Asianet Suvarna News Asianet Suvarna News

Gadag: ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಯಡಿಯೂರಪ್ಪ ಅವರಿಗೆ ಕೊಪ್ಪಳ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಬೇಕಾ.. ಅವರೂ ಬರಬೇಕಾಗುತ್ತೆ, ನಾನು ಯಡಿಯೂರಪ್ಪ ಅವರ ಹಿರಿಯ ಮಗ ಅಂತಾ ಬೊಮ್ಮಾಯಿ ಹೇಳಿದ್ದಾರೆ. ತಂದೆಗೆ ಪದೇ ಪದೇ ಆಹ್ವಾನ ಮಾಡುವುದಕ್ಕೆ ಆಗುತ್ತಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ. 

mla basanagouda patil yatnal slams on bs yediyurappa at gadag gvd
Author
First Published Dec 18, 2022, 10:40 PM IST

ಗದಗ (ಡಿ.18): ಯಡಿಯೂರಪ್ಪ ಅವರಿಗೆ ಕೊಪ್ಪಳ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಬೇಕಾ.. ಅವರೂ ಬರಬೇಕಾಗುತ್ತೆ, ನಾನು ಯಡಿಯೂರಪ್ಪ ಅವರ ಹಿರಿಯ ಮಗ ಅಂತಾ ಬೊಮ್ಮಾಯಿ ಹೇಳಿದ್ದಾರೆ. ತಂದೆಗೆ ಪದೇ ಪದೇ ಆಹ್ವಾನ ಮಾಡುವುದಕ್ಕೆ ಆಗುತ್ತಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ. ಗದಗ ನಗರದಲ್ಲಿ ಆಯೋಜಿಸಲಾಗಿದ್ದ ಪಂಚಮಸಾಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನ ಕಡೆಗಣನೆ ಮಾಡಿಲ್ಲ, ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ದೇಶಭಕ್ತಿಯನ್ನ ಗುತ್ತಿಗೆ ತೆಗೆದುಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಅವರು ಪಾಕಿಸ್ತಾನದ ಗುತ್ತಿಗೆ ತೆಗೆದುಕೊಂಡಿದ್ದಾರೆ, ನಾವು ಭಾರತವನ್ನ ಗುತ್ತಿಗೆ ತೆಗೆದುಕೊಂಡಿದ್ದೇವೆ ಅಷ್ಟೇ. ಕಾಂಗ್ರೆಸ್‌ನವರು ಪಾಕಿಸ್ತಾನದ ಪರವಾಗಿಯೇ ಮಾತನಾಡುತ್ತಾರೆ, ಹಿಂದೂಗಳ ಪರವಾಗಿ ಮಾತನಾಡುವುದನ್ನು ಯಾವಾಗಲಾದರೂ ನೊಡಿದ್ದೀರಾ, ಲವ್‌ ಜಿಹಾದ್‌ ಪ್ರಕರಣ, ಹಿಂದೂಗಳ ಹತ್ಯೆ ವಿಚಾರವಾಗಿ ಮಾತನಾಡುವುದಿಲ್ಲ. ಮಂಗಳೂರಿನ ಬಾಂಬ್‌ ಸ್ಪೋಟವನ್ನ ಸುಳ್ಳು ಅಂತಾ ಹೇಳುವುದನ್ನು ಗಮನಿಸಿದಲ್ಲಿ ಇವರ ಮನಸ್ಥಿತಿ ಎಲ್ಲಿಗೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಭಯೋತ್ಪಾದಕರ ಪರವಾಗಿ ಮಾತಾಡುತ್ತೀರಿ ಎಂದರೆ ನೀವೇ ಭಯೋತ್ಪಾದಕರ ಜನಕರು ಎಂದರೆ ತಪ್ಪಿಲ್ಲ ಎಂದರು.

ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಬ್ರೇಕ್‌ ಬೀಳಲಿದೆ: ಯತ್ನಾಳ

ಮುಸ್ಲಿಂ ವೋಟ್‌ಗಾಗಿ ಹೇಳಿಕೆ ಕೊಡುತ್ತಿರುವ ನೀವೆಲ್ಲಾ ಗಮನಿಸಬೇಕು, ಕೇವಲ ಮುಸ್ಲಿಂ ವೋಟ್‌ನಿಂದ ಆರಿಸಿ ಬರುತ್ತೇವೆ ಎಂಬ ಭ್ರಮೆ ಕಾಂಗ್ರೆಸ್ಸಿನವರಲ್ಲಿದೆ. ಲೋಕಸಭೆಯಲ್ಲಿ ಕೆಲ ರಾಜ್ಯಗಳಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲು ಮುಸ್ಲಿಂ ತುಷ್ಟೀಕರಣವೇ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್‌ ಬಣ್ಣ ಬಯಲಾಗಿದ್ದು ಮೋದಿಯವರಿಗೆ 303 ಸೀಟ್‌ ಬರೋದಕ್ಕೆ ಕಾರಣವಾಗಿದೆ ಎಂದರು. ಜನಾರ್ದನ ರೆಡ್ಡಿ ಪ್ರತ್ಯೇಕ ಪಕ್ಷ ಕಟ್ಟುವ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜನಾರ್ದನ ರೆಡ್ಡಿ ಅವರು ಪಕ್ಷ ಕಟ್ಟುತ್ತೇವೆ ಅಂತಾ ಹೇಳಿಲ್ಲ, ಅವರಿಗೆ ನಿರ್ಲಕ್ಷಿಸಿದ್ದೀವಿ ಅನ್ನಿಸಿರಬೇಕು, ಅದಕ್ಕೆ ಸ್ವಲ್ಪ ಅಸಮಾಧನ ಆಗಿರಬೇಕು ಅಷ್ಟೇ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರು ಇಲ್ಲ ಅನ್ನೋ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಅವರು, ಕಾಂಗ್ರೆಸ್‌ ನಲ್ಲಿ ಈಗ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರಾ?. ಕಾಂಗ್ರೆಸ್‌ ವಿಸರ್ಜನೆ ಮಾಡಿ ಅಂತಾ ಮಹಾತ್ಮ ಗಾಂಧಿ ಆಗಲೇ ಹೇಳಿದ್ದರು. ಈಗ ನಕಲಿ ಕಾಂಗ್ರೆಸಿಗರು ಇದ್ದಾರೆ.. ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿದವರಾ?, ಭಾರತದ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದರಾ?, ಡಿಕೆಶಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.

ಭಯೋತ್ಪಾದಕರು ಡಿಕೆಶಿ ಬ್ರದರ್ಸ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮಂಗಳೂರು ಮತ್ತು ಬೆಳಗಾವಿ ಕುಕ್ಕರ್‌ ಮೇಲೆ ಬಹಳ ಪ್ರೀತಿಯಿದೆ. ಹಾಗಾಗಿ ಅವರು ಉಗ್ರಗಾಮಿಗಳು ತಮ್ಮ ಬ್ರದರ್ಸ್‌ ಎಂದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್‌ ಜಿಹಾದ್‌ ಕುರಿತು ಕಾಂಗ್ರೆಸ್ಸಿಗರು ಖಂಡಿಸುವುದಿಲ್ಲ. ಹಿಂದೂ ಯುವತಿಯನ್ನು ಕೊಂದು 35 ತುಂಡು ಮಾಡಿದ್ದರ ವಿರುದ್ಧ ಯಾವೊಬ್ಬ ಕಾಂಗ್ರೆಸ್ಸಿಗನೂ ಪ್ರತಿಕ್ರಿಯೆ ನೀಡಿ ಖಂಡಿಸಿಲ್ಲ. ಇದೇ ಘಟನೆ ಮುಸ್ಲಿಮರ ವಿರುದ್ಧ ಆಗಿದ್ದರೆ ಎಲ್ಲರೂ ರಸ್ತೆಗಿಳಿಯುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾದಿ, ಬೀದಿಯಲ್ಲಿರುವ ಲೋಫರ್‌ ಬಗ್ಗೆ ನಾನು ಮಾತನಾಡಲ್ಲ: ಯತ್ನಾಳ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ಮಾಡದೆ ಗೆಲ್ತೀವಿ ಎಂದಿರುವ ಕುರಿತು ಪ್ರಸ್ತಾಪಿಸಿದ ಯತ್ನಾಳ್‌, ಅವರು ಈ ಸಲದ ಚುನಾವಣೆ ಬಳಿಕ ಮನೆಯಲ್ಲಿಯೇ ಕೂಡುತ್ತಾರೆ. ಸೋಲುವ ಭೀತಿಯ ಹತಾಶೆಯಿಂದ ಅವರು ಹಾಗೆ ಹೇಳಿದ್ದಾರೆಯೇ ಹೊರತು; ಗೆಲುವ ಅತಿಯಾದ ಆತ್ಮವಿಶ್ವಾಸದಿಂದ ಅಲ್ಲ ಎಂದು ಕುಟುಕಿದರು. ಚುನಾವಣೆಯ ಈ ಹೊತ್ತಿನಲ್ಲಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ಯಾರಿಗೂ ಮಂತ್ರಿ ಆಗೋದು ಬೇಕಿಲ್ಲ. ಬೇಕಿದ್ದರೆ ರಾಜೀನಾಮೆ ಕೊಡುತ್ತಾರೆ. ಮಾಚ್‌ರ್‍ 15ರೊಳಗೆ ಚುನಾವಣಾ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ಅದಾದ ಮೇಲೆ ಯಾರ ಮಾತನ್ನೂ ಯಾರೂ ಕೇಳೋದಿಲ್ಲ ಎಂದರು.

Follow Us:
Download App:
  • android
  • ios