Asianet Suvarna News Asianet Suvarna News

Raichur Assembly election: ಜನಾರ್ದನರೆಡ್ಡಿ ಪ್ರಭಾವಳಿ ಮಧ್ಯೆ ಟಿಕೆಟ್‌ ಚರ್ಚೆ

ಹೊಸ ವರ್ಷ ಆರಂಭದಲ್ಲೇ ಜನಸಾಮಾನ್ಯರಿಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಆಲೋಚನೆಗೆ ತಳ್ಳಲ್ಪಡುತ್ತಿವೆ. ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಗೊಳ್ಳುತ್ತಿದ್ದಂತೆಯೇ ಇಷ್ಟುದಿನ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಬಲಾಬಲವನ್ನು ಲೆಕ್ಕಿಸುತ್ತಿದ್ದವರು ತಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಮುಖಂಡರು ಸಹ ಹೊಸ ಪಕ್ಷದಿಂದಾಗುವ ಲಾಭ-ನಷ್ಟಗಳ ವಿಚಾರಗಳಲ್ಲಿ ಮುಳುಗಿದ್ದಾರೆ.

Janardana Reddy Effect Raichur Constituency ticket hot debate rav
Author
First Published Jan 9, 2023, 12:44 PM IST

ರಾಮಕೃಷ್ಣ ದಾಸರಿ

ರಾಯಚೂರು (ಜ.9) : ಹೊಸ ವರ್ಷ ಆರಂಭದಲ್ಲೇ ಜನಸಾಮಾನ್ಯರಿಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಆಲೋಚನೆಗೆ ತಳ್ಳಲ್ಪಡುತ್ತಿವೆ. ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಗೊಳ್ಳುತ್ತಿದ್ದಂತೆಯೇ ಇಷ್ಟುದಿನ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಬಲಾಬಲವನ್ನು ಲೆಕ್ಕಿಸುತ್ತಿದ್ದವರು ತಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಮುಖಂಡರು ಸಹ ಹೊಸ ಪಕ್ಷದಿಂದಾಗುವ ಲಾಭ-ನಷ್ಟಗಳ ವಿಚಾರಗಳಲ್ಲಿ ಮುಳುಗಿದ್ದಾರೆ.

ಸದ್ಯ ಜಿಲ್ಲೆ 7 ವಿಧಾನಸಭಾ ಕ್ಷೇತ್ರ(Assembly Constituency)ಗಳಲ್ಲಿ ಕಾಂಗ್ರೆಸ್‌(Congress)ನ 3, ಬಿಜೆಪಿ(BJP) ಮತ್ತು ಜೆಡಿಎಸ್‌ (JDS)ತಲಾ 2 ಶಾಸಕರಿದ್ದಾರೆ. ಈಗಾಗಲೇ ಜೆಡಿಎಸ್‌ ರಾಯಚೂರು ಗ್ರಾಮೀಣ ಕ್ಷೇತ್ರ(Raichur Rural Constituency)ಕ್ಕೆ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಸನಗೌಡ ದದ್ದಲ್‌(Basangowda daddal), ಬಿಜೆಪಿಯಿಂದ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್‌(Tipparaju hawaldar), ಜೆಡಿಎಸ್‌ನಿಂದ ಸಣ್ಣ ನರಸಿಂಹ ನಾಯಕ(Sanna narasimha nayak) ಅವರಿಗೆ ಟಿಕೆಟ್‌ ಪಕ್ಕಾ ಎನ್ನುವ ಸಂದೇಶ ಪಕ್ಷಗಳು ರವಾನಿಸಿವೆ. ಆದರೂ ಸಹ ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿಸುವುದಕ್ಕಾಗಿ ಕಾಣದ ಕೈಗಳು ಕೆಲಸ ಮಾಡುತ್ತಿವೆ.

