Asianet Suvarna News Asianet Suvarna News

ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಮೋದಿ ಏಕೆ ಇಷ್ಟು ಸುತ್ತಬೇಕು: ಖರ್ಗೆ

ಕಳೆದ 27 ವರ್ಷಗಳಿಂದ ಗುಜರಾತಿನಲ್ಲಿ ಬಿಜೆಪಿ ಜನರ ಪರ ಕೆಲಸ ಮಾಡಿದ್ದರೆ, ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಇಷ್ಟೊಂದು ಪ್ರಚಾರ ಮಾಡುವ ಅಗತ್ಯ ಇರಲಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 

IF BJP works well why Narendra Modi Have to roam all over state, AICC Leader Mallikarjun kharge slams bjp akb
Author
First Published Dec 4, 2022, 1:20 PM IST

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರೇನು 100 ತಲೆಯ ರಾವಣನೇ?’ ಎಂಬ ತಮ್ಮ ಹೇಳಿಕೆಯನ್ನು ಬಿಜೆಪಿಯು ಗುಜರಾತ್‌ ಚುನಾವಣೆಯಲ್ಲಿ ಪ್ರಬಲ ಅಸ್ತ್ರ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನ ಮುರಿದಿದ್ದಾರೆ. ‘ನನ್ನ ಹೇಳಿಕೆಯನ್ನು ಬಿಜೆಪಿ ಗುಜರಾತ್‌ ಚುನಾವಣಾ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕೀಯ ಎಂದರೆ ವ್ಯಕ್ತಿಗಳಲ್ಲ, ನೀತಿಗಳು’ ಎಂದು ಅವರು ತಿರುಗೇಟು ನೀಡಿದ್ದಾರೆ.

ನಾನು ಕಾರ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದೇನೆ. ಆದರೆ ಬಿಜೆಪಿಯ ರಾಜಕಾರಣದಲ್ಲಿ ಪ್ರಜಾಪ್ರಭುತ್ವದ (democracy) ಚೈತನ್ಯವೇ ಇಲ್ಲ. ಎಲ್ಲೆಲ್ಲೂ ಒಬ ವ್ಯಕ್ತಿಯನ್ನೇ ಬಿಂಬಿಸಲಾಗುತ್ತದೆ’ ಎಂದು ಟಾಂಗ್‌ ನೀಡಿದ್ದಾರೆ. ಕಳೆದ 27 ವರ್ಷಗಳಿಂದ ಗುಜರಾತಿನಲ್ಲಿ ಬಿಜೆಪಿ ಜನರ ಪರ ಕೆಲಸ ಮಾಡಿದ್ದರೆ, ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಇಷ್ಟೊಂದು ಪ್ರಚಾರ ಮಾಡುವ ಅಗತ್ಯ ಇರಲಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿರುವ ಅವರು, ಕಾಂಗ್ರೆಸ್‌ ಮತಗಳನ್ನು ವಿಭಜಿಸುವ ಉದ್ದೇಶದಿಂದ ಆಮ್‌ ಆದ್ಮಿ ಪಕ್ಷ ಬೇರೊಬ್ಬರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ’ ಎಂದು ದೂರಿದ್ದಾರೆ. ಗುಜರಾತಿನಲ್ಲಿ ಕಾಂಗ್ರೆಸ್‌ ಅಬ್ಬರ ರಹಿತವಾಗಿ, ಮನೆ ಮನೆ ಪ್ರಚಾರ ಮಾಡುತ್ತಿದೆ. 1978ರಲ್ಲಿ ಕರ್ನಾಟಕದ ಚಿಕ್ಕಮಗಳೂರು (Chikkamagaluru) ಲೋಕಸಭೆ ಉಪಚುನಾವಣೆಯಲ್ಲಿ ಜನರು ಅಬ್ಬರ ತೋರದಿದ್ದರೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿದ್ದರು’ ಎಂದು ಸ್ಮರಿಸಿದ್ದಾರೆ. 

ಗುಜರಾತ್ ಚುನಾವಣೆ ಗೆಲ್ತಾರಾ ಮೋದಿ ಅಮಿತ್ ಶಾ? ಒಂದೇ ದಿನ 16 ಕ್ಷೇತ್ರ ಸುತ್ತಾಟ!

ಯೋಚಿಸಿ ಮಾತನಾಡುವಂತೆ ಕಿವಿಮಾತು

ಮುಖಂಡರು ಪ್ರಚಾರ ಭಾಷಣ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅವಹೇಳನಕಾರಿ ಎನ್ನಬಹುದಾದ ಪದ ಬಳಸುವುದರಿಂದ, ನೀಡಬೇಕಿದ್ದ ನಿಜವಾದ ಸಂದೇಶ ರವಾನೆ ಆಗದೇ ಹೋಗಬಹುದು ಹಾಗೂ ಆಡಿದ ಪದ ದುರ್ಬಳಕೆ ಆಗಬಹುದು ಎಂದು ಗುಜರಾತ್‌ ಕಾಂಗ್ರೆಸ್‌ ನಾಯಕಿ ಮುಮ್ತಾಜ್‌ ಪಟೇಲ್‌ (Mumtaz Patel) ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ಈ ಪದ ಬಳಕೆ ಬಗ್ಗೆ ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೇಲೆ ಆಕ್ರೋಶದ ಮಳೆ ಸುರಿಸುತ್ತಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಅನುಮಾನ, ಬಾಟ್ಲಾ ಉಗ್ರರ ಪರ ಕಣ್ಣೀರು, ಮೋದಿ ಭಾಷಣಕ್ಕೆ ಕಾಂಗ್ರೆಸ್, ಆಪ್ ಕಂಗಾಲು!

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿವಂಗತ ಕಾಂಗ್ರೆಸ್ಸಿಗ ಅಹ್ಮದ್‌ ಪಟೇಲ್‌ ಅವರ ಪುತ್ರಿ ಮುಮ್ತಾಜ್‌ ಪಟೇಲ್‌ (Mumtaz Patel) , ನಾನು ಯಾವುದೇ ನಾಯಕರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ನಾಯಕರು ಮಾತು ಆಡುವಾಗ ಅಳೆದೂ ತೂಗಿ ಮಾತಾಡಬೇಕು. ಏನಾದರೂ ಆಕ್ಷೇಪಾರ್ಹ ಪದ ಬಳಸಿದರೆ, ನೀಡಬೇಕಾದ ನಿಜವಾದ ಸಂದೇಶ ರವಾನೆ ಆಗದೇ ಬೇರೆಯದ್ದೇ ವಿವಾದ ಸೃಷ್ಟಿಆಗುತ್ತದೆ. ಉದ್ದೇಶಿತ ಸಂದೇಶ ರವಾನೆ ಆಗುವುದೇ ಇಲ್ಲ ಎಂದಿದ್ದಾರೆ.

Follow Us:
Download App:
  • android
  • ios