ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತರುವೆ: ಪ್ರವೀಣ್ ಸೂದ್
ನನ್ನ ಮೇಲೆ ವಿಶ್ವಾಸವಿಟ್ಟು ಸಿಬಿಐ ನಿರ್ದೇಶಕದಂತಹ ಬಹಳ ಜವಾಬ್ದಾರಿಯ ಉನ್ನತ ಹುದ್ದೆ ನೀಡಿರುವ ಕೇಂದ್ರ ಸರ್ಕಾರ ಹಾಗೂ ಕರ್ನಾಟಕಕ್ಕೆ ಗೌರವ ತರುವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಬೆಂಗಳೂರು (ಮೇ.15): ನನ್ನ ಮೇಲೆ ವಿಶ್ವಾಸವಿಟ್ಟು ಸಿಬಿಐ ನಿರ್ದೇಶಕದಂತಹ ಬಹಳ ಜವಾಬ್ದಾರಿಯ ಉನ್ನತ ಹುದ್ದೆ ನೀಡಿರುವ ಕೇಂದ್ರ ಸರ್ಕಾರ ಹಾಗೂ ಕರ್ನಾಟಕಕ್ಕೆ ಗೌರವ ತರುವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು. ಈ ಸಂಬಂಧ ಭಾನುವಾರ ಸಂಜೆ ‘ಕನ್ನಡಪ್ರಭ’ ಜತೆ ಮಾತನಾಡಿದ ಪ್ರವೀಣ್ ಸೂದ್ ಅವರು, ಸಿಬಿಐ ನಿರ್ದೇಶಕನಾಗುವ ನಿರೀಕ್ಷೆ ಇರಲಿಲ್ಲ. ನನ್ನ ಆಯ್ಕೆ ಅಚ್ಚರಿ ನನಗೆ ಅಚ್ಚರಿಯಾಗಿದೆ ಎಂದು ಹರ್ಷಿಸಿದರು.
‘ಮೇ.25 ರಂದು ದೆಹಲಿಗೆ ತೆರಳಿ ಸಿಬಿಐ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಲಿದ್ದೇನೆ. ನನ್ನ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಮಹತ್ವದ ಹೊಣೆಗಾರಿಕೆ ನೀಡಿದೆ. ಆ ನಂಬಿಕೆಗೆ ಚ್ಯುತಿ ಬಾರದಂತೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ನಾನು ಪೊಲೀಸ್ ಅಧಿಕಾರಿಯಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯಕ್ಕೂ ಕೀರ್ತಿ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಬಿಐ ಹಾಗೂ ಪೊಲೀಸ್ ಕಾರ್ಯನಿರ್ವಹಣೆ ವಿಭಿನ್ನವಾಗಿದೆ. ಸದ್ಯ ಸಿಬಿಐ ನಿರ್ದೇಶಕ ಕೆಲಸದ ಬಗ್ಗೆ ಯಾವುದೇ ಪೂರ್ವಯೋಜನೆಗಳನ್ನು ನಾನು ಹಾಕಿಕೊಂಡಿಲ್ಲ. ನನಗೆ ನೀಡಿರುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ಕೆಲಸ ಮಾಡಿ ಘಟನೆ ತರುತ್ತೇನೆ ಎಂದು ಹೇಳಿದರು.
ಸಿದ್ದುಗೆ ಸಹಕಾರ ಕೊಟ್ಟಿದ್ದೆ, ಅವರೂ ಕೊಡುವ ವಿಶ್ವಾಸವಿದೆ: ಡಿ.ಕೆ.ಶಿವಕುಮಾರ್
ಮೂರೂವರೆ ದಶಕ ರಾಜ್ಯದಲ್ಲಿ ಸೂದ್ ಸೇವೆ: ಕರುನಾಡಿನಲ್ಲಿ ಮೂರೂವರೆ ದಶಕಗಳ ಕಾಲ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಪ್ರವೀಣ್ ಸೂದ್ ಅವರಿಗೆ ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ (ಸಿಬಿಐ)ನ ಮುಖ್ಯಸ್ಥ ಹುದ್ದೆ ಒಲಿದು ಬಂದಿದೆ. ಮೈಸೂರು ಜಿಲ್ಲೆ ನಂಜನಗೂಡು ಉಪ ವಿಭಾಗದ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ್ದ ಅವರು, ವಿವಿಧ ಜಿಲ್ಲೆಗಳಲ್ಲಿ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಮುಂಬಡ್ತಿ ಪಡೆದು ಬೆಂಗಳೂರು ನಗರ (ಸಂಚಾರ) ಹೆಚ್ಚುವರಿ ಆಯುಕ್ತ, ಬೆಂಗಳೂರು ಹಾಗೂ ಮೈಸೂರು ನಗರ ಆಯುಕ್ತ, ಆಡಳಿತ, ಕೆಎಸ್‌ಆರ್‌ಪಿ, ಎಸ್‌ಸಿಆರ್‌ಪಿ ಎಡಿಜಿಪಿ ಹಾಗೂ ಸಿಐಡಿ ಡಿಜಿಪಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಮೂರೂವರೆ ದಶಕಗಳ ಸೇವಾ ಅನುಭವ ಹೊಂದಿರುವ ಪ್ರವೀಣ್ ಸೂದ್ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ತನಿಖಾ ಸಂಸ್ಥೆಯ ಕಾರ್ಯಭಾರದ ಮಹತ್ವದ ಹೊಣೆಗಾರಿಕೆ ಹೆಗಲಿಗೆ ಬಿದ್ದಿದೆ.
ಸಚಿವ ಸ್ಥಾನಕ್ಕೂ ಇನ್ನಿಲ್ಲದಂತೆ ಲಾಬಿ: 50ಕ್ಕೂ ಹೆಚ್ಚು ಶಾಸಕರಿಂದ ಸಚಿವ ಸ್ಥಾನದ ಮೇಲೆ ಕಣ್ಣು
ಕ್ರಿಕೆಟಿಗ ಮಾಯಂಕ್ ಮಾವ: ಬೆಂಗಳೂರಿನಲ್ಲಿ ಪ್ರವೀಣ್ ಸೂದ್ ಅವರು ಪತ್ನಿ ವಿನೀತಾ ಹಾಗೂ ಮಕ್ಕಳಾದ ಆಶಿತಾ ಮತ್ತು ಅನುಷ್ಕಾ ಜತೆ ನೆಲೆಸಿದ್ದಾರೆ. ಖ್ಯಾತ ಕ್ರಿಕೆಟಿಗ ಮಯಾಂಕ್ ಅರ್ಗವಾಲ್ ಅವರು ಸೂದ್ ಆಳಿಯ ಆಗಿದ್ದಾರೆ.