ಲೋಕಸಭಾ ಚುನಾವಣೆ: ಗೆದ್ದರೂ ಬಿಜೆಪಿಗೆ ಸಂಭ್ರಮವಿಲ್ಲ, ಸೋತರೂ ಕಾಂಗ್ರೆಸಿಗಿಲ್ಲ ದುಃಖ!
2024 ಲೋಕಸಭಾ ಚುನಾವಣೆಯ ಫಲಿತಾಂಶ ಒಂದು ರೀತಿಯಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ. ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಸಂಭ್ರಮಿಸುವ ಪರಿಸ್ಥಿತಿಯಲ್ಲಿ ನಾಯಕರಿಲ್ಲ. ಮತ್ತೊಂದೆಡೆ ಸತತ 3ನೇ ಬಾರಿಇ ಸೋತರು ಕಾಂಗ್ರೆಸ್ ನೇತೃತ್ವದ ಇಂಡಿ ಕೂಟಕ್ಕೆ ಒಂದು ರೀತಿಯಲ್ಲಿ ಸಂಭ್ರಮದ ಸನ್ನಿವೇಶ.
ನವದೆಹಲಿ : 2024 ಲೋಕಸಭಾ ಚುನಾವಣೆಯ ಫಲಿತಾಂಶ ಒಂದು ರೀತಿಯಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ. ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಅದನ್ನು ಸಂಭ್ರಮಿಸುವ ಪರಿಸ್ಥಿತಿಯಲ್ಲಿ ಕೂಟದ ನಾಯಕರಿಲ್ಲ. ಮತ್ತೊಂದೆಡೆ ಸತತ 3ನೇ ಅವಧಿಗೆ ಸೋತು ಅಧಿಕಾರದಿಂದ ದೂರವಿದ್ದರೂ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟಕ್ಕೆ ಒಂದು ರೀತಿಯಲ್ಲಿ ಸಂಭ್ರಮದ ಸನ್ನಿವೇಶ.
ಎನ್‌ಡಿಎ ನಾಯಕರಿಗೆ 400ರ ಸ್ಥಾನ ಗೆಲ್ಲುವ ಗುರಿ ಇತ್ತು. ಅವರೀಗ ಅದಕ್ಕಿಂತ 100 ಸ್ಥಾನ ಹಿಂದಿದ್ದಾರೆ. ಇದು ಸಹಜವಾಗಿಯೇ ಪ್ರತಿಪಕ್ಷಗಳಿಗೆ ಎನ್‌ಡಿಎ ಸರ್ಕಾರದ ಮೇಲೆ ಮುಗಿಬೀಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಮತ್ತೊಂದೆಡೆ ಎನ್‌ಡಿಎ ನಾಯಕರ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿದೆ. ಹೀಗಾಗಿ ಅವರ ಪರಿಸ್ಥಿತಿ ಈಗ ಗೆದ್ದರೂ ಸಂಭ್ರಮಿಸಲಾಗದ ಮನಸ್ಥಿತಿ.
ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೆ ಮನಸೋಲದ ‘ಗೃಹಲಕ್ಷ್ಮೀಯರು’!
ಇನ್ನೊಂದೆಡೆ ಎಲ್ಲರ ನಿರೀಕ್ಷೆಗೆ ಮೀರಿ ಇಂಡಿಯಾ ಮೈತ್ರಿಕೂಟ 200ರ ಗಡಿದಾಟಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಇಂಡಿಕೂಟದ ಪಕ್ಷಗಳು ಗಮನಾರ್ಹ ಸಾಧನೆ ಮಾಡಿವೆ. ದೇಶದಲ್ಲಿ ಇನ್ನೇನು ಕಾಂಗ್ರೆಸ್ ಮತ್ತು ವಿಪಕ್ಷಗಳ ಪುನರುಜ್ಜೀವನ ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ಸಿಕ್ಕ ಈ ಅನಿರೀಕ್ಷಿತ ಜಯ ಸಹಜವಾಗಿಯೇ ಕೂಟದ ನಾಯಕರಲ್ಲಿ ಹೊಸ ಉತ್ಸಾಹ ತುಂಬಿದೆ. ಹೀಗಾಗಿ ಅಧಿಕಾರದಿಂದ ದೂರವಾಗಿದ್ದರೂ ಪಕ್ಷದ ನಾಯಕರಲ್ಲಿ ಹೊಸ ಉತ್ಸಾಹ, ಸಂಭ್ರಮ ಮಾಡುವಂತೆ ಮಾಡಿದೆ.