ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್
ದೇಶದ ಉಳಿವಿಗಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಬಿಜೆಪಿಯೇ 10 ವರ್ಷಗಳಿಂದ ಅಧಿಕಾರದಲ್ಲಿದೆ. ಅಂದರೆ ಬಿಜೆಪಿ ಅಧಿಕಾರದಲ್ಲಿದ್ದರೆ ದೇಶ ಹಾಳಾಗುತ್ತದೆ ಎಂದರ್ಥವಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ (ಸೆ.10): ದೇಶದ ಉಳಿವಿಗಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಬಿಜೆಪಿಯೇ 10 ವರ್ಷಗಳಿಂದ ಅಧಿಕಾರದಲ್ಲಿದೆ. ಅಂದರೆ ಬಿಜೆಪಿ ಅಧಿಕಾರದಲ್ಲಿದ್ದರೆ ದೇಶ ಹಾಳಾಗುತ್ತದೆ ಎಂದರ್ಥವಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಅನುಕೂಲಕ್ಕೆ ತಕ್ಕಂತೆ ಒಂದಾಗುತ್ತಿವೆ. ಇದರಿಂದ ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಎಂಬುದು ಈ ಮೂಲಕ ಸಾಬೀತಪಡಿಸಿದೆ. ಆದರೆ, ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಎಲ್ಲರ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಒಂದು ದೇಶ ಒಂದು ಚುನಾವಣೆ, ಭಾರತ-ಇಂಡಿಯಾ ಬಗ್ಗೆ ಮಾತನಾಡಲಾರಂಭಿಸಿದೆ. ಮೇಕ್ ಇನ್ ಇಂಡಿಯಾ, ಶೈನಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ ಹೇಳಿದವರು ಬಿಜೆಪಿ ಅವರು. ಅದರಂತೆ ಮಾಧ್ಯಮಗಳು ಸಹ ಭಾರತ ಸರಕಾರ ಎಂದು ಪ್ರಚಾರ ಮಾಡುವ ಕೆಲಸ ಮಾಡಿಲ್ಲ. ಬದಲಾಗಿ ಮೋದಿ ಸರಕಾರ ಎಂದು ಹೇಳುತ್ತಲೇ ಬಂದಿವೆ. ಆ ಸಂದರ್ಭದಲ್ಲಿಯೇ ಮೋದಿ ಸರಕಾರ ಅಂತಾ ಹೇಳಬೇಡಿ, ಭಾರತ ಸರಕಾರ ಎಂದು ಹೇಳಬಹುದಿತ್ತಲ್ಲಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ? ಇದರಿಂದ ಬಿಜೆಪಿ ಹಾಗೂ ಮೋದಿಗೆ ಲಾಭ ಇದೆಯೇ ಹೊರತು, ದೇಶಕ್ಕೆ ಇಲ್ಲ. ಇನ್ನು ನೋಟು ಅಮಾನ್ಯೀಕರಣದಿಂದ ಆಗಿರುವ ಬದಲಾವಣೆ ಏನು? ಕಳೆದ ಮೂರ್ನಾಲ್ಕು ವರ್ಷಗಳಿಂದ ₹2 ಸಾವಿರ ಮುಖಬೆಲೆ ನೋಟುಗಳು ಕಾಣುತ್ತಿಲ್ಲ. ಚಲಾವಣೆಗೆ ತಂದು ಮತ್ತೇಕೆ ಹಿಂಪಡೆಯಬೇಕು? ಎಂದು ಕಿಡಿಕಾರಿದರು. ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಅಸಮಾಧಾನದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹರಿಪ್ರಸಾದ ಅವರು ಪಕ್ಷದ ಮುಖಂಡರು. ಅವರು ನೀಡಿರುವ ಹೇಳಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಕಲ್ಗುಡಿ ಬ್ರಾಂಡ್ 'ಗನ್' ಕೊಡಗಿನ ಮಾರುಕಟ್ಟೆಗೆ ಎಂಟ್ರಿ: ಈ ಗನ್‌ನ ಸ್ಪೆಷಾಲಿಟಿ ಏನು
ಅವರಲ್ಲಿ ಅಸಮಾಧಾನ ಇರುವುದು ನನಗೆ ಕಂಡು ಬಂದಿಲ್ಲ ಎಂದಷ್ಟೇ ಹೇಳಿದರು. ಸನಾತನ ಧರ್ಮದ ವಿಚಾರದ ಬಗ್ಗೆ ಬಿಜೆಪಿ ಕೇವಲ ಮಾಧ್ಯಮಗಳ ಎದುರು ಭಾಷ ಮಾಡುತ್ತಿದೆ. ಆದರೆ, ಬೀದಿಗೀಳಿದು ಹೋರಾಟ ಮಾತ್ರ ಮಾಡಿಲ್ಲ. ಈಗಾಗಲೇ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕ ಕಾಂಗ್ರೆಸ್‌ನ ನಾಯಕರು ಸನಾತನ ಧರ್ಮ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬೇರೆ ರಾಜ್ಯದವರ ಹೇಳಿಕೆಗೆ ನಾವು ಹೇಳಿಕೆ ನೀಡುವುದು ಸರಿಯಲ್ಲ. ಆದರೆ, ಕಾಂಗ್ರೆಸ್ ಪಕ್ಷ ಸೆಕ್ಯುಲರ್ ಪಾರ್ಟಿಯಾಗಿದ್ದು, ನಮ್ಮ ನಿಲುವು ಇದರಲ್ಲಿ ಸ್ಪಷ್ಟ ಇದೆ ಎಂದರು.