ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪರನ್ನು ಕಡೆಗಣಿಸಿರೋದು ಬಿಜೆಪಿಯ ಇಂದಿನ ಸ್ಥಿತಿಗೆ ಕಾರಣ: ದಿಂಗಾಲೇಶ್ವರ ಸ್ವಾಮೀಜಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗತ್ತೆ ಅಂತ ನಾನು ಈ ಹಿಂದೆ ಹೇಳಿದ್ದೆ. ಈಗ ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿ (ಮೇ.15): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗತ್ತೆ ಅಂತ ನಾನು ಈ ಹಿಂದೆ ಹೇಳಿದ್ದೆ. ಈಗ ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ. ಅಧಿಕಾರ ಬಂದ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೇ ತಿನ್ನಬಾರದ ಪೆಟ್ಟು ತಿಂತಾರೆ. ನಾನು ಅವತ್ತು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿರಲಿಲ್ಲ. ಬಿ.ಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕು ಎಂದಿದ್ದರು. ಯಾವದೋ ಕೆಟ್ಟ ಉದ್ದೇಶ, ಅಥವಾ ಸ್ವಾರ್ಥಕ್ಕೆ ತಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಬದಲಾಯಿಸಿದ್ದೇ ಈ ಪರಿಸ್ಥಿತಿಗೆ ಕಾರಣ. ನಾನು ಹಿಂದೆ ಪರ್ಸೆಂಟೇಜ್ ಮಾತನಾಸಿದಾದ, ನನ್ ಬಗ್ಗೆ ದುರಹಂಕಾರಿಯಾಗಿ ಮಾತಾಡಿದ್ರು.. ಗುಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ರು. ಅದರ ಪರಿಣಾಮವೇ ಇದಾಗತ್ತೆ ಎಂದರು. ಸ್ವಾಮೀಜಿ ಗಂಭಿರ ಹೇಳಿಕೆ ಮಾಡಿದಾಗ, ಚಿಂತನ ಮಂಥನ ಮಾಡಬೇಕಿತ್ತು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನ ಸರಿಯಾಗಿ ನಡೆಸುಕೊಳ್ಳಲಿಲ್ಲ. ಖಾವಿ ದಾರಿಗಳು ಪಾಠ ಮಾಡಿದ್ರು, ಅವರು ಪಾಠ ಕಲಿತಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿಯ ಇಂದಿನ ಸ್ಥಿತಿಗೆ ಕಾರಣ ಎಂದು ಹೇಳಿದರು.
Davanagere: ಆಸ್ತಿ ವಿಚಾರಕ್ಕೆ ಆಸ್ಪತ್ರೆಯಲ್ಲೇ ಅಣ್ಣನಿಗೆ ಚಾಕು ಹಾಕಿ ಕೊಲೆ ಮಾಡಿದ ತಮ್ಮ
ಯಡಿಯೂರಪ್ಪ, ಸವದಿ, ಶೆಟ್ಟರ್, ಈಶ್ವರಪ್ಪ ಕಡೆಗಣಿಸಿರೋದೆ ಇದಕ್ಕೆಲ್ಲ ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತು ಕೇಳಬೇಕು ಅಂದ್ರೆ ಏನು..? ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ದ ಸ್ವಾಮೀಜಿ ಗರಂ. ಯಡಿಯೂರಪ್ಪ ಸಿಎಮ್ ಇದ್ದಾಗ ಹೀಗೆ ಮಾಡಿದ್ರು, ಯಡಿಯೂರಪ್ಪ ಕೆಳಗಿಳಿಸೋವಾಗ ಹೇಗೆ ನಡೆಕೊಂಡರು ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಚುನಾವಣೆ ಒಂದೇ ಮಾಡಿದ್ರು. ಜಗದೀಶ್ ಶೆಟ್ಟರ್, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಕಾಂಗ್ರೆಸ್‌ಗೆ ಸಲಹೆ ನೀಡಿದರು. ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡ್ತೀನಿ ಎಂದರು.
ರಾಜ್ಯದಲ್ಲಿ ಏನಾಗಿದೆ,ಅನ್ನೋ ದಾಖಲೆ ಇವೆ. ಬ್ರಾಹ್ಮಣರ ಬಗ್ಗೆ ಮಾತಾಡೋಕೆ ನನಗೆ ಭಯ ಇಲ್ಲ.ನನಗೆ ಯಾರ ಅಂಕುಶವೂ ಇಲ್ಲ. ಬಹಳ ಮಾತಾಡಿ ಉಪಯೋಗ ಇಲ್ಲ. ರಾಜ್ಯದ ನಾಯಕರನ್ನು ಬಹಳ ಕೆಟ್ಟ ರೀತಿಯಲ್ಲಿ ನೋಡಿಕೊಂಡರು. ಅವರದು ಅವರೇ ಉಂಡರು. ದಕ್ಷಿಣ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ. ಕರ್ನಾಟಕದ ನಾಯಕರನ್ನು ಬಿಟ್ಟು ಏನಾದರೂ ಮಾಡ್ತೀನಿ ಅಂದುಕೊಂಡರು. ರಾಜ್ಯದ ಮತದಾರರು ಬುದ್ದಿಗೇಡಿಗಳಲ್ಲ, ರಾಷ್ಟ್ರ ನಾಯಕರಿಗೆ ಸರಿಯಾದ ಪಾಠ ಕಲಿಸಿದ್ರು. ರಾಜ್ಯವನ್ನು ಸರಿಯಾದ ರೀತಿ ನಡೆಸೋ ವ್ಯಕ್ತಿ ಸಿಎಮ್ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತರುವೆ: ಪ್ರವೀಣ್ ಸೂದ್
ಸಮರ್ಥ, ಯೋಗ್ಯ ವ್ಯಕ್ತಿ ಸಿಎಮ್ ಆಗಬೇಕು, ಕರ್ನಾಟಕ ಒಂದು ದೃಷ್ಟಿಕೋನದಲ್ಲಿ ನೋಡುವವರು ಸಿಎಮ್ ಆಗಬೇಕು. ಲಿಂಗಾಯತ ನಾಯಕನಿಗೆ ಉಪಮುಖ್ಯಮಂತ್ರಿ ನೀಡಬೇಕು. ಲಿಂಗಾಯತದ ಉತ್ತರ ಕರ್ನಾಟಕದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದ ಸ್ವಾಮೀಜಿ. ಇದು ನಮ್ಮ ಅಭಿಪ್ರಾಯ ಎಂದ ದಿಂಗಾಲೇಶ್ವರ ಸ್ವಾಮೀಜಿ. ಲಿಂಗಾಯತ ನಾಯಕರು ಯಾರು ಎಂದು ಹೇಳದ ಸ್ವಾಮೀಜಿ ಸಾಕಷ್ಟು ಬುದ್ದಿಜೀವಿಗಳು ಇದ್ದಾರೆ, ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿದರು.