ಚಿಕ್ಕಮಗಳೂರಿನ ವಿವಾದಿತ ಸ್ಥಳ ಕೋಟೆ ದರ್ಗಾ ನವೀಕರಣ: ಹಿಂದೂಗಳ ವಿರೋಧ

ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಮರು
ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳ ಆಕ್ರೋಶ
ಎರಡೂ ಕೋಮಿನ ಜನರಿಂದ ಬಿಗುವಿನ ವಾತಾವರಣ ನಿರ್ಮಾಣ

Renovation of Kote Dargah a disputed site in Chikmagalur Opposition from Hindus sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.28): ಚಿಕ್ಕಮಗಳೂರು ನಗರದ ವಿವಾದಿತ ಸ್ಥಳದಲ್ಲಿರುವ ಕೋಟೆ ಬಡಾವಣೆಯಲ್ಲಿನ ದರ್ಗಾವನ್ನು ಸ್ಥಳೀಯ ಪ್ರಾಧಿಕಾರದ ಅನುಮತಿ ಇಲ್ಲದೇ ನವೀಕರಣ ಮಾಡಲಾಗುತ್ತಿದ್ದ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ಮಾಡದಂತೆ ತಡೆಯೊಡ್ಡಿವೆ. ವಿವಾದಿತ ಜಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ರಾಜ್ಯದ ರಾಜಧಾನಿ ಬೆಂಗಳೂರು, ಅವಳಿನಗರ ಹುಬ್ಬಳ್ಳಿ- ಧಾರವಾಡದಲ್ಲಿರುವ ಈದ್ಗಾ ಮೈದಾನದಂತೆ ವಿವಾದಿತ ಪ್ರದೇಶವಾಗಿರುವ ಚಿಕ್ಕಮಗಳೂರಿನ ಕೋಟೆ ಬಡಾವಣೆಯ ದರ್ಗಾ ಮೈದಾನದ ಕುರಿತು ಈಗ ಮತ್ತೊಮ್ಮೆ ವಿವಾದ ಸೃಷ್ಟಿಯಾಗಿದೆ. 1998ರಿಂದ ವಿವಾದಿತ ಸ್ಥಳವಾಗಿರುವ ದರ್ಗಾದ ಪ್ರದೇಶದಲ್ಲಿ ಈಗ ಮುಸ್ಲಿಮರು ದರ್ಗಾ ನವೀಕರಣ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ, ವಿವಾದಿತ ಸ್ಥಳದಲ್ಲಿ ಯಾಉದೇ ಕಾಮಗಾರಿ ಮಾಡದಂತೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಸ್ಥಳ ಕೇವಲ ಉರುಸ್‌ ಆಚರಣೆಗೆ ಮಾತ್ರ ಸೀಮಿತವಾಗಿದ್ದು, ಇಲ್ಲಿ ಕಾಮಗಾರಿ ಮಾಡದಂತೆ ತಡೆದಿದ್ದಾರೆ. 

ಸಿಎಂ ಚಡ್ಡಿ ಬಿಚ್ಚಿಸ್ತೀವಿ ಎಂದವರಿಗೆ ಬಿರಿಯಾನಿ ಕೊಟ್ಟು ಸಾಕೊಲ್ಲ: ಬಾಂಬ್‌ ಹಾಕೋರ ತಲೆಗೆ ಬಾಂಬ್‌ ಹಾಕ್ತೀವಿ

1998ರಿಂದಲೂ ವಿವಾದದಲ್ಲಿರುವ ದರ್ಗಾ: ಚಿಕ್ಕಮಗಳೂರು ನಗರದಲ್ಲಿ 1998 ರಿಂದಲೂ ಈ ಜಾಗ ವಿವಾದದಲ್ಲಿದೆ. ಇಲ್ಲಿ ಉರುಸ್‌ ಆಚರಣೆ ಬಿಟ್ಟರೆ ಬೇರಾವ ಕಾರ್ಯಕ್ರಮಕ್ಕೂ ಅವಕಾಶ ನೀಡುವಂತಿಲ್ಲ. ಈಗ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯದೆ ನವೀಕರಣ ಮಾಡಲಾಗುತ್ತಿದೆ. ಕಾಮಗಾರಿ ಮಾಡದಂತೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಎರಡೂ ಹಿಂದು- ಮುಸ್ಲಿಂ ಎರಡೂ ಕಡೆಯವರು ಸೇರಿ ಬಿಗುವಿನ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಮತ್ತು ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಆಗಮಿಸಿದರು. ಕೆಲವರು ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. 

ನಗರಸಭೆ ಕಚೇರಿಯಲ್ಲಿ ಹಿಂದು- ಮುಸ್ಲಿಂ ಸಭೆ: ಸಂಜೆ ನಗರಸಭೆ ಅಧ್ಯಕ್ಷರ ಕಛೇರಿಯಲ್ಲಿ ಎಸ್ ಪಿ ಸಮ್ಮುಖದಲ್ಲಿ ಸಭೆಯನ್ನು ಕೂಡ ನಡೆಸಿದರು. ಈ ವೇಳೆ ಕೆಲವರು ಗೂಂಡಾಗಿರಿ ಪದ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿ ಗೊಂದಲ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ವಿವಾದಿತ ಸ್ಥಳದಲ್ಲಿ ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅವಕಶಾವಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಈಗ ಟೈಲ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಮುಂದೆ ಇಂತ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹಿಂದೂಪರ ಮುಖಂಡರು ಹೇಳಿದರು.

ಬೆಳಗ್ಗೆ ಜೈಲು ಸಂಜೆಗೆ ಬೇಲು: ಶಿಕಾರಿಪುರ ಕಲ್ಲು ತೂರಾಟದ ಆರೋಪಿಗಳಿಗೆ ಜಾಮೀನು ಮಂಜೂರು

ಹೊಸದಾಗಿ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ:  ಅಂತಿಮವಾಗಿ ನಗರಸಭೆ ಅನುಮತಿ ಪಡೆಯದೆ ನವೀಕರಣ ಕಾರ್ಯಕ್ಕೆ ಮುಂದಾಗಿದ್ದು ತಪ್ಪು, ನಗರಸಭೆಯಲ್ಲಿ ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿವೆ, ನಿಮ್ಮ ಬಳಿ ಇರುವ ದಾಖಲೆಗಳನ್ನೂ ತರಬೇಕು. ಸಧ್ಯಕ್ಕೆ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಅಲ್ಲಿ ನಡೆಸಬಾರದು. ಇದನ್ನೂ ಮೀರಿ ಅಂತಹ ಚಟುವಟಿಕೆಗಳು ನಡೆದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು  ಎಂದು ನಗರಸಭೆ ಅಧ್ಯಕ್ಷರು ಸೂಚಿಸಿದರು. 

ಸಭೆಯಲ್ಲಿ ನಗರಸಭೆ ಆಯುಕ್ತ ಉಮೇಶ್, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ನಗರ ಸಂಚಾಲಕ ಶ್ಯಾಂ ವಿ.ಗೌಡ, ನಗರಸಭೆ ಸದಸ್ಯ ಮಧುಕುಮಾರ ರಾಜ್ ಅರಸ್, ಮುಸ್ಲಿಂ ಸಂಘಟನೆ ವತಿಯಿಂದ ಕಾಲೂಬ, ಜಂಶೀದ್ ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios