ನಾನು ಕ್ಯಾಂಡಿಡೇಟ್ ಅನೌನ್ಸ್ ಮಾಡಿಲ್ಲ, ನಾನು ಅಶೀರ್ವಾದ ಮಾಡಿ ಎಂದಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ನಾನು ಹೋದ ಕಡೆಗೆ ಕ್ಯಾಂಡಿಡೇಟ್ ಗಳನ್ನ ಅನೌನ್ಸ್ ಮಾಡಿಲ್ಲ, ಬದಲಾಗಿ ಜನರಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಡಿ.19): ರಾಜ್ಯದಲ್ಲಿ ನಾನು ಹೋದ ಕಡೆಗೆ ಕ್ಯಾಂಡಿಡೇಟ್ ಗಳನ್ನ ಅನೌನ್ಸ್ ಮಾಡಿಲ್ಲ, ಬದಲಾಗಿ ಜನರಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಬಾಗಲಕೋಟೆ ಜಿಲ್ಲೆಯ ಕಾಜಿ ಬೀಳಗಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಕೈ ಪಕ್ಷದಲ್ಲಿ ಅಭ್ಯರ್ಥಿ ಘೋಷಣೆ ವಿರುದ್ಧ ವರದಿ ಬಂದ್ರೆ ಶಿಸ್ತು ಕ್ರಮ ಕೈಗೊಳ್ತೀವಿ ಎಂಬ ಜಿ.ಪರಮೇಶ್ವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಡಪ್ಪ, ಕ್ಯಾಂಡಿಡೇಟ್ ಅನೌನ್ಸ್ ಮಾಡಬಾರದು ಅಂತಾ ಪಕ್ಷದಲ್ಲಿ ಒಂದು (ಪ್ರೊಸೆಸ್) ಪ್ರಕ್ರಿಯೆ ಇದೆ, ಆ ಪ್ರಕ್ರಿಯೆ ಪ್ರಕಾರ ಮಾಡಬೇಕು. ನಾನು ಅನೌನ್ಸ್ ಮಾಡ್ತಿಲ್ಲ, ಅವರಿಗೆ ಆಶೀರ್ವಾದ ಮಾಡಿ ಅಂತಾ ಹೇಳ್ತಿದ್ದೀನಿ ಎಂದು ಗೊಂದಲಮಯ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಸಿದ್ದರಾಮಯ್ಯನವರೇ ಅಲ್ಲಿ ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಬೇಕಿತ್ತೇ?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಸಾವರ್ಕರ್ ರೀತಿ ದಾರ್ಶನಿಕರ ಪೋಟೋ ಹಾಕಿ: ಸಿದ್ದರಾಮಯ್ಯ
ಇನ್ನು ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರವಾಗಿ ಮಾತನಾಡಿ, ಸಾವರ್ಕರ್ ಬಗ್ಗೆ ನಾನೇನು ಮಾತನಾಡಿಲ್ಲ, ಸಾವರ್ಕರ್ ಬಗ್ಗೆ ನಾನು ಮಾತಾಡೋಕೆ ಹೋಗಲ್ಲ. ನ್ಯಾಷನಲ್ ಲೀಡರ್ಸ್ ವಲ್ಲಭಭಾಯಿ ಫೋಟೊ ಹಾಕಿದ್ದಾರೆ, ನೆಹರೂ ಫೋಟೊ ಹಾಕಬೇಕೋ? ಬೇಡವೋ? ಮಹಾತ್ಮಾ ಗಾಂಧೀಜಿ ಹಾಕಿದ್ದಾರೆ, ನೆಹರು ಹಾಕಬೇಕೋ? ಬೇಡ್ವೊ? ಅಂಬೇಡ್ಕರ್ ಹಾಕಿದ್ದಾರೆ, ಜಗಜೀವನ್ ರಾಮ್ ಹಾಕ್ಬೇಕೋ ಬೇಡ್ವ? ಎಂದರಲ್ಲದೆ, ಬಸವಣ್ಣ, ವಾಲ್ಮೀಕಿ, ಕನಕದಾಸರು, ನಾರಾಯಣಗುರು, ಶಿಶುನಾಳ ಶರೀಫರು ಇದಾರೆ. ಕುವೆಂಪು ಇದಾರೆ, ಎಲ್ಲ ದಾರ್ಶನಿಕರದು ಹಾಕಬೇಕಿತ್ತಲ್ವ? ಇನ್ನೂ ಅನೇಕ ಜನರಿದ್ದಾರೆ ಅವ್ರದೆಲ್ಲಾನು ಹಾಕಬೇಕಿತ್ತಲ್ಲ ಅವರಿಂದ ಸಮಾಜಕ್ಕೆ ಒಳ್ಳೆಯದು ಆಗಬೇಕಲ್ವ ಎಂದರಲ್ಲದೆ, ದಾರ್ಶನಿಕರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಲ್ವ ಅದಕ್ಕೆ ಹೇಳಿದೆ ಅದು ನಮ್ಮ ಡಿಮ್ಯಾಂಡ್ ಎಂದರು.
ಒಬಿಸಿ ಮೀಸಲಿಗೆ ಸರ್ಕಾರ ಮೀನಮೇಷ: ಸಿದ್ದರಾಮಯ್ಯ ಕಿಡಿ
ಸಿ.ಟಿ. ರವಿಯದ್ದು ಗೂಂಡಾ ಸಂಸ್ಕೃತಿ, ಮನುಷ್ಯತ್ವ ಇಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಬೆರಿಕೆ ರಾಜಕಾರಣಿ ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಬೆರಕೆ ಅಂದ್ರೆ ಏನು, ಹಂಗಂದ್ರೆ ಏನು, ನಂಗೆ ಗೊತ್ತಿಲ್ಲ. ನೋಡಪ್ಪ ಸಿ.ಟಿ.ರವಿಗೆ ಕಲ್ಚರ್ ಇಲ್ಲಾ ಅವ್ನಿಗೆ. ಸಿ.ಟಿ.ರವಿಗೆ ಗೂಂಡಾ ಸಂಸ್ಕೃತಿ ಇದೆ, ಮನುಷ್ಯತ್ವ ಇಲ್ಲದಿರೋವ್ರು ಅವರೆಲ್ಲ. ಮನುಷ್ಯತ್ವ ಇಲ್ಲದಿರೋರು ಬಾಯಿಗೆ ಬಂದಂಗೆ ಮಾತನಾಡ್ತಾರೆ, ಮಾತನಾಡಲಿ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಾಜಿ ಬೀಳಗಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಉಪಸ್ಥಿತರಿದ್ದರು.