ಸಿದ್ದರಾಮಯ್ಯನವರೇ ಅಲ್ಲಿ ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಬೇಕಿತ್ತೇ?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡಿದ್ದಕ್ಕೆ ವಿರೋಧಿಸುವ ಸಿದ್ದರಾಮಯ್ಯನವರೇ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ..? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಡಕ್ ಪ್ರಶ್ನೆ ಕೇಳಿದ್ದಾರೆ

Want to install Dawood Ibrahim poster instead of Savarkar  Union Minister Pralhad Joshi questioned  siddaramaiah gow

ಬೆಂಗಳೂರು (ಡಿ.19): ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡಿದ್ದಕ್ಕೆ ವಿರೋಧಿಸುವ ಸಿದ್ದರಾಮಯ್ಯನವರೇ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ..? ಹೀಗೆ ವಿಪಕ್ಷ  ನಾಯಕ ಸಿದ್ದರಾಮಯ್ಯಗೆ ಖಡಕ್ ಪ್ರಶ್ನೆ ಕೇಳಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು ಸ್ವಾತಂತ್ರ್ಯ ವೀರ ವಿ.ಡಿ.‌ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡಿದ್ದನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯಗೆ ಈ ಮೂಲಕ  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ. 

ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸಿಗರಿಗೆ ರಾಜಕೀಯ ಸಿದ್ಧಾಂತ‌ದ ವಿಚಾರದಲ್ಲಿ ಭಿನ್ನಾಭಿಪ್ರಾಯ‌ಗಳನ್ನು ಹೊಂದಿರಬಹುದು. ಆದರೆ ರಾಷ್ಟ್ರಾಭಿಮಾನವನ್ನು ರಕ್ತದ ಕಣಕಣದಲ್ಲೂ ಮೈಗೂಡಿಸಿಕೊಂಡಿದ್ದ ವೀರ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ ಅನುಭವಿಸಿದ ಶಿಕ್ಷೆಯನ್ನ ಬೇರೆಯವರು ಯಾರೂ ಸಹ ಕಲ್ಪಿಸಿಕೊಳ್ಳೋದು ಅಸಾಧ್ಯ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿದ್ದ ಕಾಂಗ್ರೆಸ್‌ಗೂ ಈಗಿರುವ ಕಾಂಗ್ರೆಸ್‌ ಪಕ್ಷಕ್ಕೂ ಭಾರೀ ವ್ಯತ್ಯಾಸವಿದೆ. ಈಗ ಇರುವುದು ಡೂಪ್ಲಿಕೇಟ್ ಕಾಂಗ್ರೆಸ್ ಎಂದು ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಕ್ಕೂ-ಸಾವರ್ಕರ್‌ಗೂ ಏನ್‌ ಸಂಬಂಧ?:ಡಿಕೆಶಿ
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕರ್ನಾಟಕಕ್ಕೂ ಸಾವರ್ಕರ್‌ಗೂ ಏನ್‌ ಸಂಬಂಧ?, ಈ ವಿಚಾರದಲ್ಲಿ ಬಿಜೆಪಿ ಏಕಾಏಕಿ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ಸಾವರ್ಕರ್‌ ಫೋಟೋ ಅಳವಡಿಸುವ ವಿಚಾರದಲ್ಲಿ ಆಡಳಿತ ಪಕ್ಷದ ನಡೆ ಕುರಿತು ಅಸಮಾಧಾನ ಹೊರಹಾಕಿರುವ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರು, ವಿವಾದಗಳನ್ನು ಹುಟ್ಟುಹಾಕುವುದು ಬಿಜೆಪಿ ಸ್ವಭಾವ. ಸದನ ಆಡಳಿತ ಪಕ್ಷವೊಂದಕ್ಕೇ ಸೇರಿದ್ದಲ್ಲ. ಎಲ್ಲ ಪಕ್ಷಗಳಿಗೂ, ಎಲ್ಲ ಜನ-ಸಮುದಾಯಗಳಿಗೂ ಸೇರಿದ್ದು. ಇದು ಗೊತ್ತಿದ್ದರೂ ಬಿಜೆಪಿಯವರು ಸಾವರ್ಕರ್‌ ಫೋಟೋ ಅಳವಡಿಸುವ ವಿಚಾರದಲ್ಲಿ ಏಕಾಏಕಿ ತೀರ್ಮಾನ ತೆಗೆದುಕೊಂಡು ವಿವಾದ ಹುಟ್ಟುಹಾಕಿದ್ದಾರೆ. ಈ ಕುರಿತು ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Winter Assembly Session: ಸಾವರ್ಕರ್‌ ವಿಚಾರದಲ್ಲಿ 'ಸಾಫ್ಟ್‌' ರಾಜಕೀಯ: ಈ ವಿಚಾರವಾಗಿ ಸಿದ್ದು ಹೇಳಿದ್ದೇನು?

ಸಾವರ್ಕರ್‌ ಫೋಟೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಗಾಂಧಿ, ಅಂಬೇಡ್ಕರ್‌ ಅವರ ಭಾವಚಿತ್ರ ಅನಾವರಣ ಇದೆ ಎಂದು ಸ್ಪೀಕರ್‌ ಕಚೇರಿಯಿಂದ ಆಹ್ವಾನ ಬಂದಿದೆ ಅಷ್ಟೆ. ಉಳಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಅಷ್ಟಕ್ಕೂ ಸಾವರ್ಕರ್‌ ಅವರಿಗೂ ಕರ್ನಾಟಕಕ್ಕೆ ಏನ್‌ ಸಂಬಂಧ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದರು.

ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದೇ ಇಂದಿರಾ ಗಾಂಧಿ ಸರ್ಕಾರ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ನಿರೀಕ್ಷೆ ಇರಲಿಲ್ಲ: ಇನ್ನು ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಅನಾವರಣ ಮಾಡುತ್ತಾರೆ ಎನ್ನುವ ನಿರೀಕ್ಷೆಯನ್ನೇ ನಾವು ಮಾಡಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು. ಫೋಟೋ ಕುರಿತು ನನಗೆ ಈ ಕುರಿತು ಯಾವುದೇ ಆಹ್ವಾನ ಬಂದಿಲ್ಲ. ಚುನಾವಣಾ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios