ಬಿಜೆಪಿ ಸಭೆಯಲ್ಲಿ ಗಲಾಟೆ ತಲೆ ತಗ್ಗಿಸುವ ವಿಚಾರ: ಬಿಜೆಪಿ ಮುಖಂಡ ಅಸಮಾಧಾನ
ಕಳೆದ ಸೋಮವಾರ ನಡೆದ ಬಿಜೆಪಿ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಗಲಾಟೆ ನಡೆದಿದ್ದು, ಇದು ಬಾಗಲಕೋಟೆ ಜನತೆ ತಲೆತಗ್ಗಿಸುವಂತಹ ವಿಚಾರ. ಇದೊಂದು ಕಪ್ಪುಚುಕ್ಕೆ ಯಾಗಿದೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ಬಾಗಲಕೋಟೆ (ಜೂ.29) : ಕಳೆದ ಸೋಮವಾರ ನಡೆದ ಬಿಜೆಪಿ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಗಲಾಟೆ ನಡೆದಿದ್ದು, ಇದು ಬಾಗಲಕೋಟೆ ಜನತೆ ತಲೆತಗ್ಗಿಸುವಂತಹ ವಿಚಾರ. ಇದೊಂದು ಕಪ್ಪುಚುಕ್ಕೆ ಯಾಗಿದೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ 4 ಗಂಟೆæಗಳ ಕಾಲ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದರು ಎಂದ ಅವರು, ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಬಿಜೆಪಿ ಅಭ್ಯರ್ಥಿಗಳು ಸೋತಿಲ್ಲ. ಪಕ್ಷದಲ್ಲಿ ಆಂತರಿಕ ಕಚ್ಚಾಟದಿಂದ ಸೋತಿದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರÜದಲ್ಲಿ ಭ್ರಷ್ಟಾಚಾರ, ಬಾಗಲಕೋಟೆ ನಗರಕ್ಕೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಿಂದೇಟು ಸೇರಿದಂತೆ ಹಲವು ಕಾರಣಗಳಿಂದ ಜನರು ಉತ್ತರ ಕೊಟ್ಟರು. ಈಗ ಸೋಲನ್ನು ಅನುಭವಿಸಿದ್ದರೂ ಅದನ್ನು ಜೀರ್ಣಿಸಿಕೊಳ್ಳದೇ ತಮ್ಮದೇ ಹಾದಿಯಲ್ಲಿ ಹೊರಟಿದ್ದಾರೆಂದರು.
ಸಿಎಂ ಸಿದ್ದರಾಮಯ್ಯಗೆ ಅವರ ಕುರ್ಚಿ ಗ್ಯಾರಂಟಿ ಇಲ್ಲ: ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯ
ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. 10 ಸಾವಿರಕ್ಕಿಂತ ಹೆಚ್ಚು ಮತಗಳು ಪಡೆದುಕೊಂಡೆ. ಆದರೆ ಚುನಾವಣೆ ತಯಾರಿಗೆ ಸಮಯಾವಕಾಶ ಕಡಿಮೆ ಇತ್ತು. ಮತಕ್ಷೇತ್ರದಲ್ಲಿ ಎಲ್ಲ ಮತಗಟ್ಟೆಗÜಳಿಂದ ನನಗೆ ವೋಟು ಬಂದಿದೆ. ಮತದಾನ ಮುನ್ನ ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆ, ಜಿ.ಪಂ, ತಾ.ಪಂ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ವಾಭಿಮಾನಿ ಕಾರ್ಯಕರ್ತ ರೊಂದಿಗೆ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅಕ್ಕಿ ಕೊಡಿಸಲಿ:
ರಾಜ್ಯದಲ್ಲಿ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆದಿದ್ದು ಅದನ್ನು ಬಿಟ್ಟು ಅಕ್ಕಿಯನ್ನು ಕೊಡಿಸುವಲ್ಲಿ ನಾಯಕರು ಮುಂದಾಗಬೇಕು. ಬಿಜೆಪಿ ಪಕ್ಷವು ಸೋತ ನಂತರ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಬಾಗಲಕೋಟೆ ಸೇರಿದಂತೆ ಎಲ್ಲ ಕಡೆಗೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರ ಹಿತ ಬಲಿ ಕೊಟ್ಟಿದ್ದಾರೆ. ಆಂತರಿಕ ಕಚ್ಚಾಟದಿಂದ ಸೋಲಿನ್ನು ಅನುಭವಿಸಿದ್ದಾರೆ. ತಮ್ಮ ಸ್ವಹಿತಾಸಕ್ತಿಗಾಗಿ ಬಡಿ ದಾಡುತ್ತಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ವಿರುಪಾಕ್ಷ ಅಮೃತಕರ, ಗುರು ಅನಗವಾಡಿ ಇದ್ದರು.
ಈಗ ಹಿಂದುತ್ವ ಬಗ್ಗೆ ಮಾತಾಡುತ್ತಿರುವ ಮಾಜಿ ಶಾಸಕರು
ತಾವು ಅಧಿಕಾರದಲ್ಲಿ ಇದ್ದಾಗ ಹಿಂದುತ್ವದ ಪರ ಮಾತನಾಡದೇ ಈಗ ಅಧಿಕಾರ ಹೋದ ನಂತರ ಹಿಂದೂ ಪರ ಮಾತನಾಡುತ್ತಿರುವ ಮಾಜಿ ಶಾಸಕರ ವಿರುದ್ದ ಹಿಂದೂ ಮುಖಂಡ ಅಶೋಕ ಮುತ್ತಿನಮಠ ಪರೋಕ್ಷವಾಗಿ ಟೀಕೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮತಕ್ಷೇತ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಅವರೇ ಹಿಂದೂಗಳ ಬಗ್ಗೆ ಮಾತನಾಡದೇ ಜಾತಿ ನಿಂದನೆ, ಗಡಿಪಾರು ಸೇರಿದಂತೆ 24 ದೇವಾಲಯಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಮುಚಖಂಡಿ ಕ್ರಾಸ್ ಬಳಿ ಇರುವ ಹನಮಪ್ಪ ದೇವಸ್ಥಾನದ ಕಟ್ಟಡವನ್ನು ಸ್ಥಗಿತಗೊಳಿಸಿದ್ದಾರೆ ಎಂದರು.
ವಿಜಯಪುರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್ ಬೆಂಬಲಿಗರ ಗಲಾಟೆ; ಸಭೆಯಿಂದ ಹೊರನಡೆದ ನಿರಾಣಿ!
ಇತ್ತೀಚೆಗೆ ನವನಗರಲ್ಲಿ 46 ಗ್ಯಾಂಗ್ ಬಗ್ಗೆ ಮಾತನಾಡುತ್ತಿರುವ ಮಾಜಿ ಶಾಸಕರು, ಈಗ ಇವರಿಗೆ ಹಿಂದುತ್ವದ ಬಗ್ಗೆ ಕಾಳಜಿ ಬಂತಾ ಎಂದು ಮುತ್ತಿನಮಠ ಪ್ರಶ್ನಿಸಿದರು. ನವನಗರದಲ್ಲಿ ನಡೆದ ಘಟನಾ ಸ್ಥಳಕ್ಕೆ ಮೊದಲು ನಾವೇ ಹೋಗಿ ವಾತಾವರಣ ತಿಳಿಗೊಳಿಸಿದ್ದೇವೆ. ಅಲ್ಲದೇ ಗಾಯಾಳು ಮನೆಗೆ ತೆರಳಿ ಭೇಟಿ ಮಾಡಿ ಬಂದಿದ್ದೇವೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲೇಬೇಕು ಎಂದು ಪೊಲೀಸ ಅಧಿಕಾರಿಗಳಿಗೆ ಒತ್ತಾಯ ಕೂಡ ಮಾಡಿದ್ದೇವೆ ಎಂದು ಹೇಳಿದರು.