Raichuru: ಕೆಟ್ಟುಹೋದ ಶುದ್ಧೀಕರಣ ಘಟಕ: ಕುಡಿಯಲು ಆರ್ಸೆನಿಕ್, ಫ್ಲೋರೈಡ್ ನೀರೇ ಗತಿ!

ರಾಯಚೂರು ನಗರ ಕ್ಷೇತ್ರಕ್ಕೆ ಹಾಲಿ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್‌(MLA Dr shivaraj patil) ಸ್ಪರ್ಧೆ ಖಚಿತಗೊಂಡಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಸೈಯದ್‌ ಯಾಸೀನ್‌, ಎನ್‌.ಎಸ್‌.ಬೋಸರಾಜು ಮತ್ತು ರವಿ ಬೋಸರಾಜು ನಡುವೆ ಪೈಪೋಟಿ ಎದುರಾಗಿದೆ. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿರುವ ನಗರಕ್ಕೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎನ್ನುವ ಬಲವಾದ ಕೂಗೂ ಇದೆ. ಜೆಡಿಎಸ್‌ ಮಾತ್ರ ಕಾಂಗ್ರೆಸ್‌ ಟಿಕೆಟ್‌ ಆಧರಿಸಿ ಅಭ್ಯರ್ಥಿ ಕಣಕ್ಕಿಳಿಸುವ ತೀರ್ಮಾನಕ್ಕೆ ಬಂದಿದೆ.

ಮಾನ್ವಿ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ(Raja Venkatappa nayak) ನಾಯಕ ಅವರ ವಿರುದ್ಧವಾಗಿ ಕಾಂಗ್ರೆಸ್‌-ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ಸವಾಲಾಗಿ ಮಾರ್ಪಟ್ಟಿದ್ದು, ಯಾರಿಗೆ ಯಾವ ಪಕ್ಷವು ಮಣೆ ಹಾಕಲಿದೆ ಎನ್ನುವ ಗೊಂದಲವು ರಾಷ್ಟ್ರೀಯ ಪಕ್ಷಗಳಲ್ಲಿ ನಿರ್ಮಾಣಗೊಂಡಿರುವುದು ಕಾರ್ಯಕರ್ತರ ಜೋಷನ್ನು ಕಡಿಮೆಗೊಳಿಸಿದೆ.

ದೇವದುರ್ಗ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ(K Shivanagowda Nayak), ಕಾಂಗ್ರೆಸ್‌ನಿಂದ ಬಿ.ವಿ.ನಾಯಕ ಹಾಗೂ ಜೆಡಿಎಸ್‌ನಿಂದ ಕರೆಮ್ಮ ಜಿ. ನಾಯಕ(IKaremma G nayak) ಅವರ ನಡುವೆ ಪೈಪೋಟಿ ನಿರ್ಮಾಣವಾಗುವ ವಾತಾವರಣವು ಬಹುತೇಕ ಖಚಿತಗೊಂಡಿದೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಟಿಕೆಟ್‌ ಬದಲಾವಣೆಯ ನಿರೀಕ್ಷೆಯನ್ನು ಕಾರ್ಯಕರ್ತರು ಹೊಂದಿದ್ದಾರೆ.

ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲ್‌, ಜೆಡಿಎಸ್‌ನ ಸಿದ್ದು ವೈ.ಬಂಡಿ ಹಾಗೂ ಕಾಂಗ್ರೆಸ್‌ ಹಾಲಿ ಶಾಸಕ ಡಿ.ಎಸ್‌.ಹುಲಿಗೇರಿ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆಗಳಿದೆ. ಆದರೆ, ಸ್ಥಳೀಯರಿಗೆ ಅದರಲ್ಲಿಯೂ ಪರಿಶಿಷ್ಟಜಾತಿಗೆ ಸೇರಿದ ಅಸ್ಪೃಶ್ಯರಿಗೆ ಟಿಕೆಟ್‌ ಕೊಡಬೇಕು ಎನ್ನುವ ಕೂಗು ಕ್ಷೇತ್ರದಲ್ಲಿ ಬಲವಾಗಿ ಕೇಳಿಬರುತ್ತಿದ್ದು, ಕಾಂಗ್ರೆಸ್‌ ಬೆಲೆ ನೀಡುವುದೇ ಕಾದು ನೋಡಬೇಕಾಗಿದೆ.

