Asianet Suvarna News Asianet Suvarna News

ನಾನು ಪಾಕಿಸ್ತಾನಿ, ಮತ ಹಾಕಿ ಎನ್ನಲು ಹೇಸದ ರಾಜಕಾರಣಿ ಕೇಜ್ರಿವಾಲ್, ಕಾಂಗ್ರೆಸ್ ಟೀಕಿಗೆ ಆಪ್ ಕಂಗಾಲು!

ಅರವಿಂದ್ ಕೇಜ್ರಿವಾಲ್ ರಾಜಕಾರಣ ಹಾಗೂ ಆ ರಾಜಕಾರಣಿ ಅತ್ಯಂತ ಅಪಾಯಕಾರಿ ಹಾಗೂ ಅತೀ ಕೆಟ್ಟದು ಎಂದು ಕಾಂಗ್ರೆಸ್ ನಾಯಕ ಟೀಕಿಸಿದ್ದಾರೆ. ಕೇಜ್ರಿವಾಲ್ ಪಾಕಿಸ್ತಾನಕ್ಕೆ ಹೋದರೆ, ನಾನು ಪಾಕಿಸ್ತಾನಿ ನನಗೆ ಮತ ಹಾಕಿ ಎಂದು ಹೇಳಲು ಹೇಸದ ರಾಜಕಾರಣಿ ಎಂದಿದ್ದಾರೆ. 

If Arvind Kejriwal goes Pakistan he says vote me i am Pakistani Congress slams APP dirty politics over currency note image ckm
Author
First Published Oct 26, 2022, 4:30 PM IST | Last Updated Oct 26, 2022, 4:30 PM IST

ನವದೆಹಲಿ(ಅ.26):  ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಇದೀಗ ಹಿಮಾಚಲ ಪ್ರದೇಶ ಹಾಗೂ ಗುಜಾರಾತ್ ಮೇಲೆ ಕಣ್ಣಿಟ್ಟಿದೆ. ಪ್ರತಿ ರಾಜ್ಯದಲ್ಲಿ ಆಪ್ ಸಿದ್ದಾಂತ, ರಾಜಕಾರಣ ರೀತಿಯೆ ಬದಲು. ಇದೀಗ ಅರವಿಂದ್ ಕೇಜ್ರಿವಾಲ್ ಹೇಳಿಕೆಗಳು, ನಡೆಗಳು ಅತ್ಯಂತ ಕೆಟ್ಟ ರಾಜಕರಾಣಿ ಅನ್ನೋದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ಭಾರತೀಯ ನೋಟಿನಲ್ಲಿ ಲಕ್ಷ್ಮೀ ಹಾಗೂ ಗಣೇಶನ ಫೋಟೋ ಮುದ್ರಿಸಲು ಕೇಂದ್ರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಕೇಜ್ರಿವಾಲ್ ಮಗ್ಗುಲ ಬದಲಿಸುವ ರಾಜಕಾರಣ ಜಗಜ್ಜಾಹೀರಾಗಿದೆ. ಈ ಹೇಳಿಕೆ ಆಧರಿಸಿ ಇದೀಗ ಸಂದೀಪ್ ದೀಕ್ಷಿತ್ ತಿರುಗೇಟು ನೀಡಿದ್ದಾರೆ. ಕೇಜ್ರಿವಾಲ್ ಹೇಗೆ ಅಂದರೆ, ಯಾವ ಪ್ರದೇಶಕ್ಕೆ ತೆರಳುತ್ತಾರೋ ಅಲ್ಲಿಯ ಮತದಾರರನ್ನು ಸೆಳೆಯಲು ಏನೂ ಬೇಕಾದರು ಹೇಳುತ್ತಾರೆ. ಕೇಜ್ರಿವಾಲ್ ಪಾಕಿಸ್ತಾನಕ್ಕೆ ತೆರಳಿದರೆ, ನಾನು ಪಾಕಿಸ್ತಾನಿ, ನನಗೆ ಮತ ಹಾಕಿ ಎಂದು ಹೇಳುವ ಅತ್ಯಂತ ಕೆಟ್ಟ ರಾಜಕಾರಣಿ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

ಮುಸ್ಲಿಂ ಮತದಾರರನ್ನು ಸೆಳೆಯಲು ಮಸೀದಿಗೆ ಬೇಟಿ ನೀಡುವುದು, ಮುಸ್ಲಿಮರ ಪರವಾಗಿ ಹಾಗೂ ಹಿಂದೂಗಳ ವಿರುದ್ಧವಾಗಿ ಹೇಳಿಕೆ ನೀಡುತ್ತಾರೆ. ಹಿಂದೂಗಳ ಮತಗಳನ್ನು ಸೆಳೆಯಲು ನೋಟಿನಲ್ಲಿ ಲಕ್ಷ್ಮೀ ಫೋಟೋ ಬೇಕು, ಗಣೇಶನ ಫೋಟೋ ಇರಬೇಕು ಎಂದು ಮನವಿ ಮಾಡುತ್ತಾರೆ. ಕೇಜ್ರಿವಾಲ್ ಬಿಜೆಪಿ ಬಿ ಟೀಂ ಎಂದು ಸಂದೀಪ್ ದೀಕ್ಷಿತ್ ಆರೋಪಿಸಿದ್ದಾರೆ. 

ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಸೇರಿಸಿ: ಪ್ರಧಾನಿಗೆ Arvind Kejriwal ಮನವಿ

ಗುಜರಾತ್‌ನಲ್ಲಿ ನಾನು ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದು ಹುಟ್ಟಿದ್ದೇನೆ. ದೇವರು ನನ್ನನ್ನು ಇಲ್ಲಿನ ಭ್ರಷ್ಟರನ್ನು ಸಂಹರಿಸಿ, ಜನರಿಗೆ ಸುಭಿಕ್ಷೆ ನೀಡಲು ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ತಾನೋವ್ರ ದೇವಧೂತ ಅನ್ನೋದನ್ನು ಒತ್ತಿ ಒತ್ತಿ ಹೇಳಿದ್ದರು. ಕೇಜ್ರಿವಾಲ್ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಸಿದ್ಧಾಂತಗಳೇ ಬೇರೆಯಾಗಿತ್ತು. ಕೃಷಿ ಕಾಯ್ದೆ ವಿರೋದಿಸಿ ನಡೆಯುತ್ತಿದ್ದ ಹೋರಾಟ, ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಪಂಜಾಬ್ ಜನರ ಮತಗೆದ್ದಿದ್ದರು. ಇಷ್ಟೇ ಅಲ್ಲ ರೈತರ ಪ್ರತಿಭಟನೆಗೆ ಕೆಲ ಉಗ್ರ ಸಂಘಟನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿತ್ತು. ಇಷ್ಟೇ ಅಲ್ಲ ಸಕ್ರಿಯಾಗಿ ಪಾಲ್ಗೊಂಡಿತ್ತು. ಇದೇ ಕಾರಣದಿಂದ ಕೇಜ್ರಿವಾಲ್ ಉಗ್ರರ ಜೊತೆಗಿದ್ದಾರೆ ಅನ್ನೋ ಆರೋಪಕ್ಕೆ ಪುಷ್ಟಿ ಸಿಕ್ಕಿತ್ತು. 

ಕೇಜ್ರಿವಾಲ್ ಗಾಳಿ ಬಂದ ಹಾಗೇ ರಾಕಾರಣ ಮಾಡುತ್ತಾರೆ. ಇವರ ರಾಜಕಾರಣದಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲವೂ ಒಲೈಕೆ ಮಾತ್ರ. ಅಧಿಕಾರ ಹಿಡಿಯುಲು ಯಾವ ಮಟ್ಟಕ್ಕೂ ಇಳಿಯಲು ಹಿಂಜರಿಯುವುದಿಲ್ಲ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ. 

 

ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ

ನವೆಂಬರ್‌ಗೆ ಬೆಳಗಾವಿಗೆ ಕೇಜ್ರಿವಾಲ್‌ ಭೇಟಿ
ಬೆಳಗಾವಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ… ಅವರು ಮುಂದಿನ ತಿಂಗಳು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಆಮ… ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಹೇಳಿದರು. ಪಂಜಾಬ್‌ ಸರ್ಕಾರ ಕಬ್ಬಿಗೆ ನಿಗದಿಪಡಿಸಿದ ದರದ ಹಾಗೆ ಕರ್ನಾಟಕದಲ್ಲೂ ಆಗಬೇಕು. ಆದರೆ ಕರ್ನಾಟಕ ಸರ್ಕಾರ ಕೇವಲ .2,700 ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ಮಾಡಿದೆ. ಈ ಸಂಬಂಧ ಆಮ… ಆದ್ಮಿ ಪಕ್ಷದ ಕಾರ್ಯಕರ್ತರು ಸಮೀಕ್ಷೆ ನಡೆಸಿ ದೆಹಲಿ ಸಿಎಂಗೆ ವರದಿ ಸಲ್ಲಿಸಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios