ಮೀಸಲಾತಿ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲು ನಮ್ಮದು ಕಾಂಗ್ರೆಸ್‌ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು (ಮಾ.30) : ಮೀಸಲಾತಿ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲು ನಮ್ಮದು ಕಾಂಗ್ರೆಸ್‌ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕೆಲವರು ರಾಜಕೀಯ ಪ್ರೇರಿತವಾಗಿ ತಪ್ಪು ಅಭಿ​ಪ್ರಾ​ಯ ಮೂಡಿಸುವ ಪ್ರಯತ್ನ ಮಾಡುತ್ತಾರೆ. ಸದಾಶಿವ ಆಯೋಗ(Sadashiva report) ಬಂಜಾರ, ಬೋವಿ, ಕೊರಚ, ಕೊರಮ ಈ ಸಮುದಾಯಗಳಿಗೆ ಶೇ.3ರಷ್ಟುಮೀಸಲಾತಿ ನಿಗದಿ ಪಡಿಸಿತ್ತು. ಆದರೆ ಬಿಜೆ​ಪಿ ಸರ್ಕಾರ ಕೊಟ್ಟಿರುವುದು ಶೇ.4.50ರಷ್ಟುಮೀಸ​ಲಾತಿ. ಕಾಂಗ್ರೆಸ್‌ ಸರ್ಕಾರ ಶೇ.2.50ರಿಂದ ಶೇ.3ರಷ್ಟುಮೀಸಲಾತಿ ಅಷ್ಟೇ ನೀಡಬೇಕು ಎಂದು ಟಿಪ್ಪಣಿ ತಯಾರಿಸಿತ್ತು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆ​ಸಿ​ದರು.

Ticket fight: ಕಾಫಿನಾಡು ಮೂಡಿಗೆರೆಯಲ್ಲಿ ಮುಗಿಯದ ಬಿಜೆಪಿ ಬಣ ರಾಜಕೀಯ!

ಸದಾಶಿವ ಆಯೋಗ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಮೀಸಲಾತಿಯನ್ನು ನೀಡಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಇದರ ಮೇಲೆ ಯಾರಿಗಾದರೂ ಅನ್ಯಾಯವಾಗಿದೆ ಎನ್ನಿಸಿದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಭರ​ವಸೆ ನೀಡಿ​ದ್ದಾರೆ ಎಂದರು. ಬಂಜಾರÜ, ಬೋವಿ ಸಮಾಜ ಬಿಜೆಪಿ ಜೊತೆಗೆ ಮುಂಚಿನಿಂದಲೂ ಇದೆ. ನಾವೂ ಅವರ ಜೊತೆಗಿದ್ದೇವೆ. ಯಾರನ್ನೂ ಬಿಟ್ಟುಕೊಡುವ, ಕಡೆಗಣಿಸುವ ಪ್ರಶ್ನೆಯಿಲ್ಲ ಎಂದು ತಿಳಿಸಿದರು.

ಜೋಡಿಹೋಚಿಹಳ್ಳಿ ಪಂಚಾಯ್ತಿಗೆ 15.96 ಕೋಟಿ ರು. ಅನುದಾನ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikkamagaluru assembly constituency)ದ ವ್ಯಾಪ್ತಿಯಲ್ಲಿರುವ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ 15.96 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಇತ್ತೀಚೆಗೆ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ತಾಂಡದಲ್ಲಿ ನಡೆದ ಕಂದಾಯ ಗ್ರಾಮ ಘೋಷಣೆ ಹಾಗೂ ಹಕ್ಕಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೋಡಿಹೋಚಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 3.30 ಕೋಟಿ ರು. ಅನುದಾನ ನೀಡಿದ್ದೇನೆಂದು ಹೇಳಿದರು. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಲುಬುರ​ಗಿಯಲ್ಲಿ ಲಂಬಾಣಿ ತಾಂಡಾದ ಹಾಗೂ ಗೊಲ್ಲರಹಟ್ಟಿಗಳಿಗೆ ಸಂಬಂಧಿಸಿದಂತೆ 1575 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ, 60 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರವನ್ನು ವಿತರಿಸಿದರು.

ಆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ, ನಮ್ಮ ಕ್ಷೇತ್ರದಲ್ಲಿರುವಂತಹ ತಾಂಡ್ಯ ಹಾಗೂ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಹಕ್ಕುಪತ್ರ ನೀಡುತ್ತಿದ್ದೇವೆಂದ ಅವರು, ವಡೇರಹಳ್ಳಿ ತಾಂಡ್ಯದ 120 ಹಾಗೂ ಜೋಡಿಹೋಚಿಹಳ್ಳಿ ಗೊಲ್ಲರಹಟ್ಟಿಯಲ್ಲಿ 30ಕ್ಕೂ ಹೆಚ್ಚು ಹಕ್ಕುಪತ್ರ ನೀಡಲಾಗುತ್ತಿದೆ ಎಂದರು.

ಚಿಕ್ಕಮಗಳೂರಿನ ವಿವಾದಿತ ಸ್ಥಳ ಕೋಟೆ ದರ್ಗಾ ನವೀಕರಣ: ಹಿಂದೂಗಳ ವಿರೋಧ

ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿದ್ಯಾ ಸರಸ್ವತಿ ಮಹೇಶ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ್‌, ಸಾಹಿತಿ ಚಟ್ನಳ್ಳಿ ಮಹೇಶ್‌, ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕದೇವನೂರು ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರಡಪ್ಪ, ಲಕ್ಷ್ಮಣ್‌ ನಾಯಕ್‌, ರವಿಕುಮಾರ್‌, ತ್ರಿಮೂರ್ತಿ, ಸಂತೋಷ್‌, ಯಶೋಧಮ್ಮ, ಗ್ರಾಮಸ್ಥರಾದ ಬಿಜ್ಜು ದೇವರಾಜ ನಾಯ್ಕ, ಪ್ರಕಾಶ್‌ ನಾಯ್ಕ, ಕುಮಾರನಾಯ್ಕ, ಶಂಕರನಾಯ್ಕ, ಸತೀಶ್‌ ನಾಯ್ಕ, ತೀರ್ಥನಾಯ್ಕ, ಮೂರ್ತಿನಾಯ್ಕ, ವಸಂತನಾಯ್ಕ, ಲಂಬಾಣಿ ಸಮಾಜದ ಮುಖಂಡರು ಹಾಗೂ ಕಂದಾಯ ನಿರೀಕ್ಷಕ ಜಿತೇಂದ್ರ ನಾಯ್ಕ, ಪಿಡಿಓ ಆದಿನಾಥ್‌ ಬಿಳಗಿ ಉಪಸ್ಥಿತರಿದ್ದರು. ರೂಪಾ ವೆಂಕಟೇಶ್‌ ನಾಯ್‌್ಕ ಕಾರ್ಯಕ್ರಮ ನಿರೂಪಿಸಿದರು.