Asianet Suvarna News Asianet Suvarna News

ನನಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದು ಬಿಜೆಪಿ ಹೈಕಮಾಂಡ್‌: ವಿಜಯೇಂದ್ರ

ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಅಧಿಕಾರ ಕೊಟ್ಟಿರೋದು ಹೈಕಮಾಂಡ್ ನಾಯಕರು. ಅವರಿಗೆ ಅವಮಾನ ಆಗೋ ರೀತಿ ಯಾವುದೇ ಕೆಲಸ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. 

I was given the post of state president by the BJP high command Says BY Vijayendra gvd
Author
First Published Dec 24, 2023, 12:58 PM IST

ನವದೆಹಲಿ (ಡಿ.24): ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಅಧಿಕಾರ ಕೊಟ್ಟಿರೋದು ಹೈಕಮಾಂಡ್ ನಾಯಕರು. ಅವರಿಗೆ ಅವಮಾನ ಆಗೋ ರೀತಿ ಯಾವುದೇ ಕೆಲಸ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ಎಲ್ಲರಿಗೂ ಹೇಳ್ತಿದ್ದೇನೆ. ಯಡಿಯೂರಪ್ಪ ಮಗ ಅನ್ನೋದಕ್ಕೆ ನನಗೆ ಹೆಮ್ಮೆ ಇದೆ. ಹಲವು ನಾಯಕರನ್ನು ಹುಟ್ಟುಹಾಕಿದ ಧೀಮಂತ ನಾಯಕ ಯಡಿಯೂರಪ್ಪನವರು. ಆದರೆ, ನಾನು ಅಧ್ಯಕ್ಷ ಮತ್ತು ಯಡಿಯೂರಪ್ಪನವರ ಮಗ ಎಂಬ ಅಹಂಕಾರದಲ್ಲಿ ಮಾತನಾಡುತ್ತಿಲ್ಲ. 

ನನಗೆ ಅಧಿಕಾರ ಕೊಟ್ಟಿರೋದು ಹೈಕಮಾಂಡ್ ನಾಯಕರು. ನನ್ನ ಮುಂದಿರುವ ಗುರಿ ಲೋಕಸಭಾ ಚುನಾವಣೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನನ್ನ ಗುರಿ. ಕಾರ್ಯಕರ್ತರು ರಾಜ್ಯದಲ್ಲಿ ತಪಸ್ಸಿನ ರೀತಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಅವಮಾನ ಆಗೋ ರೀತಿ ಯಾವುದೇ ಕೆಲಸ ಮಾಡಬಾರದು ಎಂದರು. ನಾನು ಯಾರ ವಿರುದ್ದವೂ ದೂರು ನೀಡುವ ಕೆಲಸ ಮಾಡಿಲ್ಲ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು.

ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್

ಶೈಕ್ಷಣಿಕ ವಾತಾವರಣ ಕಲುಷಿತಗೊಳಿಸಲು ಸಿಎಂ ಯತ್ನ: ಹಿಜಾಬ್‌ ಆದೇಶ ವಾಪಸ್‌ ಕುರಿತು ನಿನ್ನೆ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡೋದಾಗಿ ಹೇಳಿ ಶಿಕ್ಷಣವನ್ನು ಕಲುಷಿತ ಮಾಡೊದಕ್ಕೆ ಸಿಎಂ ಕೈಹಾಕಿರೋದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಕೆಪಿಎಸ್‌ಸಿ ಪರೀಕ್ಷೆ ವೇಳೆ ಈ ಹಿಂದೆ ಕಲಬುರಗಿಯಲ್ಲಿ ತಾಳಿ, ಕಾಲುಂಗುರವನ್ನು ತೆಗೆಸಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. 

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದಾಗಿ ವಿಜಯೇಂದ್ರ ಹೇಳಿದ್ದಾರೆ: ಕೆ.ಎಸ್.ಈಶ್ವರಪ್ಪ

ಶಾಲೆಯಲ್ಲಿ ಎಲ್ಲರಿಗೂ ಸಮವಸ್ತ್ರ ತರಲಾಗಿತ್ತು. ಈಗ ಶಾಲೆಗೆ ಹೋಗುವ ಮಕ್ಕಳನ್ನಾದ್ರು ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳೋದ್ರಿಂದ ದೂರ ಇಡಬಹುದಾಗಿತ್ತು. ಇವತ್ತಿಗೂ ಶೇ.50ರಷ್ಟು ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಅಲ್ಪಸಂಖ್ಯಾತರನ್ನು ಕೇವಲ‌ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಅಲ್ಪಸಂಖ್ಯಾತ ಮಹಿಳೆಯರ ಪರವಾಗಿ ತ್ರಿಬಲ್‌ ತಲಾಕ್ ನಿಷೇಧ ಮಾಡಿದ್ರು. ಆದರೆ, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರಿಗಾಗಿ ಏನ್ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios