ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಐಟಿ ಶಾಕ್! ಆಪ್ತನ ಮನೆ ಮೇಲೆ ದಾಳಿ
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಧಾರವಾಡ (ಮೇ.04): ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಚುನಾವಣಾ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್ ನೀಡಿದೆ. ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ವಿನಯ್ ಕುಲಕರ್ಣಿ ಅವರ ಆಪ್ತನ ಮನೆಯ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯಿತಿ ಸದಸ್ಯನ ಕೊಲೆ ಪ್ರಕರಣದ ಆರೋಪದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡಕ್ಕೆ ಹೋಗುವಂತಿಲ್ಲ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದ ಅವರ ಪತ್ನಿಯ ನೆರವಿನಿಂದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈಗ ಎಲ್‌ಇಡಿ ಪರದೆ ಸೇರಿದಂತೆ, ವಿವಿಧ ಡಿಜಿಟಲ್ ಉಪಕರಣಗಳನ್ನು ಬಳಸಿ ಚುನಾವಣಾ ಪ್ರಚಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂದ ದೂರು ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಪ್ರಶಾಂತ್ ಕೇಕರೆ ಅವರ ಮೇಲೆ ಐಟಿ ದಾಳಿ ಮಾಡಲಾಗಿದೆ.
Jan Ki Baat Suvarna Survey: ರಾಜ್ಯದ 6 ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲವೆಷ್ಟು?
ಸಪ್ತಾಪುರ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿ: ಧಾರವಾಡ ಸಪ್ತಾಪುರ ಬಡಾವಣೆಯ ಕೃಷಿ ಪಾರ್ಕ್‌ನಲ್ಲಿರುವ ವಿನಯ್ ಕುಲಕರ್ಣಿ ಆಪ್ತ ಪ್ರಶಾಂತ ಕೇಕರೆ ನಿವಾಸದ ಮೇಲೆ ಸಂಜೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ, ಪ್ರಶಾಂತ ಕೇಕರೆ ಮನೆಯಲ್ಲಿರದೇ ಬೇರೆ ಊರಿನಲ್ಲಿದ್ದಾರೆ. ಇನ್ನು ಐಟಿ ಅಧಿಕಾರಿಗಳು ಕೇಕರೆ ಬರುವಿಕೆಗಾಗಿ ಕಾಯುತ್ತಿದ್ದು, ಅವರು ಬಂದ ತಕ್ಷಣ ದಾಖಲೆಗಳ ಬಗ್ಗೆ ಮಾಹಿತಿ ಕೇಳಲಿದ್ದಾರೆ. ಕಳೆದ (2018ರ) ವಿಧಾನಸಭಾ ಚುನಾವಣೆಯಲ್ಲಿಯೂ ಕುಲಕರ್ಣಿ ಆಪ್ತ ಸಹಾಯಕನಾಗಿರುವ ಕೇಕರೆ ಮನೆಯ ಮೇಲೆ ದಾಳಿ ನಡೆದಿತ್ತು.
ತಂತ್ರಜ್ಞಾನ ಬಳಸಿ ಪ್ರಚಾರ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದರೂ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭ್ಯರ್ಥಿಯ ಬೆಂಬಲಿಗರು ತಂತ್ರಜ್ಞಾನ ಬಳಸಿ ಪ್ರಚಾರ ಮಾಡುತ್ತಿದ್ದಾರೆ. ವಿನಯ ಕುಲಕರ್ಣಿ ಕ್ಷೆತ್ರದಿಂದ ಹೊರಗುಳಿದಿದ್ದಾರೆ. ಎಲ್ಇಡಿ ಬಳಸಿ ವಿಡಿಯೋ ಕಾನ್ಪರೆನ್ಸ್ ಮುಖಾಂತರ ಪ್ರಚಾರ ಮಾಡಲಾಗುತ್ತಿದೆ. ಕ್ಷೇತ್ರದಾದ್ಯಂತ 5 ವಾಹನಗಳನ್ನ ಬಳಕೆ ಮಾಡಿಕ್ಕೊಂಡು ಪ್ರಚಾರ ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಲಕಮಾಪೂರ, ಪುಡಕಲಕಟ್ಟಿ, ಹಂಗರಕಿ, ಗ್ರಾಮದಿಂದ ವಿಡಿಯೋ ಕಾನ್ಫರೆನ್ಸ್ ಮುಖಾಮಂತರ ಪ್ರಚಾರ ಮಾಡಿದರು.
Jan Ki Baat Suvarna News Survey: ಹೇಗೆ ನಡೆಯಿತು ಸಮೀಕ್ಷೆಯ ಮಹಾಸಮರ!
ಪತ್ನಿ ಮಗಳಿಂದ ಪ್ರಚಾರ: ವಿಡಿಯೋ ಮುಖಾಂತರ ಮತಯಾಚಣೆ ಮಾಡಿದ ವಿನಯ ಕುಲಕರ್ಣಿ ಅವರು, ಕ್ಷೆತ್ರದಲ್ಲಿ ಈ ಭಾರಿ ನಿಮಗೆ ಸಪೋರ್ಟ ಮಾಡುತ್ತೆವೆ ಎಂದ ಮತದಾರರಿಂದ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಮತ್ತೊಂದು ಕಡೆ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಕೂಡ ಮನೆ ಮನೆಗೆ ಪ್ರಚಾರ ಮಾಡುತ್ತಿದ್ದಾರೆ. ಅವರ ಜೊತೆಗೆ, ಕುಲಕರ್ಣಿ ಮಗಳು ವೈಶಾಲಿ ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಕಿತ್ತೂರಿನಲ್ಲಿ ತಂಗಿರುವ ವಿನಯ್ ಕುಲಕರ್ಣಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.