Asianet Suvarna News Asianet Suvarna News

ತಮಿಳ್ನಾಡಲ್ಲಿ ಈ ಬಾರಿ ಬಿಜೆಪಿ ಮ್ಯಾಜಿಕ್‌ ಮಾಡುತ್ತಾ?

ತಮಿಳುನಾಡು ಈ ಸಲ ಇಡೀ ದೇಶದ ಗಮನ ಸೆಳೆಯುವ ಕೇಂದ್ರಬಿಂದುವಾಗಿದೆ. ಏಕೆಂದರೆ ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕರು ಆಡಿದ ಮಾತುಗಳನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ಮಾತ್ರವಲ್ಲ ವಿಪಕ್ಷಗಳ ಸಮಸ್ತ ಇಂಡಿಯಾ ಕೂಟವೇ ಸನಾತನ ಧರ್ಮದ ವಿರೋಧಿ ಆಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಇಡೀ ಸನಾತನ ಧರ್ಮ ವಿವಾದ ದೇಶವ್ಯಾಪಿ ಚುನಾವಣಾ ವಿಷಯವಾಗಿದೆ.

Is BJP Doing Magic on  Assembly Election 2024 in Tamil Nadu grg
Author
First Published Mar 27, 2024, 7:40 AM IST

ಚೆನ್ನೈ(ಮಾ.27): ದ್ರಾವಿಡ ಪಕ್ಷಗಳ ಹೋರಾಟದ ಭೂಮಿಯಾದ ತಮಿಳುನಾಡಿನಲ್ಲಿ ಈ ಬಾರಿ ಬದಲಾವಣೆಯ ದೊಡ್ಡ ಗಾಳಿ ಬೀಸಬಹುದು ಎನ್ನಲಾಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಕದನದಕ್ಕೆ ಸದಾ ವೇದಿಕೆಯಾಗುವ ರಾಜ್ಯದಲ್ಲಿ ಈ ಬಾರಿ ಮುವ ಭರವಸೆ ವ್ಯಕ್ತಪಡಿಸಿದೆ. ಹೀಗಾಗಿ ರಾಜ್ಯದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.

ಆಡಳಿತಾರೂಢ ಡಿಎಂಕೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ ಮಹಿಳೆಯರಿಗೆ ಮಾಸಿಕ 1000 ರು. ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿ ಮಾಡಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್ ಜೊತೆ ಯಾವುದೇ ಗೊಂದಲಕ್ಕೆ ಗುರಿ ಮಾಡದೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಚುನಾವಣೆಯಲ್ಲಿ ಇತರೆ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿದೆ.

ಮೋದಿ ತಾಯಿ ಬಗ್ಗೆ ತಮಿಳುನಾಡು ಸಚಿವ ಕೀಳುನುಡಿ: ವಿವಾದ

ಇನ್ನೊಂದೆಡೆ ಪ್ರಮುಖ ವಿಪಕ್ಷ ಎಐಎಡಿಎಂಕೆ ಪರ್‌ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಬಣ ಜಗಳದಲ್ಲಿ ಸಿಕ್ಕಿಬಿದ್ದಿದೆ. ಇದು ಪಕ್ಷದ ಗೆಲುವಿನ ಹಾದಿಗೆ ದೊಡ್ಡ ಪೆಟ್ಟು ನೀಡಿದೆ. ಅಲ್ಲದೆ ಬಿಜೆಪಿ ಕೂಡಾ ಪ್ರತ್ಯೇಕವಾಗಿ ಸ್ಪರ್ಧಿಸಲು ಮುಂದಾಗಿರುವುದು ಮಾಜಿ ಸಿಎಂ ದಿ.ಜಯಲಲಿತಾರ ಪಕ್ಷಕ್ಕೆ ಆಗಿರುವ ಹಿನ್ನಡೆ, ಈ ನಡುವೆ ಯುವ ನಾಯಕ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಬದಲಾವಣೆಯ ಹೊಸ ಗಾಳಿ ಬೀಸುವ ಭರವಸೆ ವ್ಯಕ್ತಪಡಿಸಿದೆ. ಬಿಜೆಪಿಯ ಬಲ ಹೆಚ್ಚುವ ಚುನಾವಣೋತ್ತರ ಸಮೀಕ್ಷಾ ವರದಿಗಳು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಗೆ ಕಾರಣವಾಗಿದೆ.

ಪ್ರಮುಖ ಅಭ್ಯರ್ಥಿಗಳು: 

ಡಿಎಂಕೆ ನಾಯಕಿ ಕನಿಮೋಳಿ ತೂತ್ತುಕುಡಿಯಿಂದ, ಡಿಎಂಕೆಯ ದಯಾನಿಧಿ ಮಾರನ್ ಚೆನ್ನೈ ಸೆಂಟ್ರಲ್‌ನಿಂದ, ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಟ್ಟು ಮತ್ತೆ ಬಿಜೆಪಿ ಸೇರಿದ ತಮಿಳಿಸಾಯಿ ಸೌಂದರರಾಜನ್ ಚೆನ್ನೈ  ದಕ್ಷಿಣದಿಂದ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೊಯಮತ್ತೂರಿನಿಂದ, ಡಿಎಂಕೆ ನಾಯಕ ಎ. ರಾಜಾ ನೀಲಗಿರಿಯಿಂದ ಸ್ಪರ್ಧಿಸುತ್ತಿದ್ದಾರೆ.

ಪ್ರಧಾನಿ ಮೋದಿ 28 ಪೈಸೆ ಪಿಎಂ ಎಂದ ಉದಯನಿಧಿ ಸ್ಟ್ಯಾಲಿನ್‌

ಸನಾತನ ಧರ್ಮದ ಹೇಳಿಕೆ: 

ತಮಿಳುನಾಡು ಈ ಸಲ ಇಡೀ ದೇಶದ ಗಮನ ಸೆಳೆಯುವ ಕೇಂದ್ರಬಿಂದುವಾಗಿದೆ. ಏಕೆಂದರೆ ಸನಾತನ ಧರ್ಮದ ಬಗ್ಗೆ ಡಿಎಂಕೆ ನಾಯಕರು ಆಡಿದ ಮಾತುಗಳನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ಮಾತ್ರವಲ್ಲ ವಿಪಕ್ಷಗಳ ಸಮಸ್ತ ಇಂಡಿಯಾ ಕೂಟವೇ ಸನಾತನ ಧರ್ಮದ ವಿರೋಧಿ ಆಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಇಡೀ ಸನಾತನ ಧರ್ಮ ವಿವಾದ ದೇಶವ್ಯಾಪಿ ಚುನಾವಣಾ ವಿಷಯವಾಗಿದೆ.

ಸ್ಪರ್ಧೆ ಹೇಗೆ?

ಈ ಸಲ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ತಮ್ಮ ಆಡಳಿತದ ಸಾಧನೆಗಳು ಹಾಗೂ ತಮಿಳುನಾಡಿನ ಆಸ್ಥಿತೆ ಕಾಪಾಡಲು ಇಟ್ಟ ಹೆಜ್ಜೆಗಳನ್ನು ಇರಿಸಿ ಡಿಎಂಕೆ ಹೋರಾಟಕ್ಕೆ ಅಣಿಯಾಗಿದೆ. ಡಿಎಂಕೆಗೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸಾಥ್ ನೀಡಿವೆ. ಜಯಾ ಉತ್ತರಾಧಿಕಾರಿ ತಾನು ಎಂಬ ಹುಮ್ಮಸ್ಸಿನಲ್ಲಿ ಅಣ್ಣಾಡಿಎಂಕೆ, ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಸಮರಕ್ಕೆ ಸಜ್ಜಾಗಿದೆ. ಬಿಜೆಪಿ ಈ ಸಲ ಮೋದಿ ಚರಿಷ್ಮಾ ಹಾಗೂ ಯುವ ನಾಯಕ ಆಣ್ಣಾಮಲೈ ವರ್ಚಸ್ಸು ನೆಚ್ಚಿಕೊಂಡು ಮೊದಲ ಸಲ ತಮಿಳುನಾಡಲ್ಲಿ ಭಾರಿ ಸ್ಪರ್ಧೆ ನೀಡುವ ನಿರೀಕ್ಷೆ ಇಡ್ಕೊಂಡಿದೆ. 

Follow Us:
Download App:
  • android
  • ios