ಕ್ಷೇತ್ರದ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿ ಕ್ಷೇತ್ರದ ಮತದಾರರು ಮತ್ತೊಮ್ಮೆ ಬೆಂಬಲಿಸುವ ಮೂಲಕ ಮತ್ತೆ ಕ್ಷೇತ್ರದ ಜನರ ಸೇವೆಗೆ ಅವಕಾಶ ಕೊಡಬೇಕೆಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಅವರು ಮನವಿ ಮಾಡಿದರು.
ಬೆಂಗಳೂರು (ಏ.23): ಕ್ಷೇತ್ರದ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿ ಕ್ಷೇತ್ರದ ಮತದಾರರು ಮತ್ತೊಮ್ಮೆ ಬೆಂಬಲಿಸುವ ಮೂಲಕ ಮತ್ತೆ ಕ್ಷೇತ್ರದ ಜನರ ಸೇವೆಗೆ ಅವಕಾಶ ಕೊಡಬೇಕೆಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಅವರು ಮನವಿ ಮಾಡಿದರು. ಶನಿವಾರ ಅವರು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚೋಳನಾಯಕನಹಳ್ಳಿ, ಮಂಜುನಾಥ ಲೇಔಟ್ ದಾಸಪ್ಪ ಗಾರ್ಡನ್‌ನಲ್ಲಿ ಮನೆ ಮನೆ ಪ್ರಚಾರ ನಡೆಸಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ನವೀಕರಣ ಮಾಡಿ, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಸರ್ಕರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದ್ದೇನೆ. ಅದೇ ರೀತಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮಕೈಗೊಂಡಿದ್ದೇನೆ ಎಂದರು. ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಷ್ಟು ಹಳೆಯದಾದ ಒಳಚರಂಡಿ ಪೈಪ್‌ಲೈನ್ ಬದಲಿಸಿ, ಉತ್ತಮ ಗುಣಮಟ್ಟದ ನೂತನ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ನಗರದ ಅನುಪಯುಕ್ತ ನೀರು ಹೊರಸಾಗಿಸಲು ಹಾಗೂ ದ್ರವತ್ಯಾಜ್ಯ ನಿರ್ವಹಣೆಗೆ ಕ್ರಮಕೈಗೊಂಡಿದ್ದೇವೆ.
ಲಗ್ಗೆರೆ ನಾರಾಯಣಸ್ವಾಮಿ, ನಂಜುಂಡಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ
ಹೆಬ್ಬಾಳ ಕ್ಷೇತ್ರದ ಪ್ರತಿ ರಸ್ತೆಯನ್ನು ಡಾಂಬರೀಕರಣ ಮಾಡುವುದರ ಜೊತೆಗೆ ಇನ್ನಷ್ಟು ಅಭಿವೃದ್ಧಿಗೆ ಕ್ರಮವಹಿಸಿದ್ದೇವೆ ಎಂದರು. ಅಲ್ಲದೆ, ಶನಿವಾರ ಬೆಳಗ್ಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಚ್‌ಎಂಟಿ ಮೈದಾನ, ಪಾನಿಪುರಿ ಗ್ರೌಂಡ್ ಹಾಗೂ ಭೂಪಸಂದ್ರದ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರನ್ನು ಭೇಟಿ ಮಾಡಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಪದ್ಮಾವತಿ ಬೈರತಿ ಸುರೇಶ್‌ರಿಂದ ಪ್ರಚಾರ: ಇದೇ ವೇಳೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಬೈರತಿ ಸುರೇಶ್ ಅವರು ನಾಗೇನಹಳ್ಳಿ ಮುನಿರಾಯಪಾಳ್ಯದಲ್ಲಿ ಅಬ್ಬರದ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಮನೆ ಮನೆಗೆ ತೆರಳಿ, ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಬೈರತಿ ಸುರೇಶ್ ಅವರನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಜಾತಿ, ಧರ್ಮಗಳಲ್ಲಿ ಕೋಮು ಸೌಹಾರ್ದತೆ ಹದಗೆಡಿಸುವ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪದ್ಮಾವತಿ ಬೈರತಿ ಸುರೇಶ್ ಅವರಿಗೆ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಮುಖಂಡರು, ಸ್ಥಳೀಯ ಮಹಿಳಾ ಕಾರ್ಯಕರ್ತರು ಸಾಥ್ ನೀಡಿದರು.
ಬೈರತಿ ಬಸವರಾಜು ಬಳಿ 118 ಕೋಟಿ: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿ.ಎ.ಬಸವರಾಜು(ಬೈರತಿ ಬಸವರಾಜ) ಅವರು ತಮ್ಮ ಕುಟುಂಬ ಒಟ್ಟು 118.44 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಒಟ್ಟು ಆಸ್ತಿ ಪೈಕಿ 32.56 ಕೋಟಿ ರು. ಮೌಲ್ಯದ ಚರಾಸ್ತಿ, 85.88 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 10.74 ಲಕ್ಷ ರು. ಮೌಲ್ಯದ ಬೆನ್ಜ್ ಕಾರು, 60.64 ರು. ಮೌಲ್ಯದ ಬೆನ್ಜ್ ಕಾರು, 1.04 ಕೋಟಿ ರು. ಮೌಲ್ಯದ ಬೆನ್‌್ಜ ಕಾರು, 52.33 ಲಕ್ಷ ರು. ಮೌಲ್ಯದ ಆಡಿ ಕ್ಯೂ7 ಕಾರು, 12.79 ಲಕ್ಷ ರು. ಮೌಲ್ಯದ ಟೊಯೋಟಾ ಗ್ಲೆನ್ಜ್ ಕಾರು, 31.50 ಲಕ್ಷ ರು. ಮೌಲ್ಯದ ಇನೋವಾ ಕಾರು ಇದೆ.
ಶೆಟ್ಟರ್, ಸವದಿ ಸೋಲಿಸುವ ಹೊಣೆ ಯಡಿಯೂರಪ್ಪಗೆ: ಇಬ್ಬರ ಕ್ಷೇತ್ರಕ್ಕೂ ಹೋಗಿ ಪ್ರಚಾರಕ್ಕೆ ಶಾ ಸೂಚನೆ
2.56 ಕೋಟಿ ರು. ಮೌಲ್ಯದ 8 ಕೆ.ಜಿ.ಚಿನ್ನ, 64.30 ಲಕ್ಷ ರು. ಮೌಲ್ಯದ 54 ಕೆ.ಜಿ.ಬೆಳ್ಳಿ, 47.92 ಲಕ್ಷ ರು. ಮೌಲ್ಯದ ವಜ್ರ ಹಾಗೂ 86.86 ಲಕ್ಷ ರು. ಮೌಲ್ಯದ ಐಷಾರಾಮಿ ವಾಚುಗಳನ್ನು ಹೊಂದಿದ್ದಾರೆ. ಸುಮಾರು 10 ಎಕರೆ ಕೃಷಿಭೂಮಿ, ಸುಮಾರು 6 ಎಕರೆ ಕೃಷಿಯೇತರ ಭೂಮಿ, ನಿವೇಶನಗಳು ಸೇರಿದಂತೆ ಸುಮಾರು 58.94 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 23.18 ಕೋಟಿ ರು. ಸಾಲವಿದೆ. ಪತ್ನಿ ಪದ್ಮಾವತಿ ಅವರ ಬಳಿ ಎರಡು ಐಷಾರಾಮಿ ಕಾರು ಸೇರಿದಂತೆ 56.57 ಲಕ್ಷ ರು. ಮೌಲ್ಯದ ಚರಾಸ್ತಿ ಹಾಗೂ ಮನೆ, ನಿವೇಶನಗಳು ಸೇರಿದಂತೆ 21.57 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ.
