ಚುನಾವಣೆಗೂ ಮುನ್ನವೇ ಶುರುವಾಯ್ತು ಧಮ್ಕಿ ಪಾಲಿಟಿಕ್ಸ್‌: ಹರ್ಷಾನಂದ ಗುತ್ತೇದಾರ್‌

ಚುನಾವಣೆ ಹತ್ರ ಬರ್ತಿದ್ದಂತೆ ಆಳಂದದಲ್ಲಿ ಕಾಂಗ್ರೆಸ್ಸಿಗರಿಂದ ಧಮ್ಕಿ- ಆವಾಜ್‌ ಪಾಲಿಟಿಕ್ಸ್‌ - ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್‌ ಆರೋಪ, ಕಲಬುರಗಿಯ ಅಳಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ಸಿಗನ ಧಮ್ಕಿ ಆಡಿಯೋ ವೈರಲ್‌, ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ಆಪ್ತನ ವಿರುದ್ಧ ಬಿಜೆಪಿ ಧಮ್ಕಿ ಆರೋಪ. 

Intimidation Politics Started Before the Elections Says Harshanand Guttedar grg

ಕಲಬುರಗಿ(ಮಾ.25):  ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಬಿಆರ್‌ ಪಾಟೀಲ್‌ ಬೆಂಬಲಿಗರು ಬಿಜೆಪಿ ಅಭಿಮಾನಿಗಳು, ಸುಬಾಸ ಗುತ್ತೇದಾರ್‌ ಬೆಂಬಲಿಗರಿಗೆ ಧಮ್ಕಿ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆದು ಬಿಜೆಪಿ ಮುಖಂಡ, ಶಾಸಕ ಸುಭಾಸ ಗುತ್ತೇದಾರ್‌ ಪುತ್ರ ಹರ್ಷಾನಂದ ಗುತ್ತೇದಾರ್‌ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಬಿಆರ್‌ ಪಾಟೀಲ್‌ ಆಪ್ತ ಹಾಗೂ ಕಾಂಗ್ರೆಸ್‌ ಮುಖಂಡ ಗುರು ಪಾಟೀಲ್‌ ಮಾತಾಡಿದ್ದು ಎನ್ನಲಾದ ಆಡಿಯೋ ಮಾಧ್ಯಮದವರಿಗೆ ಬಿಡುಗಡೆ ಮಾಡಿದ್ದಾರೆ.

ಆಳಂದದಲ್ಲಿ ಈಚೆಗಷ್ಟೇ ಆಯೋಜಿಸಿದ್ದ ಬಿಜೆಪಿ ಶಾಸಕ ಸುಭಾಸ ಗುತ್ತೇದಾರ್‌ ಅವರ ಸನ್ಮಾನ ಸಮಾರಂಭಕ್ಕೆ ತೆರಳಿದ್ದವರೊಂದಿಗೆ ಕೋರಳ್ಳಿಯ ಗುರು ಪಾಟೀಲ್‌ ಧಮ್ಕಿ ಹಾಕಿ ಮಾತನಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ದಿನೇಶ್‌ ಪವಾರ್‌ಗೆ ಮಾತಾಡಿ ಧಮ್ಕಿ ಹಾಕಲಾಗಿದೆ. ಬಿಜೆಪಿ ಕಾರ್ಯಕ್ರಮಕ್ಕೆ ಯಾಕೆ ಹೋಗಿದ್ದಿ ಅಂತ ಗುರು ಪಾಟೀಲ್‌ ಕೋರಳ್ಳಿ ಆವಾಜ್‌ ಹಾಕಿದ್ದಾರೆ.

ಹಿಂದುಳಿದ ಕಲಬುರಗಿ ಪ್ರಗತಿಗೆ ಖರ್ಗೆ ಕಾಳಜಿ ಯಾಕೆ ತೋರಲಿಲ್ಲ: ತೇಜಸ್ವಿ ಸೂರ್ಯ ಪ್ರಶ್ನೆ

ಆಳಂದದಲ್ಲಿ ಬಿಜೆಪಿ ಗೆಲುವಿನ ವಾತಾವರಣವಿದೆ. ಇದರಿಂದ ಆತಂಕದಲ್ಲಿರುವ ಕಾಂಗ್ರೆಸ್‌ ನವರು ಇಂತಹ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಆಳಂದ ಒಪಲೀಸರಿಗೆ ದೂರು ನೀಡಲಾಗಿದೆ. ಇನ್ನೂ ಎಫ್‌ಐಆರ್‌ ಆಗಿಲ್ಲ, ಜಿಲ್ಲಾ ಎಸ್ಪಿಯವರಿಗೂ ಭೇಟಿ ಮಾಡಿ ಆಡಿಯೋ ಹಾಗೂ ದೂರು ಸಲ್ಲಿಸಿ ತಕ್ಷಣ ಗುರು ಪಾಟೀಲ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲೆಗೆ ಆಗ್ರಹಿಸುವುದಾಗಿ ಗುತ್ತೇದಾರ್‌ ಹೇಳಿದ್ದಾರೆ.

ಬಿಜೆಪಿ ಸಮಾರಂಭಕ್ಕೆ ಹೋಗಿದ್ಯಾಕೆಂದು ಕೋರಳ್ಳಿ ತಾಂಡಾದ ದಿನೇಶ ಹಾಗೂ ಗೆಳೆಯರಿಗೆ ಗುರು ಪಾಟೀಲ್‌ ಆವಾಜ್‌ ಹಾಕಿರೋದು ಸ್ಪಷ್ಟವಾಗಿದೆ. ಇದನ್ನು ನಾವು ಸಹಿಸೋದಿಲ್ಲ. ಕಾಂಗ್ರೆಸ್‌ ಕಾಲು ಕೆದರಿ ಜಗಳಕ್ಕೆ ಮುಂದಾದರೆ ಅದೇ ಭಾಷೆಯಲ್ಲಿ ನಾವೂ ಉತ್ತರ ನೀಡೋದು ಅನಿವಾರ್ಯವಾಗಲಿದೆ. ಇಂತಹ ಪರಿಸ್ಥಿತಿಗೆ ಯಾರೂ ಕಾರಣರಾಗಬಾರದು ಎಂದು ಹರ್ಷಾನಂದ ಹೇಳಿದರು.

ನೀತಿ, ತತ್ವ ಸಿದ್ದಾಂತ ಏಹಳುವ ಬಿಆರ್‌ ಪಾಟೀಲರು ಮಾತೆತ್ತಿದರೆ ಬಿಜೆಪಿ, ಗುತ್ತೇದಾರ್‌ ಗುಂಡಾಗಿರಿ ಬಗ್ಗೆಯೇ ದೂರುತ್ತಿರುತ್ತಾರೆ. ಈಗ ಏನು ಹೇಳುತ್ತಾರೆ. ಅವರ ಬೆಂಬಲಿಗರೇ ಈ ರೀತಿ ಧಮ್ಕಿ ರಾಜಕೀಯದಲ್ಲಿ ತೊಡಗಿದರೆ ಹೇಗೆ? ಮೊದಲು ತಮ್ಮಲ್ಲಿನ ದೋಷ ಸರಿಪಡಿಸಿಕೊಂಡು ಗುತ್ತೇದಾರ್‌, ಬಿಜೆಪಿಯತ್ತ ಬೊಟ್ಟು ಮಾಡಲಿ ಎಂದು ಹರ್ಷಾನಂದ ಹೇಳಿದರು.

ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್‌

ಪ್ರತ್ಯೇಕ ಬೂತ್‌ ಸ್ಥಾಪಿಸದಿದ್ರೆ ಮತದಾನ ಬಹಿಷ್ಕಾರ- ಕೋರಳ್ಳಿ ತಾಂಡಾ ನಿವಾಸಿಗಳು

ಆಳಂದದ ಕೋರಳ್ಳಿ ತಾಂಡಾದಲ್ಲಿ 560 ಮತದಾರರಿದ್ದಾರೆ. ನಾವೆಲ್ಲರೂ ಹೋಗಿ ಕೋರಳ್ಳಿ ಊರಲ್ಲಿನ ಮತಗಟ್ಟೆಯಲ್ಲೇ ಮತ ಹಾಕಬೇಕು. ಆದರೆ ಹೀಗೆ ಮತ ಹಾಕುವಾಗ ನಮ್ಮ ಮೇಲೆ ಮೂದಲಿಕೆ, ಇತ್ಯಾದಿ ತಂತ್ರಗಳನ್ನು ಬಳಸುತ್ತಾರೆ. ಮುಕ್ತವಾಗಿ ಮತ ಹಾಕುವ ವಾತಾವರಣ ಅಲ್ಲಿರೋದಿಲ್ಲ. ಅದಕ್ಕೆ ಈ ಬಾರಿ ಕೋರಳ್ಳಿ ತಾಂಡಾದಲ್ಲೇ ಪ್ರತ್ಯೇಕ ಮತಗಟ್ಟೆಸ್ಥಾಪಿಸಬೇಕು. ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸದೆ ಹೋದಲ್ಲಿ ಮತದಾನವನ್ನೇ ಬಹಿಷ್ಕಾರ ಮಾಡೋದಾಗಿ ಕೋರಳ್ಳಿ ತಾಂಡಾದ ನಾಯಕ ಹಾಗೂ ಅಲ್ಲಿನ ನಿವಾಸಿಗಳು ಹೇಳಿದ್ದಾರೆ.

ಕೋರಳ್ಳಿ ತಾಂಡಾದಲ್ಲಿ ಅನೇಕ ಸಮಸ್ಯೆಗಳಿವೆ. ಇವನ್ನೆಲ್ಲ ಪರಿಹರಿಸಿಕೊಳ್ಳಲು ನಾವು ನಮ್ಮ ಪಾಡಿಗೆ ನಾವು ಓಡಾಡುತ್ತಿದ್ದರೆ ನೀವು ಅಲ್ಯಾಕೆ ಹೋದಿರಿ? ಇಲ್ಲೇಕೆ ಬಂದೀರಿ ಎಂದು ಪ್ರಸ್ನಿಸುತ್ತಾರೆ. ಇದರಿಂದ ನಮ್ಮ ಸ್ವಾತಂತ್ರ್ಯ ಹರಣವಾಗಿದೆ. ಗೂಂಡಾಗಿರಿ ಮಾಡುವ ಮೂಲಕ ನಮ್ಮನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಮತಗಟ್ಟೆತಾಂಡಾದಲ್ಲೇ ಇರುವಂತಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios