Asianet Suvarna News Asianet Suvarna News

ಬಿಜೆಪಿಗೆ ಮುಜುಗರವಾಗಿದ್ದರೆ ಅವರೇ ತೀರ್ಮಾನಿಸಲಿ: ಕುಮಾರಸ್ವಾಮಿ

ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರವಾಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನೂ ವಿರೋಧವಿಲ್ಲ ಎಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ 

If BJP is Embarrassed, let them Decide Says JDS State President HD Kumaraswamy grg
Author
First Published May 8, 2024, 8:18 AM IST

ಬೆಂಗಳೂರು(ಮೇ.08):  ಪೆನ್​ಡ್ರೈವ್ ವಿಚಾರ ನನಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಪ್ರಜ್ವಲ್ ರೇವಣ್ಣ​ಗೆ ಟಿಕೆಟ್ ಕೊಡುತ್ತಿರಲಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರವಾಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನೂ ವಿರೋಧವಿಲ್ಲ ಎಂದರು.

ಪ್ರಜ್ವಲ್‌ ರೇವಣ್ಣನ ಬಿಟ್ಟುಬಿಡ್ತಾರೆ, ನಮ್ಮಂಥವರನ್ನು ಮಾತ್ರ ಬಂಧಿಸ್ತಾರೆ: ಕೆಸಿಆರ್‌ ಪುತ್ರಿ ಕವಿತಾ

ಬಿಜೆಪಿಯವರದ್ದು ರಾಷ್ಟ್ರೀಯ ಪಕ್ಷ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಇರುತ್ತದೆಯೋ, ಇರುವುದಿಲ್ಲವೋ ಮುಂದೆ ನೋಡೋಣ ಎಂದು ಹೇಳಿದರು.

Latest Videos
Follow Us:
Download App:
  • android
  • ios