ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು.  ಅವರಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Congress Leader BK Hariprasad Slams On BJP At Hubballi gvd

ಹುಬ್ಬಳ್ಳಿ (ಡಿ.24): ಬಿಜೆಪಿಯವರು ಗೋಡ್ಸೆ ಅನುಯಾಯಿಗಳು.  ಅವರಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳೊಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಬುರ್ಖಾ ಅನ್ನೋದು ಸಂಪೂರ್ಣ ದೇಹ ಮುಚ್ಚಿಕೊಳ್ಳೋದು. ಶಾಲಾ ಕಂಪೌಂಡ್ ವರೆಗೂ ಭುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನೋದು ನನ್ನ ಕಲ್ಪನೆ. ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತಾಡ್ತಾರೆ ಎಂದರು.

ಅಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕ. ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಈ ವಿಚಾರ ಮಾತಾಡ್ತೀದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮಾಡ್ತೀವಿ. ನಮ್ದು ಜ್ಯಾತ್ಯಾತೀತ ರಾಷ್ಟ್ರ. ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು,ಕಾಂಗ್ರೆಸ್ ತುಷ್ಟೀಕರಣ ಮಾಡತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡ್ತಿರೋದು ಬಿಜೆಪಿ. ಹಿಂಸೆ ಸುಳ್ಳನ್ನು ಪ್ರಚಾರ ಮಾಡ್ತಿರೋದು ಬಿಜೆಪಿ. ಅಲ್ಪ ಸಂಖ್ಯಾತರು, ಮೀಸಲಾತಿ ವಿಚಾರದಲ್ಲಿ ಇವರು ವಿರೋಧ. ನಾಗಪುರದಲ್ಲಿ ಇರೋ ಇವರ ಸುತ್ರಧಾರರು ಜಾತಿ ಗಣತಿ ವಿರೋಧಿಗಳು ಎಂದರು.

ಪರೋಕ್ಷವಾಗಿ RSS ನಾಯಕರ ವಿರುದ್ದ ಹರಿಪ್ರಸಾದ್‌ ಗರಂ ಆಗಿದ್ದು,ಇವರಿಂದ ನಾವು ಕಲಿಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ ಪಾರ್ಟ್ ಅಲ್ಲ. ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು. ಇವರು ನಮಗೆ ಟಿಪ್ಪು ಸುಲ್ತಾನ್ ಫಾಲೋ ಮಾಡ್ತಿವೋ ಬಿಡ್ತಿವೋ ಅನ್ನೋದನ್ನ ಹೇಳೋದ ಬೇಡ ಎಂದು ಬಿಜೆಪಿ ಟಕ್ಕರ್ ಕೊಟ್ಟರು.

ಸಿದ್ದರಾಮಯ್ಯ ಸಮಾಜವಾದಿಯೇ ಅಥವಾ ಮಜಾವಾದಿಯೇ?: ಆರ್‌.ಅಶೋಕ್‌

ಮಲ್ಲಿಕಾರ್ಜುನ ಖರ್ಗೆ ಹೆಸರು ಬಂದಿರೋದು ಸೂಕ್ತ: ನಾನು ಲೋಕಸಭೆ ಚುನಾವಣೆಗೆ ಆಕಾಂಕ್ಷಿ. ಹೈಕಮಾಂಡ್ ತೀರ್ಮಾನ ಮಾಡತ್ತೆ ಎಂದ ಹರಿಪ್ರಸಾದ್‌, ಕಾಯಕ ಸಮಾಜದ ಪರ ಹೋರಾಟ ನಮ್ಮೆಲ್ಲರ ಇಚ್ಛೆ. ಸಮಾಜದಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆ ಬಗೆಹರಿಬೇಕು. ಮಲ್ಲಿಕಾರ್ಜುನ ಖರ್ಗೆ ಹೆಸರು ಬಂದಿರೋದು ಸೂಕ್ತ. ಪ್ರಧಾನಿ ಮಂತ್ರಿ ಹುದ್ದೆಗೆ ಹೆಸರ ಬಂದಿರೋದು ಸಂತೋಷ. ಈಡಿಗ ಸಮಾವೇಶದಿಂದ ನಾನು ದೂರ ಇದ್ದೆ. ದ್ವನಿ ಇಲ್ಲದವರಿಗೆ ದ್ವನಿ ಕೊಡಬೇಕು. ರಾಜಕಾರಣದಲ್ಲಿ ಯಾರನ್ನೂ ತುಳಿಯೋಕೆ ಆಗಲ್ಲ. ತುಳಿತೀನಿ ಅಂದಿದ್ರೆ ಅವರು ಭ್ರಮನಿರಸದಲ್ಲಿ ಇರ್ತಾರೆ ಎಂದು ಪರೋಕ್ಷವಾಗಿ ಸಿದ್ದು ವಿರುದ್ದ ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios