ಮೋದಿ ತಾಯಿ ಬಗ್ಗೆ ತಮಿಳುನಾಡು ಸಚಿವ ಕೀಳುನುಡಿ: ವಿವಾದ

ತಮಿಳುನಾಡಿನ ಮೀನಗಾರಿಕೆ ಖಾತೆ ಸಚಿವ ಅನಿತಾ ರಾಧಾಕೃಷ್ಣನ್‌ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ದಿ.ಹೀರಾಬೆನ್‌ ಬಗ್ಗೆ ಕೀಳು ಮಾತುಗಳನ್ನು ಆಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ.

Tamil Nadu Minister  Anitha Radhakrishnan  Controversial Remarks On PM Modi Mother gow

ಚೆನ್ನೈ (ಮಾ.25): ತಮಿಳುನಾಡಿನ ಮೀನುಗಾರಿಕೆ ಖಾತೆ ಸಚಿವ ಅನಿತಾ ರಾಧಾಕೃಷ್ಣನ್‌ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ದಿ.ಹೀರಾಬೆನ್‌ ಬಗ್ಗೆ ಕೀಳು ಮಾತುಗಳನ್ನು ಆಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವ ವೇಳೆ ಡಿಎಂಕೆ ನಾಯಕಿ ಕೆ. ಕನಿಮೋಳಿ ಉಪಸ್ಥಿತಿಯಲ್ಲೇ ಅನಿತಾ , ಈ ಕೀಳು ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ‘ಡಿಎಂಕೆ ನಾಯಕರು ತಮ್ಮ ವರ್ತನೆಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದಾರೆ. ಸಾರ್ವಜನಿಕವಾಗಿಯೇ ಅವರು ಪ್ರಧಾನಿ ಮೋದಿ ಮತ್ತು ಅವರ ತಾಯಿ ಬಗ್ಗೆ ಕೀಳು ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Breaking: ಉಜ್ಜಯಿನಿ ದೇವಾಲಯದ ಗರ್ಭಗುಡಿಯಲ್ಲಿ ಬೆಂಕಿ ಅನಾಹುತ, 13 ಅರ್ಚಕರಿಗೆ ಗಂಭೀರ ಗಾಯ!

ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಇಸ್ರೋದ ಕಾರ್ಯಕ್ರಮವೊಂದರ ವೇಳೆ ಇಸ್ರೋ ಹೊಗಳುವ ಜಾಹೀರಾತು ನೀಡಿದ್ದ ಸಚಿವ ಅನಿತಾ ರಾಧಾಕೃಷ್ಣನ್‌, ಅದಕ್ಕೆ ಚೀನಿ ರಾಕೆಟ್‌ ಬಳಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದರು.

Latest Videos
Follow Us:
Download App:
  • android
  • ios