Karnataka election: ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ಜನಾರ್ದನರೆಡ್ಡಿ

ಗ್ರಾಮಗಳ ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ರೈತರಿಗೆ ಧೈರ್ಯ ತುಂಬಲು ವಾರ್ಷಿಕ .15 ಸಾವಿರ ನಗದನ್ನು ನೀಡಲಾಗುವುದು. ರೈತ ಕೇಂದ್ರ ತೆರೆದು ಬೀಜ, ಗೊಬ್ಬರ, ಕೃಷಿಗೆ ಬಳಸುವ ಸಲಕರಣೆಗಳನ್ನು ಪೂರೈಸುವುದು.ಪ್ರತಿಯೊಬ್ಬ ವ್ಯಕ್ತಿಗೂ ‘ಬಸವೇಶ್ವರ ಆರೋಗ್ಯ ಯೋಜನೆ’ಯಡಿ .1ರಿಂದ 10 ಲಕ್ಷ ವಿಮೆ ನೀಡುವುದಾಗಿ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.

Janardana Reddy started a massive campaign in the villages at gangavati rav

ಗಂಗಾವತಿ (ಮಾ.2) : ಪ್ರತಿಯೊಬ್ಬ ವ್ಯಕ್ತಿಗೂ ‘ಬಸವೇಶ್ವರ ಆರೋಗ್ಯ ಯೋಜನೆ’ಯಡಿ ₹1ರಿಂದ 10 ಲಕ್ಷ ವಿಮೆ ನೀಡುವುದಾಗಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

‘ಕಲ್ಯಾಣ ಪ್ರಗತಿ ಪಕ್ಷ(Kalyana pragati party)’ದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ(Gali janardanreddy) ಗಂಗಾವತಿ ವಿಧಾನಸಭಾ ಕ್ಷೇತ್ರ(Gangavati Assembly Constituency)ದ ವ್ಯಾಪ್ತಿಯ ದಾಸನಾಳ ಗ್ರಾಮದ ಕಾಶಿ ಶಿವಲಿಂಗೇಶ್ವರ ದೇವಸ್ಥಾನ(Kashi shivalingeshwar temple) ಬಳಿ ‘ಗಾಲಿ ಜನಾರ್ದನ ರೆಡ್ಡಿ ನಡೆ ಗ್ರಾಮೀಣಾಭಿವೃದ್ಧಿ ಕಡೆ’ ಎನ್ನುವ ಪ್ರಚಾರ ಕಾರ್ಯ ಆರಂಭಿಸಿದರು.

 

ನಾನು ಬ್ಯುಸಿನೆಸ್‌ನಲ್ಲೇ ಮುಂದುವರಿದಿದ್ರೆ ಇಷ್ಟೊತ್ತಿಗೆ ಮುಖೇಶ್ ಅಂಬಾನಿ ನಂತರದ ಸ್ಥಾನದಲ್ಲಿರ್ತಿದ್ದೆ: ಜನಾರ್ದನ್ ರೆಡ್ಡಿ

ವಾರ್ಡ್‌ ನಂ. 2ರ ಆಂಜನೇಯ ದೇಗುಲ ಮತ್ತು ನಾಯಕರ ಓಣಿಯ ದುರ್ಗಮ್ಮ ದೇವಿ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಉಡಮಕಲ…, ಗಡ್ಡಿ, ಬಂಡ್ರಾಳ್‌, ಚಿಕ್ಕಬೆಣಕಲ…, ಲಿಂಗದಹಳ್ಳಿ, ಎಚ್‌ಆರ್‌ಜಿ ಕ್ಯಾಂಪ್‌, ಹೇಮಗುಡ್ಡ ಗ್ರಾಮಗಳಲ್ಲಿ ಪ್ರಚಾರ ಮತ್ತು ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ರೈತರಿಗೆ ಧೈರ್ಯ ತುಂಬಲು ವಾರ್ಷಿಕ .15 ಸಾವಿರ ನಗದನ್ನು ನೀಡಲಾಗುವುದು. ಗ್ರಾಮಗಳಲ್ಲಿ ರೈತ ಕೇಂದ್ರ ತೆರೆದು ಬೀಜ, ಗೊಬ್ಬರ, ಕೃಷಿಗೆ ಬಳಸುವ ಸಲಕರಣೆಗಳನ್ನು ಪೂರೈಸುವುದು.

Raichur Assembly election: ಜನಾರ್ದನರೆಡ್ಡಿ ಪ್ರಭಾವಳಿ ಮಧ್ಯೆ ಟಿಕೆಟ್‌ ಚರ್ಚೆ

ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ಉದ್ಯೋಗ ಸಿಗುವವರೆಗೂ ಪ್ರತಿ ತಿಂಗಳಿಗೆ .2500 ನಿರುದ್ಯೋಗ ಭತ್ಯೆ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಒಟ್ಟು 4 ಸಮಾನಾಂತರ ಜಲಾಶಯ ನಿರ್ಮಾಣ, ಕನಕಗಿರಿ ಬಳಿಯ ನವಲಿಯಲ್ಲಿ 32 ಟಿಎಂಸಿ ಸಾಮರ್ಥ್ಯ ಜಲಾಶಯ ನಿರ್ಮಾಣ, ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯಗಳು, ಸಕಲ ಧರ್ಮದ ದೇಗುಲಗಳ ಅಭಿವೃದ್ಧಿ, ಸರ್ಕಾರದ ಹಲವು ಇಲಾಖೆಗಳಿಂದ ಸಿಗುವ ಸೌಲಭ್ಯಗಳಾದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ, ಚೆನ್ನನಗೌಡ ಇದ್ದರು.

Latest Videos
Follow Us:
Download App:
  • android
  • ios