ಇನ್ನು ಒಂದೂವರೆ ವರ್ಷದ ಹಿಂದೆಯೇ ಉಪಚುನಾವಣೆಯನ್ನು ಎದುರಿಸಿದ ಮಸ್ಕಿ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಹಾಲಿ ಶಾಸಕ ಆರ್‌.ಬಸನಗೌಡ ತುರ್ವಿಹಾಳ, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ಖಚಿತವಾಗಿದ್ದು, ಜೆಡಿಎಸ್‌ ಕಾದುನೋಡುವ ತಂತ್ರ ಅನುಸರಿಸುತ್ತಿದೆ.

ರೆಡ್ಡಿ ಪಕ್ಷದ ಗಾಳಿ:

ಎರಡು ವಾರಗಳ ಹಿಂದೆ ಹೊಸ ಪಕ್ಷವನ್ನು ಘೋಷಿಸಿರುವ ಜನಾರ್ದನರೆಡ್ಡಿ ರಾಯಚೂರು ಜಿಲ್ಲೆಯಲ್ಲಿ ಒಳ್ಳೆ ಪ್ರಭಾವವನ್ನು ಹೊಂದಿದ್ದಾರೆ. ಆಂಧ್ರ-ತೆಲಂಗಣಾ ರಾಜ್ಯದ ಗಡಿಗೆ ಹೊಂದಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು, ಮಸ್ಕಿ, ಮಾನ್ವಿ ಮತ್ತು ರಾಯಚೂರು ತಾಲೂಕುಗಳಲ್ಲಿ ನೂರಾರು ಆಂಧ್ರ ಕ್ಯಾಂಪ್‌ ನಿವಾಸಿಗಳಿದ್ದಾರೆ. ಅವರಲ್ಲಿ ಹಲವರು ರೆಡ್ಡಿ ಬೆಂಬಲಿಗರಿದ್ದಾರೆ. ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೊದಲ ಸಮಾವೇಶವನ್ನು ಬಳ್ಳಾರಿ ಪಕ್ಕದಲ್ಲಿಯೇ ಬರುವ ಜಿಲ್ಲೆ ಸಿಂಧನೂರು ನಗರದಲ್ಲಿ ನಡೆಸಿ ಯಶಸ್ವಿಗೊಂಡಿದ್ದಾರೆ. ಇದೀಗ 3 ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿರುವವರು ಇಲ್ಲಿ ಫಲಸಿಗದೇ ಇದ್ದರೆ ರೆಡ್ಡಿ ಪಕ್ಷದ ಕಡೆ ವಾಲಿ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ಯೋಚನೆಯನ್ನು ಸಹ ಮಾಡುತ್ತಿದ್ದಾರೆ.

ಬಿಗ್ 3 ಬಿಗ್ ಇಂಪ್ಯಾಕ್ಟ್: ವರದಿ ಬೆನ್ನಲ್ಲೇ ಬಿಸಿಯೂಟಕ್ಕಾಗಿ ಬಂತು ನೋಡಿ 11 ಕೋಟಿ ರೂ

 

ಸಿಂಧನೂರು ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರು ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಅವರು ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ. ಇಲ್ಲಿಯ ಜನ ಸ್ವಾಭಿಮಾನಿಗಳು ಹಣಕ್ಕಾಗಿ ಅನ್ಯರ ಕೈಗೆ ಅಧಿಕಾರ ಕೊಡುವುದಿಲ್ಲ. ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿಯ ಬಿ ಟೀಮ್‌ ಆಗಿದೆ.

- ಬಸನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

Follow Us:
Download App:
  • android
  • ios