ಮುಂದೆ ನನಗಿಂತ ನನಗಿಂತಲೂ ಚೆನ್ನಾಗಿರೋ ಎಂಎಲ್ ಎ ಬಂದ್ರೆ ಅವನು ಕೆಲಸ ಮಾಡ್ತಾನೆ : ಶಾಸಕ ರಾಮಣ್ಣ ಮಾತು

ತಮಗೆ ಘೇರಾವ್ ಹಾಕಿ ಕ್ಲಾಸ್ ತೆಗೆದುಕೊಂಡಿದ್ದ ಮಹಿಳೆಯರಿಗೆ ಸಾಮಾಧಾನ ಮಾಡೋದಕ್ಕೆ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ಹೇಳಿದ್ದ ಮಾತು ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ಮೂಡಿಸುವಂತೆ ಮಾಡಿದೆ. 

If the next MLA is good, he will work says mla ramanna lamani at gadag rav

ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್ ಗದಗ

ಗದಗ (ಜ.12) : ತಮಗೆ ಘೇರಾವ್ ಹಾಕಿ ಕ್ಲಾಸ್ ತೆಗೆದುಕೊಂಡಿದ್ದ ಮಹಿಳೆಯರಿಗೆ ಸಾಮಾಧಾನ ಮಾಡೋದಕ್ಕೆ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ಹೇಳಿದ್ದ ಮಾತು ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ಮೂಡಿಸುವಂತೆ ಮಾಡಿದೆ. 

ಹಾಲಿ‌ ಶಾಸಕರಿಗೆ ಟಿಕೆಟ್ ಕೈತಪ್ಪುತ್ತೆ ಅಂತಾ ಈಗಾಗ್ಲೆ ಕ್ಷೇತ್ರದಲ್ಲಿ ಪುಕಾರ್ ಎದ್ದಿದೆ. ಎಸ್ ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್(BJP Ticket) ಗಾಗಿ ಭರ್ಜರಿ ಪೈಪೋಟಿಯೂ ಇದೆ.. ಹೀಗಿದ್ರೂ ಶಾಸಕರು ಕ್ಷೇತ್ರದಲ್ಲಿ ಓಡಾಡ್ಕೊಂಡಿದಾರೆ.. ನಿನ್ನೆ ಲಕ್ಷ್ಮೇಶ್ವರ(Lakshmeshwar)ದ ಬೂತ್ ವಿಜಯ್ ಕಾರ್ಯಕ್ರಮಕ್ಕೆ ಶಾಸಕರ ಲಮಾಣಿ(MLA Ramappa Lamani) ಹೋಗಿದ್ರು.. ವಾರ್ಡ್ ನಂಬರ್ 2 ರ ಕರಿಗೋರಿ ಏರಿಯಾ ಎಂಟ್ರಿಯಾಗ್ತಿದ್ದಂತೆ ಶಾಸಕರಿಗೆ ಘೇರಾವ್ ಹಾಕಿದ್ದ ಮಹಿಳೆಯರು, ಯುವಕರು ಮೂಲ ಸೌಕರ್ಯ ಒದಗಿಸ್ಬೇಕು ಅಂತಾ ಒತ್ತಾಯಿಸಿದ್ರು. ಶಾಸಕ ಆದಾಗಿನಿಂದ ಬಡಾವಣೆಗೆ ಬಂದಿಲ್ಲ. ಸ್ಥಳಕ್ಕೆ ಬಂದು ಸಮಸ್ಯೆ ವೀಕ್ಷಣೆ ಮಾಡ್ಬೇಕು ದುಂಬಾಲು ಬಿದ್ರು. ಕೊಂಚ ಸಾವರಿಸಿಕೊಂಡು ಸ್ಥಳಕ್ಕೆ ಬಂದ ಶಾಸಕರು ಮಹಿಳೆಯರಿಗೆ ಸಾಮಾಧಾನ ಮಾಡಿದ್ರು.

ಕಾರ್ಯಕರ್ತರ ಕಾರು ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ ಪತ್ರ, ಇದ್ಯಾವ ರೀತಿ ದರ್ಪ?
  
ಹೊಸ ಚರ್ಚೆಗೆ ನಾಂದಿಯಾಗಲಿದೆ ಶಾಸಕ ರಾಮಪ್ಪ ಲಮಾಣಿ ಮಾತು.. 

ಶಿರಹಟ್ಟಿ ಮತಕ್ಷೇತ್ರ(Shirahatti Constituency)ದ ಬಿಜೆಪಿ ಹಾಲಿ ಎಂಎಲ್ ಎ ರಾಮಪ್ಪ ಲಮಾಣಿಯವರಿಗೆ ಟಿಕೆಟ್ ಕೈತಪ್ಪುತ್ತೆ ಅಂತಾ ಹೇಳಲಾಗ್ತಿದೆ. ಇದ್ರಿಂದಾಗಿ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಓಡಾಡ್ಕೊಂಡಿದಾರೆ.. ಲಕ್ಷ್ಮೇಶ್ವರ ಪಟ್ಟಣಕ್ಕೆ ಬೂತ್ ವಿಜಯ  ಅಭಿಯಾನಕ್ಕೆ ತೆರಳುದ್ದವೇಳೆ ನಡೆದ ಮಾತುಕಥೆ, ಟಿಕೆಟ್ ಆಕಾಂಕ್ಷಿಗಳಿಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ. ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಬೇಡಿಕೊಂಡ ಸ್ಥಳೀಯ ಮಹಿಳೆಯರಿಗೆ ಸಮಾಧಾನದ ಮಾತನಾಡಿದ ಶಾಸಕ ಲಮಾಣಿ, ಬಡಾವಣೆಗೆ ಮೂರು ರಸ್ತೆ, ಮೂರು ಗಟಾರು ಮಾಡಿಕೊಡುವ ಭರವಸೆ ನೀಡಿದ್ರು.. ಮುಖ್ಯರಸ್ತೆಯನ್ನೂ ದುರಸ್ತುಗೊಳಿಸಿ ಸಿಸಿ ರಸ್ತೆ ಮಾಡಿಸುವ ಭರವಸೆಯನ್ನೂ ನೀಡಿದ್ದಾರೆ.

ಮುಂದೆ ಬೇರೆ ನನಗಿಂತ ಚೆನ್ನಾಗಿರುವ ಶಾಸಕ ಬಂದರೆ ಅವರು ಕೆಲಸ ಮಾಡಿಕೊಡ್ತಾರೆ

ಸ್ಥಳಕ್ಕೆ ಬಂದ ಶಾಸಕರು, ಸ್ಥಳ ಪರಿಶೀಲನೆ ಮಾಡಿದ್ರು, ಸಿಸಿ ರಸ್ತೆ(CC road) ಕಾಮಗಾರಿಗೆ ಚಾಲನೆ ನೀಡೋದಾಗಿ ಭರವಸೆ ನೀಡಿದ್ರು.. ಬಡಾವಣೆಯ ಎಲ್ಲ ರಸ್ತೆಗಳ ಡಾಂಬರೀಕರಣ ಆಗ್ಬೇಕು ಅಂತಾ ಪಟ್ಟು ಹಿಡಿದಿದ್ದ ಸ್ಥಳೀಯರಿಗೆ ಕೆಲವೇ ತಿಂಗಳಲ್ಲಿ ಅವಧಿ ಮುಗಿಯುತ್ತೆ, ಅನುದಾನ ಬರೋದಿಲ್ಲ‌..ಮುಂದಿನ ಹಂತದಲ್ಲಿ ಕೆಲಸ ಮಾಡಿಕೊಡ್ತೇನೆ ಎಂದ ಶಾಸಕ ಲಮಾಣಿ ಸಮಾಧಾನ ಮಾಡಿದ್ರು.. ಅಲ್ದೆ, ಮುಂದಿನ ಅವಧಿಯಲ್ಲಿ ಮಾಡಿಕೊಡ್ತೇನೆ.. ಬೇರೆ ನನಗಿಂತ ಚೆನ್ನಾಗಿರುವ ಎಂಎಲ್ ಎ ಬಂದರೆ ಅವರು ಕೆಲಸ ಮಾಡಿಕೊಡ್ತಾರೆ ಅಂದ್ರು.. ಸದ್ಯ ಈ ಮಾತು ಕ್ಷೇತ್ರದಲ್ಲಿ ಭಾರಿ ಚರ್ಚೆಯಾಗಲಿದೆ.. ಸಮರಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿದಹಾಗೆ ಶಾಸಕರ ಪರಿಸ್ಥಿತಿಯಾಗಿದ್ಯಾ ಅನ್ನೋ ಮಾತುಗಳು ಕೇಳಿ ಬರಬಹುದು.. 

ಜನಸಂಕಲ್ಪ ಯಾತ್ರೆ(Jana sankalpa)ಯಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಉಮೇದಿನಲ್ಲಿದ್ದ ಶಾಸಕ ಲಮಾಣಿ..

ಕಳೆದ ವರ್ಷ ನವೆಂಬರ್ 8 ತಾರೀಕು ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಜನ ಸಂಕಲ್ಪಯಾತ್ರೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗುತ್ತೆ ಅಂತಾ ಶಾಸಕ ರಾಮಪ್ಪ ಲಮಾಣಿ, ಬೆಂಬಲಿಗರು ಅನ್ಕೊಂಡಿದ್ರು.. ಮುಖ್ಯಮಂತ್ರಿ ಬೊಮ್ಮಾಯಿ(CM Basavaraj Bommai),  ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ(BS Yadiyurappa) ಸೇರಿದಂತೆ  ಘಟಾನುಘಟಿ ನಾಯಕರಿದ್ದ ಕಾರ್ಯಕ್ರಮದಲ್ಲಿ ಅಂತಹ ಯಾವುದೇ ಸುಳಿವು ಸಿಗಲಿಲ್ಲ.. ಅದ್ರೂ ಉತ್ಸಾಹದಲ್ಲೇ ಇದ್ದ ಶಾಸಕರಿಗೆ ಈಗ ಟಿಕೆಟ್ ಕೈತಪ್ಪೊದು ಗ್ಯಾರಂಟಿ ಅನ್ಸಿದೆ ಅನ್ಸುತ್ತೆ.. ಹೀಗಾಗಿ ಮುಂದೆ ಬೇರೆ ಎಂಎಲ್ ಎ ಆಗ್ತಾನೆ ಅನ್ನೋ ಮಾತನ್ನ ಸ್ವತಃ ಶಾಸಕರೇ ಹೇಳಿಕೊಂಡಿದ್ದಾರೆ. 

ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಲಿದೆ ಉತ್ಸಾಹ..!

ಟಿಕೆಟ್ ಘೋಷಣೆ ಮುನ್ನವೇ ಶಾಸಕ ಲಮಾಣಿ ಸೋಲೊಪ್ಪಿಕೊಂಡಂತೆ ಕಂಡು ಬರ್ತಿದೆ.. ಬಹಿರಂಗವಾಗಿ ಶಾಸಕರು ಈ ಮಾತು ಹೇಳಿದ್ದು ಟಿಕೆಟ್ ಆಕಾಂಕ್ಷಿಗಳ ಆಸೆಗೆ ರೆಕ್ಕೆಪುಕ್ಕ ಬಂದಂತಾಗಿದೆ.. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಭರ್ಜರಿ ಪೈಪೋಟಿ ಶುರುವಾಗಿದೆ.

ಅಕ್ರಮ ಆಸ್ತಿ ವರ್ಗಾವಣೆ ಕೇಸ್, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಅಮಾನತು

ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ವದಂತಿ ಮಧ್ಯೆ ಶಾಸಕರ ಈ ಮಾತು ಟಿಕೆಟ್ ಆಕಾಂಕ್ಷಿಗಳಿಗೆ ಮತ್ತಷ್ಟು ಶಕ್ತಿ ಸಿಕ್ಕಹಾಗಾಗಿದೆ.. ಬಿಜೆಪಿಯಿಂದ ಭೀಮಸಿಂಗ ರಾಠೋಡ, ಡಾ. ಚಂದ್ರು ಲಮಾಣಿ, ಗುರುನಾಥ್ ದಾನಪ್ಪನವರ್.. ಉಷಾ ದಾಸರ್, ಡಾ. ಪ್ರಕಾಶ್ ಹೊಸಮನಿ ಸೇರಿದಂತೆ ಅನೇಕರು ಪೈಪೋಟಿ ನಡೆಸಿದ್ದಾರೆ.. ಅಂತಿಮವಾಗಿ ಯಾರಿಗೆ ಟಿಕೆಟ್ ಘೋಷಣೆಯಾಗುತ್ತೆ ಅನ್ನೋದು ಕಾಲ ನಿರ್ಣಯ ಮಾಡಲಿದೆ.

Latest Videos
Follow Us:
Download App:
  • android
  • ios