವರು ಸಿದ್ದರಾಮಯ್ಯ ಗುಂಪು. ಉಳಿದವರೆಲ್ಲ ಡಿ.ಕೆ ಶಿವಕುಮಾರ್​ ಗುಂಪು. ಈ ಗುಂಪುಗಾರಿಕೆಯಿಂದಾಗಿಯೇ ಇಷ್ಟೆಲ್ಲ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು. 

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

ನನ್ನ ಆತ್ಮೀಯ ಸ್ನೇಹಿತನನ್ನು ಇವತ್ತು ಆಸ್ಪತ್ರೆಯಲ್ಲಿ ನೋಡಿದ್ದೇನೆ‌. ದೊಡ್ಡ ಮಟ್ಟದಲ್ಲಿ ಅವರಿಗೆ ಹಲ್ಲೆಯಾಗಿದೆ. ನಡೆಯಲಿಕ್ಕೂ ಆಗದೇ ಇರುವಷ್ಟು ಏಟಾಗಿದೆ.

ಇಡೀ ಪ್ರಜಾಪ್ರಭುತ್ವದಲ್ಲೇ ಇದೊಂದು ದುರದೃಷ್ಟಕರ ಸಂಗತಿ. ಗಣೇಶ್ ಒಬ್ಬ ಶಾಸಕನಾಗಿ ಈ ರೀತಿ ಮಾಡಿದ್ದು ಶೋಚನೀಯ. ಒಬ್ಬ ಶಾಸಕ ನಾಪತ್ತೆ ಅಂದ್ರೆ ಏನು? ಸರ್ಕಾರ ಕೂಡಲೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.