ಸೋಲುವ ಭಯದಿಂದ ಸಿದ್ದರಾಮಯ್ಯ ವರುಣಾಕ್ಕೆ ಹೋಗಿ ಬಾದಾಮಿಗೆ ದ್ರೋಹ ಮಾಡಿದ್ದಾರೆ. ಪಲಾಯನವಾದಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕಾದರೆ ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನೀವು ತೆಗೆದುಕೊಳ್ಳಿ, ವರುಣಾದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು.

ಕೆರೂರ (ಮೇ.01): ಸೋಲುವ ಭಯದಿಂದ ಸಿದ್ದರಾಮಯ್ಯ ವರುಣಾಕ್ಕೆ ಹೋಗಿ ಬಾದಾಮಿಗೆ ದ್ರೋಹ ಮಾಡಿದ್ದಾರೆ. ಪಲಾಯನವಾದಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕಾದರೆ ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನೀವು ತೆಗೆದುಕೊಳ್ಳಿ, ವರುಣಾದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು.

ಭಾನುವಾರ ಬಾಗಲಕೋಟೆ ಜಿಲ್ಲೆಯ ಕೆರೂರಿನ ಗಣೇಶಗುಡಿ ಮುಂದಿನ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನ ಕಸಿದುಕೊಂಡ ಬಿಜೆಪಿಯವರು ಅವರನ್ನು ಕಡೆಗಣಿಸುತ್ತಿದ್ದಾರೆಂಬ ಸುಳ್ಳು ಸೃಷ್ಟಿಯನ್ನು ವಿರೋಧಿ​ಗಳು ಮಾಡುತ್ತಿದ್ದಾರೆ. ಅದು ಸುಳ್ಳು ಎಂದ ಯಡಿಯೂರಪ್ಪ, ನಾನೇ ಸ್ವ ಇಚ್ಛೆಯಿಂದ ಪದವಿ ತ್ಯಜಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮೇ ಯೋಜನೆ ಜಾರಿಗೆ ತಂದಿದ್ದು ಇಡೀ ದೇಶದಲ್ಲಿಯೇ ಬಿಜೆಪಿ ಸರ್ಕಾರ. ರೈತರ ಪಂಪಸೆಟ್‌ಗೆ ಉಚಿತ ವಿದ್ಯುತ್‌, ರೈತರ ಪರ ಪ್ರತ್ಯೇಕ ಬಜೆಟ್‌ ಮಂಡನೆ, ನೇಕಾರ ಕುಟುಂಬಕ್ಕೆ 2 ಸಾವಿರ ಸಹಾಯಧನ ವಿದ್ಯುತ್‌ ಫ್ರೀ, ರೈತರ ಸಾಲ ಮನ್ನಾ, ಎಸ್ಸಿ, ಎಸ್ಟಿಸಮುದಾಯಕ್ಕೆ ವಿಶೇಷ ಸೌಲಭ್ಯಗಳು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನರ ಮನೆ ಬಾಗಿಲಿಗೆ ಮುಟ್ಟಿಸಿದ್ದು ಈ ನಿಮ್ಮ ಯಡಿಯೂರಪ್ಪ ಎಂದರು.

ಕಾಂಗ್ರೆಸ್‌ನ ಮೊಸಳೆ ಕಣ್ಣೀರು: ಬಿಜೆಪಿಯಲ್ಲಿ ವೀರಶೈವರನ್ನು ಕಡೆಗಣಿಸುತ್ತಿದ್ದಾರೆಂಬ ಗುಲ್ಲನ್ನು ಕಾಂಗ್ರೆಸ್‌ನವರು ಎಬ್ಬಿಸುತ್ತಿದ್ದು ಅದು ಸಂಪೂರ್ಣ ಸುಳ್ಳು. ವೀರಶೈವ ಸಮಾಜದ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿ ಅನ್ಯಾಯ ಮಾಡಿದ್ದು ಯಾರು ಎಂದ ಅವರು, ರಾಜೀವ ಗಾಂ​ಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವೆಂಬುವುದು ವೀರಶೈವರಿಗೆ ಗೊತ್ತಿದೆ. ಈಗ ಕಾಂಗ್ರೆಸ್‌ನವರು ಮೊಸಳೆ ಕಣ್ಣೀರು ಸುರಿಸುವ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆ ಅವರಿಗೆ ತಕ್ಕಪಾಠ ಕಲಿಸಲಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಬ್ರಿಟಿಷರಂತೆ ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ: ಸಚಿವ ಸುಧಾಕರ್‌

ಮೋದಿ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ: ಪ್ರಧಾನಿ ನರೇಂದ್ರ ಮೋದಿರನ್ನು ನೋಡಲು ಕೆಂದಟ್ಟಿಬಳಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನಸಾಗರ ಹರಿದುಬಂತು. ಆದರೆ ಬಿಜೆಪಿಯವರು ನಿರೀಕ್ಷಿಸಿದಷ್ಟುಜನಸಂಖ್ಯೆ ಇರದಿದ್ದರೂ ಬಿಜೆಪಿ ಶಾಸಕರುಗಳು ಇಲ್ಲದೇ ಇರುವ ಜಿಲ್ಲೆಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಕಾರ್ಯಕರ್ತರಿಗಿಂತ ಮೋದಿ ಅಭಿಮಾನಿಗಳೇ ಹೆಚ್ಚಾಗಿದ್ದರು. ಕೋಲಾರ ಜಿಲ್ಲೆಗಿಂತ ಚಿಕ್ಕಬಳ್ಳಾಪುರ ಮತ್ತು ಹೋಸಕೋಟೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೆಚ್ಚಾಗಿದ್ದರು, ಸುಧಾಕರ್‌, ಎಂಟಿಬಿ ನಾಗರಾಜ್‌, ಬಾಗೇಪಲ್ಲಿ ಅಭ್ಯರ್ಥಿ ಮುನಿರಾಜು, ಕೋಲಾರ ಅಭ್ಯರ್ಥಿ ವರ್ತೂರು ಪ್ರಕಾಶ್‌ ವೇದಿಕೆ ಮೇಲೆ ಕಂಡ ಅವರ ಅಭಿಮಾನಿಗಳು ಶಿಳ್ಳೆ ಮತ್ತು ಜೈಕಾರಗಳು ಮೊಳಗುತ್ತಿದ್ದವು.