Karnataka Politics: ಹೆದರಿಸಿದ್ರೆ ಸುಮ್ಮನಿರಲ್ಲ, ತೊಡೆತಟ್ಟಲು ನಂಗೂ ಬರುತ್ತೆ: ಸಿದ್ದರಾಮಯ್ಯ
ಸಾಮಾಜಿಕ ಪರಿಕಲ್ಪನೆಯಲ್ಲಿರುವ ನಾನು ಈ ಕುರಿತ ಯಾವ ಟೀಕೆಗಳಿಗೂ ಜಗ್ಗುವವನಲ್ಲ. ನನಗೆ ಸರಿ ಅನಿಸಿದ್ದನ್ನು ಮಾಡೇ ತೀರುತ್ತೇನೆ. ಈ ಕುರಿತು ನನಗೆ ಹೆದರಿಸಲು ಬಂದರೆ ಸುಮ್ಮನಿರುವ ಗಿರಾಕಿ ಅಲ್ಲ. ನಿಮಗಿಂತಲೂ ಬಲವಾಗಿ ತೊಡೆ ತಟ್ಟಲು ನನಗೂ ಬರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೂವಿನಹಡಗಲಿ (ಫೆ.6) : ಸಾಮಾಜಿಕ ಪರಿಕಲ್ಪನೆಯಲ್ಲಿರುವ ನಾನು ಈ ಕುರಿತ ಯಾವ ಟೀಕೆಗಳಿಗೂ ಜಗ್ಗುವವನಲ್ಲ. ನನಗೆ ಸರಿ ಅನಿಸಿದ್ದನ್ನು ಮಾಡೇ ತೀರುತ್ತೇನೆ. ಈ ಕುರಿತು ನನಗೆ ಹೆದರಿಸಲು ಬಂದರೆ ಸುಮ್ಮನಿರುವ ಗಿರಾಕಿ ಅಲ್ಲ. ನಿಮಗಿಂತಲೂ ಬಲವಾಗಿ ತೊಡೆ ತಟ್ಟಲು ನನಗೂ ಬರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಮೈಲಾರ ಗ್ರಾಮದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಪೀಠದಿಂದ ನಿರ್ಮಾಣವಾಗಿರುವ ಗಂಗಮಾಳಮ್ಮ ದೇವಿ ಯಾತ್ರಾ ನಿವಾಸವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, 13 ಚುನಾವಣೆ ಎದುರಿಸಿದ್ದು, 3 ಬಾರಿ ಸೋತಿದ್ದೇನೆ. ರಾಜ್ಯದಲ್ಲಿರುವ ಶೋಷಿತ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಬಗ್ಗೆ ಹೋರಾಡಲು ಯಾರಿಗೂ ಹೆದರಬೇಕಿಲ್ಲ. ಜೀವ ಇರುವವರೆಗೂ ಶೋಷಿತ ಸಮುದಾಯಗಳ ಜನರ ಧ್ವನಿಯಾಗಿ ಕೆಲಸ ಮಾಡುವೆ ಎಂದರು.
Assembly election: ನಾನು ಹಸಿದ ಹೆಬ್ಬುಲಿ: ಸಿದ್ದರಾಮಯ್ಯನನ್ನು ಸೋಲಿಸದೆ ಬಿಡಲ್ಲ: ವರ್ತೂರು ಪ್ರಕಾಶ್
ನಾವು ಅಧಿಕಾರಕ್ಕೆ ಬಂದರೆ ಮತ್ತೆ ರಾಜ್ಯದ ಬಡವರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುತ್ತೇವೆ. ರಾಜ್ಯದ ಸಂಪತ್ತು ಯಾರಪ್ಪನ ಸ್ವತ್ತೂ ಅಲ್ಲ. ನಿಮ್ಮ ಬೆವರಿನಿಂದ ಬಂದ ಹಣವನ್ನು ನಿಮಗೆ ಕೊಡಲು ಯಾರಪ್ಪಣೆಯೂ ಬೇಕಾಗಿಲ್ಲ. ಬೆವರು ಸುರಿಸದೇ ಇರುವ ವ್ಯಕ್ತಿಗಳು ಆ ಹಣ ತಿನ್ನಲು ನಾನು ಬಿಡಲ್ಲ. ಮತ್ತೊಮ್ಮೆ ರಾಜ್ಯದಲ್ಲಿ ನಮ್ಮ ಸರ್ಕಾರ ಬರಲಿ ಎಂದ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು.
ಕನಕ ಗುರುಪೀಠ ಸ್ಥಾಪನೆ ಮಾಡಲು ಸಾಕಷ್ಟುಹೋರಾಟ ಮಾಡಿದ್ದೇವೆ. ಈ ಪೀಠ ನಿರ್ಮಾಣವಾಗಿ 32 ವರ್ಷವಾಗಿದೆ. ಈಗ ಮಠದಿಂದ ಎಲ್ಲ ಕಡೆಗೂ ಶೈಕ್ಷಣಿಕ ಕ್ರಾಂತಿಯನ್ನು ಶ್ರೀಗಳು ಮಾಡುತ್ತಿದ್ದಾರೆ. ಈ ಹಿಂದೆ ಶೋಷಿತ ಸಮುದಾಯಗಳನ್ನು ಅಕ್ಷರ ಸಂಸ್ಕೃತಿಯಿಂದ ದೂರ ಉಳಿಸಿದ್ದ, ಮನುವಾದಿ ಹಾಗೂ ಪುರೋಹಿತ ಶಾಹಿಗಳ ಕುತಂತ್ರದಿಂದ ಅಕ್ಷರ ಜ್ಞಾನ ಇಲ್ಲದೇ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಅಸಮತೋಲ ಕಾಡುತ್ತಿದೆ ಎಂದರು.
ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಈ ಜಡತ್ವವನ್ನು ಹೋಗಲಾಡಿಸಬೇಕಿದೆ. ಆಗ ಶೋಷಿತ ಹಾಗೂ ತಳ ಸಮುದಾಯಗಳಿಗೆ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕವಾಗಿ ಸದೃಢವಾಗುವ ಜತೆಗೆ ಶೈಕ್ಷಣಿಕ ಕ್ರಾಂತಿ ಮಾಡಲು ಸಾಧ್ಯವಿದೆ ಎಂದರು.
Chikkamagaluru: 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆ
ಟಿಕೆಟ್ ಕೊಡಲು ಬಂದೇನಾ?
ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದಂತೆ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ರುದ್ರಪ್ಪ ಲಮಾಣಿಯವರಿಗೆ ಟಿಕೆಟ್ ನೀಡಬೇಕೆಂದು ಕೂಗಿದರು. ಸಿಟ್ಟಿಗೆದ್ದ ಸಿದ್ದರಾಮಯ್ಯ ಸುಮ್ಕಿರಯ್ಯ, ನಾನು ಇಲ್ಲಿಗೆ ಟಿಕೆಟ್ ಕೊಡಲು ಬಂದೇನಾ? ಎಂದು ಗದರಿಸಿದರು. ಮತ್ತೊಮ್ಮೆ ಹೌದೋ ಹುಲಿಯಾ ಸಿಎಂ ಎಂದು ನೆರೆದಿದ್ದ ಜನ ಕೂಗಿದಾಗ, ಮುಖ್ಯಮಂತ್ರಿ ಮಾಡೋದು ಇಲ್ಲಿ ಅಲ್ಲ, ಚುನಾವಣೆ ಬಂದಾಗ ಮಾಡಿ ಎಂದು ಹೇಳಿದರು.